Ripponpete | ಧರ್ಮ ಜಾಗೃತಿಗಾಗಿ ಶ್ರೀಶೈಲ ಜಗದ್ಗುರು ನಡಿಗೆ ಮಲೆನಾಡ ಕಡೆಗೆ
Ripponpete | ಧರ್ಮ ಜಾಗೃತಿಗಾಗಿ ಶ್ರೀಶೈಲ ಜಗದ್ಗುರು ನಡಿಗೆ ಮಲೆನಾಡ ಕಡೆಗೆ ರಿಪ್ಪನ್‌ಪೇಟೆ: ಗುರು-ವಿರಕ್ತವರ್ಗ ಬೇರೆಬೇರೆ ಎಂಬ ಭಾವನೆ ಸರಿಯಾದುದಲ್ಲ. ಗುರು-ವಿರಕ್ತ ಪರಂಪರೆ ಒಂದೇ ಆಗಿದ್ದು, ಸಮಾಜದ ಧಾರ್ಮಿಕ ಭಾವನೆಗೆ ಎರಡೂ ಕಣ್ಣುಗಳಿದ್ದಂತೆ ಎಂಬ ಹಿನ್ನೆಲೆಯಲ್ಲಿ ಧರ್ಮದ ಪ್ರಬೋದನೆ ಮತ್ತು ಧರ್ಮ ಜಾಗೃತಿ ಸಾರುವ ನಿಟ್ಟಿನಲ್ಲಿ ಗುರು-ವಿರಕ್ತರು ಸಮಾಗಮಗೊಳ್ಳುತ್ತಿರುವುದಾಗಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ಪಟ್ಟಣದ ಸಮೀಪದ ಬೆಳಕೋಡು ಹಾಲಸ್ವಾಮಿಗೌಡರು ಮಂಗಳವಾರ ಆಯೋಜಿಸಲಾಗಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮಜಾಗೃತಿ ಸಮಾರಂಭದ ದಿವ್ಯಸಾನಿಧ್ಯವಹಿಸಿ…


