Headlines

ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಅಂದರ್ ಬಾಹರ್!!! – ಹಲವರು ವಶಕ್ಕೆ..!!|crime news

ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಅಂದರ್ ಬಾಹರ್!!! – ಹಲವರು ವಶಕ್ಕೆ..!! ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅದ್ದೂರಿ ಜಾತ್ರೆ ನಡೆಯುತ್ತಿದೆ. ನೂರಾರು ಕಡೆಗಳಿಂದ ಈ ಜಾತ್ರೆಗೆ ಸಾವಿರಾರು ಮಂದಿ ಬಂದಿದ್ದಾರೆ. ಆದರೆ ಜಾತ್ರೆಯಲ್ಲಿ ಇಸ್ಪೀಟ್ ಅಂದರ್ ಬಾಹರ್ ಶುರುವಾಗಿದ್ದು ಜನರನ್ನು ಆಡಿಸುವ ಮೂಲಕ ಅಲ್ಪ ಸ್ವಲ್ಪ ಹಣವನ್ನು ಖಾಲಿ ಮಾಡಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬೆಜ್ಜವಳ್ಳಿ ಜಾತ್ರೆಯಲ್ಲಿ ಕೆಲವು ವ್ಯಕ್ತಿಗಳು ಇಸ್ಪೀಟ್ ಆಟವನ್ನು ಬಹಿರಂಗವಾಗಿಯೇ ಆಡಿಸಿದ್ದಾರೆ. ದೇವಸ್ಥಾನದ…

Read More

Accident | ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿ ಹೊಡೆದ ಕಾರು – ಇಬ್ಬರಿಗೆ ಸಣ್ಣ ಪುಟ್ಟ ಗಾಯ ತೀರ್ಥಹಳ್ಳಿ : ಶನಿವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮನೆಗೆ ಡಿಕ್ಕಿ ಘಟನೆ ಪಟ್ಟಣದ ಭಾರತೀಪುರ ತಿರುವಿನಲ್ಲಿ ನೆಡೆದಿದೆ. ಇಬ್ಬರು ಇಂಜಿನಿಯರ್ ಗಳು ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಭಾರತೀಪುರ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಕ್ಷ್ಮಣ ಭಟ್  ಎಂಬುವರ ಮನೆಯ ಮುಂಭಾಗದ ಹಂಚಿಗೆ ಡಿಕ್ಕಿ ಹೊಡೆದು ಮನೆಯ ಅಂಗಳದಲ್ಲಿ ಮಹೇಂದ್ರ ನೆಕ್ಸ 300 ಕಾರು ಪಲ್ಟಿ…

Read More

ಪತ್ನಿಯ ಕುತ್ತಿಗೆಗೆ ಕತ್ತಿ ಬೀಸಿದ ಪತಿರಾಯ – ಚಿಕಿತ್ಸೆ ಫಲಿಸದೇ ಪತ್ನಿ ಸಾವು| Crime News

ಪತ್ನಿಯ ಕುತ್ತಿಗೆಗೆ ಕತ್ತಿ ಬೀಸಿದ ಪತಿರಾಯ – ಚಿಕಿತ್ಸೆ ಫಲಿಸದೇ ಪತ್ನಿ ಸಾವು| Crime News ಕೌಟುಂಬಿಕ ಕಲಹದಿಂದಾಗಿ ಪತಿಯೊಬ್ಬ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ (Murder Case) ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುದರೂರು‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಗ್ರಾಮದಲ್ಲಿ ನಡೆದಿದೆ. ನೀಲಾವತಿ (42) ಮೃತ ದುರ್ದೈವಿಯಾಗಿದ್ದಾರೆ. ನೀಲಾವತಿ ಹಾಗೂ ಪತಿ ಲೋಕೇಶ್‌ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ನಿತ್ಯವು ಮನೆಯಲ್ಲಿ ಗಲಾಟೆ ಇದ್ದೆ…

Read More

ರಿಪ್ಪನ್‌ಪೇಟೆ : ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಡಿಸಿದ ಶಾಲಾ ಯುವ ಸಂಸತ್ ಚುನಾವಣೆ

ರಿಪ್ಪನ್ ಪೇಟೆ : ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ಯುವ ಸಂಸತ್ ಚುನಾವಣೆಯನ್ನು ವಿಭಿನ್ನವಾಗಿ ರಿಪ್ಪನ್ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಮತದಾನಕ್ಕೆ ಸರ್ಕಾರ ಹದಿನೆಂಟು ವಯೋಮಿತಿ ನಿಗದಿ ಪಡಿಸಿದೆ ಆದರೆ ಮೊದಲ ಮತದಾನ ಮಾಡುವಾಗ ಯುವ ಮತದಾರರಲ್ಲಿ ಆತಂಕ ದುಗುಡ ಎದ್ದುಕಾಣುತ್ತದೆ ಕೆಲವರು ಅಂಜಿಕೆಯಿಂದಲೇ ಮತದಾನದಿಂದ ಹಿಂದೆ ಜರುಗುವುದು ಹೆಚ್ಚು ಇದನ್ನು ಗಮನದಲ್ಲಿಟ್ಟುಕೊಂಡು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿದೆಸೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ತರಗತಿ…

Read More

ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿ ಡಾ.ಎಸ್ ರಾಮಪ್ಪ ರವರಿಗೆ ತರಳಿ ಶ್ರೀ ಪ್ರಶಸ್ತಿ :

ಮಲೆನಾಡಿನ ಹೆಸರಾಂತ ಶಕ್ತಿ ಕೇಂದ್ರವಾದ ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದ ಧರ್ಮಾಧಿಕಾರಿ ಡಾ ಎಸ್ ರಾಮಪ್ಪನವರಿಗೆ ತರಳಿ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ತರಳಿ ಮಠದಿಂದ ಕಳೆದ ಹಲವು ದಶಕಗಳಿಂದ ರಾಮಪ್ಪನವರ ಸಾಮಾಜಿಕ,ಸಾಂಸ್ಕ್ರತಿಕ, ಧಾರ್ಮಿಕ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕಾರ್ತಿಕೇಯ ಮಠದ ಯೋಗೆಂದ್ರ ಶ್ರೀಗಳ ಸಮ್ಮುಖದಲ್ಲಿ ರಾಮಪ್ಪ ನವರು ಪ್ರಶಸ್ತಿ ಪಡೆದರು. ಶಕ್ತಿ ಕೇಂದ್ರ ಸಿಗಂದೂರಿನ ಹಿನ್ನಲೆ ::  ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ ಪಡೆದು ಕೊಂಡಿರುವ…

Read More

ಐವತ್ತಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ – ನೋವಿನಲ್ಲಿಯೂ ಎರಡು ವರ್ಷದ ಮಗುವನ್ನು ರಕ್ಷಿಸಿದ ಬಾಲಕ | honey bee attacks

ಐವತ್ತಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ – ನೋವಿನಲ್ಲಿಯೂ ಎರಡು ವರ್ಷದ ಮಗುವನ್ನು ರಕ್ಷಿಸಿದ ಬಾಲಕ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಾಬಳ್ಳಿ ಎಂಬಲ್ಲಿ ನಡೆದಿದೆ. ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಸಿದ್ದತೆ ವೇಳೆ ಈ ಘಟನೆ ನಡೆದಿದ್ದು, ಜಾತ್ರೆ ಹಿನ್ನೆಲೆ ಗಂಗೆ ಪೂಜೆ ಮಾಡಲು ಜನ ಹೊರಟ್ಟಿದ್ದ ವೇಳೆ ಈ ಅನಾಹುತ ನಡೆದಿದೆ. ನಾಳೆ ನಡೆಯಲಿರುವ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರು ಗಂಗೆಪೂಜೆಗೆ ಹೋಗುವ…

Read More

ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಪುನೀತ್ ಬೆಳ್ಳೂರು ನೇಮಕ :

ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಶಿವಮೊಗ್ಗ ಜಿಲ್ಲಾ ಸಂಘಟನ ಕಾರ್ಯದರ್ಶಿಯಾಗಿ ಪತ್ರಕರ್ತ ಪುನೀತ್ ಬೆಳ್ಳೂರು ಅವರನ್ನ ಆಯ್ಕೆ ಮಾಡಿ   ರಾಜ್ಯ ಅಧ್ಯಕ್ಷರಾದ ಸತ್ಯಜಿತ್‌ ಸುರತ್ಕಲ್ ಅದೇಶ ಹೊರಡಿಸಿದ್ದಾರೆ. ನೂತನ ಹುದ್ದೆ ಅಲಂಕರಿಸಿದ ಪುನೀತ್ ಬೆಳ್ಳೂರು ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿ ಸಂಘಟನೆಯು ನನಗೆ ಅತ್ಯಂತ ಜವಾಬ್ದಾರಿ ಹುದ್ದೆಯನ್ನ ನೀಡಿದೆ,ಹಾಗೂ ನನ್ನನ್ನು ಗುರುತಿಸಿದ ಶಿವಮೊಗ್ಗ ಜಿಲ್ಲಾ ಸಮಿತಿಗೆ ನಾನು ಧನ್ಯವಾದ ತಿಳಿಸುತ್ತೇನೆ,ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಈಗಾಗಲೇ ಹಲವು ಸಮಾಜ ಮುಖಿ ಕೆಲಸ ಮಾಡುತ್ತ…

Read More

ಯುವಕನ ಮೇಲೆ ಪೊಲೀಸರಿಂದ ಹಲ್ಲೆ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ|assault

ಶಿಕಾರಿಪುರ : ಪೊಲೀಸರು ಯುವಕನ‌ ಮೇಲೆ ಹಲ್ಲೆ ನೆಡೆಸಿದ್ದಾರೆ ಎಂದು ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಅರಶಿಣಗೆರೆಯಲ್ಲಿ ನೆಡೆದಿದೆ.   ಅರಶಿಣಗೆರೆ ಸಚ್ಚಿನ್‌ (24) ವಿಷ ಸೇವಿಸಿದ ಯುವಕ. ಕಳೆದ ಎರಡು ದಿನಗಳ ಹಿಂದೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯುವಕನ ಮೇಲೆ ಏಕಾಏಕಿ ಪೊಲೀಸರು ಹಲ್ಲೆ ಮಾಡಿದ್ದೂ ಊರಿನ ಜನರ ಮುಂದೆ ಅವಮಾನ ಸಹಿಸದೆ ಯುವಕ ಸಚಿನ್ ವಿಷ ಸೇವನೆ ಮಾಡಿದ್ದಾನೆ. ವಿಷಯ ತಿಳಿದ ತಕ್ಷಣ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ…

Read More

ಸಾಗರ ಹೊಸನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ

ಸಾಗರ ಹೊಸನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ಶಿವಮೊಗ್ಗ: ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ಕ್ಷೇತ್ರದ ಮನೆ, ರಸ್ತೆಗಳು ಹಾನಿಗೊಂಡಿವೆ‌.ಸದರಿ ಪ್ರದೇಶಗಳಿಗೆ ತತ್ತಕ್ಷಣ ಭೇಟಿ ನೀಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ವಿದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು ಶಾಸಕರ ಆಪ್ತ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ…

Read More

ಹೊಸ ವರ್ಷದ ಹೊಸ್ತಿಲಲ್ಲಿ ಯುವಕರು ಹಾಗೂ ವಾಹನ ಚಾಲಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ :|accident awareness

ಯುವಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ : ಹೊಸ ವರ್ಷದ ಸಮಯದಲ್ಲಿ ವಾಹನ ಚಾಲನೆಯಲ್ಲಿ ಆತುರ ಬೇಡ ಯುವಕರೇ….. ನಮ್ಮ ಮಲೆನಾಡಿನಲ್ಲಿ ಕಳೆದ ಹಲವಾರು ದಿನಗಳಿಂದ ರಸ್ತೆ ಅಪಘಾತಗಳಿಂದ ಸಾಕಷ್ಟು ಯುವಕರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸಿ ಕೆಲವರು ಮೃತಪಟ್ಟರೆ ಇನ್ನು ಕೆಲವರು ಮದ್ಯಪಾನ ಮಾಡಿ ಅಪಘಾತವೆಸಗಿ ತಾವು ಬಲಿಯಾಗುವುದಲ್ಲದೆ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ. ಈಗಿನ ಸಮಯದಲ್ಲಿ ಗಾಂಜಾ ಎಂಬ ಅಮಲು ಪದಾರ್ಥ ಯುವಕರ ಮನಸ್ಥಿತಿ ಹಾಗೂ ಮನೆ ಸ್ಥಿತಿಯನ್ನು…

Read More
Exit mobile version