ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿದ್ದ ಟ್ರಾಕ್ಟರ್ ಕಳ್ಳತನದ ಆರೋಪಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಎಸ್ಕೇಪ್!!!!!!
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿದ್ದ ಕಳ್ಳತನದ ಆರೋಪಿಯೊಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ಕಳೆದ ಶನಿವಾರದಂದು ರಾತ್ರಿ ಸಾಗರ ರಸ್ತೆಯ ವಡಗೆರೆಯಲ್ಲಿರುವ ಉದ್ಯಮಿ ವೆಂಕಪ್ಪ ಶೆಟ್ಟಿ ರವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನವಾಗಿತ್ತು.ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ CR 66/22, IPC 379 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಟ್ರಾಕ್ಟರ್ ಕಳ್ಳತನದ ಸಂಶಯದ ಮೇಲೆ ವಡಗೆರೆಯ ನಿವಾಸಿ ಪ್ರತಾಪ್…


