Headlines

ಶಿವಮೊಗ್ಗ: ಆಡುತ್ತಿದ್ದ ಬಾಲಕನಿಗೆ ಉರುಳಾದ ಜೋಕಾಲಿ :

ಶಿವಮೊಗ್ಗ: ಜೋಕಾಲಿ ಆಡುವಾಗ ಸೀರೆ ಉರುಳಾಗಿ ಭರತ್ ಎಂಬ ಬಾಲಕ ಮೃತಪಟ್ಟಿರುವ ಘಟನೆ ಶಿವಮೊಗ್ಗದ  ಜಯನಗರದಲ್ಲಿ ನಡೆದಿದೆ. ಆಟವಾಡುತ್ತಿದ್ದಾಗ ಜೋಕಾಲಿ ಉರುಳಾಗಿ ಸುತ್ತಿಕೊಂಡ ಪರಿಣಾಮ ಸ್ಥಳದಲ್ಲಿಯೇ ಬಾಲಕ ಭರತ್(12) ಸಾವನ್ನಪ್ಪಿದ್ದಾನೆ. ಭದ್ರಾವತಿ ತಾಲೂಕು ಅರಹತೊಳಲಿನಿಂದ ಶಿವಮೊಗ್ಗದ ದಂತ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯಲು ಬಂದಿದ್ದ  ಭರತ್  ಎಂಬ 12 ವರ್ಷದ ಬಾಲಕನಿಗೆ ಜೋಕಾಲಿಯೇ ಜವರಾಯನಾಗಿ ಕಾಡಿದ್ದಾನೆ. ವೈದ್ಯರ ಬಳಿ ತೋರಿಸಿಕೊಂಡ ನಂತರ ಭರತ್ ತಾಯಿ ಜೊತೆ ಜಯನಗರದ ವಿಧಾತ್ರಿ ಕೆಫ಼ೆ ಬಳಿ ಇರುವ ತನ್ನ ಅತ್ತೆಯ…

Read More

ಗ್ರಾಪಂ ಅಧ್ಯಕ್ಷೆಯ ಅವಾಚ್ಯ ಪದಬಳಕೆಯ ಆಡೀಯೋ ವೈರಲ್ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಲಿ – ಹರತಾಳು ಹಾಲಪ್ಪ

ಗ್ರಾಪಂ ಅಧ್ಯಕ್ಷೆಯ ಅವಾಚ್ಯ ಪದಬಳಕೆಯ ಆಡೀಯೋ ವೈರಲ್ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಲಿ – ಹರತಾಳು ಹಾಲಪ್ಪ ರಿಪ್ಪನ್‌ಪೇಟೆ : ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಸದಸ್ಯರೊಬ್ಬರು ನಡೆಸಿದ್ದಾರೆನ್ನಲಾದ ವೀಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಹಾಗೂ ಪೊಲೀಸ್ ಇಲಾಖೆಯವರು ಸುಮೋಟ್ ಅಡಿ (ಸ್ವಯಂ ಪ್ರೇರಿತ) ದೂರು ದಾಖಲಿಸಿಕೊಂಡು ಬ್ಲಾಕ್‌ಮೇಲ್ ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ …

Read More

ರಿಪ್ಪನ್ ಪೇಟೆ ಪಟ್ಟಣದಲ್ಲಿ  ಸಡಗರ ಸಂಭ್ರಮದಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

ರಿಪ್ಪನ್ ಪೇಟೆ ಪಟ್ಟಣದಲ್ಲಿ  ಸಡಗರ ಸಂಭ್ರಮದಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ ರಿಪ್ಪನ್‌ಪೇಟೆ: ಪಟ್ಟಣದ ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು  ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಗ್ರಾಮ ಪಂಚಾಯತಿ, ನಾಡಕಛೇರಿ, ಪೊಲೀಸ್‌ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ರೈತಸಂಪರ್ಕ ಕೇಂದ್ರ, ಸರ್ಕಾರಿ ಬಿಸಿಎಂ ವಸತಿ ನಿಲಯ, ಪ್ರಥಮದರ್ಜೆ, ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಹಿರಿಯ, ಕಿರಿಯ ಶಾಲೆ, ಮೆಸ್ಕಾಂ, ಪಶುವೈದ್ಯಕೀಯ ಆಸ್ಪತ್ರೆ,  ಬ್ಯಾಂಕ್‌ಗಳು, ಅರಣ್ಯ ಇಲಾಖೆ, ಮೊಹಿಯುದ್ದೀನ್ ಜುಮ್ಮಾ ಮಸೀದಿ,ಗುಡ್…

Read More

ರಿಪ್ಪನ್ ಪೇಟೆ ಸಮೀಪದಲ್ಲಿ ಹಣವಿದ್ದ ಕಪ್ಪು ಬಣ್ಣದ ಬ್ಯಾಗ್ ಕಳೆದುಹೋಗಿದೆ : ಸಿಕ್ಕಿದ್ದಲ್ಲಿ ಹಿಂದಿರುಗಿಸುವಂತೆ ಮನವಿ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ವಿನಾಯಕ ವೃತ್ತದಲ್ಲಿ ಗುರುವಾರ ರಾತ್ರಿ ಸುಮಾರು 9.15 ರ ಅಸುಪಾಸಿನ ಸಮಯದಲ್ಲಿ ತೀರ್ಥಹಳ್ಳಿ ರಸ್ತೆಯಿಂದ ಹೊಸನಗರ ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದ ಮಿನಿ‌ ಟ್ರ್ಯಾಕ್ಟರ್ ನಲ್ಲಿ ಇದ್ದ ಕಪ್ಪು ಬಣ್ಣದ ಬ್ಯಾಗ್ ಕೆಳಗೆ ಬಿದ್ದು ಹೋಗಿದ್ದು ಅದರಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಇಟ್ಟಿದ್ದ 1ಲಕ್ಷದ 40 ಸಾವಿರ ರೂ ಹಣ ಹಾಗೂ ಕೆಲವೊಂದು ಉಪಯುಕ್ತ ದಾಖಲಾತಿಗಳಿದ್ದೂ  ಯಾರಿಗಾದರೂ ಸಿಕ್ಕಿದ್ದಲ್ಲಿ ಹಿಂತಿರುಗಿಸಬೇಕೆಂದು ಮಾಲೀಕರಾದ ಶ್ರೀಧರ್ ಅಲಸೆ ಇವರು ರಿಪ್ಪನ್ ಪೇಟೆ ಸುತ್ತಮುತ್ತಲಿನ…

Read More

ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ :

ರಿಪ್ಪನ್‌ಪೇಟೆ: ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ದ 55ನೇ ವರ್ಷದ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷರಾಗಿ ವೈ.ಜೆ.ಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪದಾದಿಕಾರಿಗಳ ವಿವರ : ನಾಗರಾಜ ಪವಾರ್, ರಾಜೇಶ್ ಎಲ್.ಕೆ, ಸಂದೀಪ್‌ಶೆಟ್ಟಿ, ರವಿಚಂದ್ರ, ಹೆಚ್.ಆರ್.ಆಶೋಕ್, (ಉಪಾಧ್ಯಕ್ಷ), ತೀರ್ಥಶ್ ಅಡಿಕಟ್ಟು (ಕಾರ್ಯಾಧ್ಯಕ್ಷರು), ಶ್ರೀಧರ್, ಲಕ್ಷ್ಮಣ ಬಳ್ಳಾರಿ (ಸಹ ಕಾರ್ಯದರ್ಶಿ), ಶ್ರೀನಿವಾಸ ಆಚಾರ್ ಗ್ಯಾರೇಜ್, ಮಂಜುನಾಥ ಅಚಾರ್, ರಾಘವೇಂದ್ರ…

Read More

SHIVAMOGGA | ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ

SHIVAMOGGA | ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ ಯಾದಗಿರಿ ಜಿಲ್ಲೆಯ (Yadgir News) ನಗರದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು (9th student) ವಸತಿ ಶಾಲೆಯ ಶೌಚಾಲಯದಲ್ಲಿ (School toilet) ಗಂಡು ಮಗುವಿಗೆ ಜನ್ಮ (Delivery) ನೀಡಿದ ಘಟನೆ  ಇನ್ನೂ ಮಸಕಾಗಿಲ್ಲದೇ ಇರುವಾಗ, ಶಿವಮೊಗ್ಗದಲ್ಲೂ ಇದೇ ರೀತಿಯ ಆಘಾತಕಾರಿ ಪ್ರಕರಣ ಹೊರಬಿದ್ದಿದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 15 ವರ್ಷದ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ಪ್ರಸವ…

Read More

ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆಯ ಗಾನಕೋಗಿಲೆ ಪ್ರಣತಿ ಅಣ್ಣಪ್ಪ

ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆಯ ಗಾನಕೋಗಿಲೆ ಪ್ರಣತಿ ಅಣ್ಣಪ್ಪ ರಿಪ್ಪನ್ ಪೇಟೆ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗಾನಕೋಗಿಲೆ ಪ್ರಣತಿ ಅಣ್ಣಪ್ಪ ಇಂದು ರಾಮನಗರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಭಾಗಿಯ ಮಟ್ಟದ  ಸಾಂಸ್ಕೃತಿಕ  ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವ ಗೀತೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಣತಿ ಅಣ್ಣಪ್ಪ ಭಾವಗೀತೆಯಲ್ಲಿ ವಿಭಾಗಿಯ ಮಟ್ಟದಲ್ಲಿ  ದ್ವಿತೀಯ ಸ್ಥಾನ ಪಡೆದುಕೊಳ್ಳುವುದರ ಮೂಲಕ…

Read More

Ripponpete | ಪಟ್ಟಣದಲ್ಲಿ ಅಬ್ಬರಿಸಿದ ಮಳೆರಾಯ – ಹೋಂಡಾ ಶೋರೂಂ , ಮನೆಗಳಿಗೆ ನುಗ್ಗಿದ ನೀರು

Ripponpete | ಪಟ್ಟಣದಲ್ಲಿ ಅಬ್ಬರಿಸಿದ ಮಳೆರಾಯ – ಹೋಂಡಾ ಶೋರೂಂ , ಮನೆಗಳಿಗೆ ನುಗ್ಗಿದ ನೀರು ರಿಪ್ಪನ್‌ಪೇಟೆ : ಪಟ್ಟಣದಾದ್ಯಂತ ಜೋರು ಮಳೆಯಾಗುತ್ತಿದ್ದು ಹಲವು ಕಡೆ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿರುವ ಘಟನೆ ನಡೆದಿದೆ. ಸಾಗರ ರಸ್ತೆಯ ಕಾಮಗಾರಿ ನಡೆಯುತಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಬದಿಯ ಮನೆ, ಅಂಗಡಿಗಳಿಗೆ ನುಗ್ಗಿ ಆವಾಂತರ ಸೃಷ್ಟಿಯಾಗಿದೆ. ಸಾಗರ ರಸ್ತೆಯ ಹೋಂಡಾ ಬೈಕ್ ಶೋರೂಮ್ ಗೆ ನೀರು ನುಗ್ಗಿದ್ದು ಹಲವಾರು ಬೈಕ್ ಗಳು ಜಲಾವೃತ್ತಗೊಂಡಿವೆ,…

Read More

Accident | ಟಿಪ್ಪರ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ – ಓರ್ವ ಸ್ಥಳದಲ್ಲಿಯೇ ಸಾವು

Accident | ಟಿಪ್ಪರ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ – ಓರ್ವ ಸ್ಥಳದಲ್ಲಿಯೇ ಸಾವು  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿಯ ಮಂದಾರ್ತಿ ಗ್ರಾಂಡ್ ಹೊಟೇಲ್ ಎದುರು ನಿಂತಿರುವ ಟಿಪ್ಪರ್ ಗೆ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಲ್ಲಿದ್ದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ದೊಡ್ಡಮನೆಕೇರಿಯ ಸಲ್ಮಾನ್ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸಲ್ಮಾನ್ ಕ್ಯಾಂಟರ್ ಒಳಗೆ ಮಲಗಿದ್ದು ಈ ವೇಳೆ ಕ್ಯಾಂಟರ್ ಡ್ರೈವರ್ ನಿಯಂತ್ರಣ ತಪ್ಪಿ ಟಿಪ್ಪರ್ ಗೆ ಡಿಕ್ಕಿ…

Read More

Ripponpete | ಹಾಲುಗುಡ್ಡೆ ಘಂಟೆ ದೇವರಾಜ್ ಗೌಡ ನಿಧನ

ರಿಪ್ಪನ್‌ಪೇಟೆ : ಇಲ್ಲಿನ ಬಾಳೂರು ಗ್ರಾಪಂ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಘಂಟೆ  ದೇವರಾಜ್ ಗೌಡ(74) ರವರು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದ ಹಾಲುಗುಡ್ಡೆ ಘಂಟೆ ದೇವರಾಜ್ ಗೌಡ ರವರು ಬುಧವಾರ ಬೆಳಗಿನ ಜಾವ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಸಹೋದರರು ,ಓರ್ವ ಸಹೋದರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಮೃತರ ಜಮೀನಿನಲ್ಲಿ ನೆರವೇರಿದೆ.

Read More
Exit mobile version