ದೇಶದಲ್ಲಿ ಹಿಂದೂ ಮುಸ್ಲಿಂ ಇಬ್ಬರೂ ಸಹೋದರರಂತೆ ಬಾಳಬೇಕು ಎನ್ನುವುದು ಎಲ್ಲರ ಆಶಯ : ಶಾಸಕ ಹರತಾಳು ಹಾಲಪ್ಪ
ಸಾಗರ: ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ನೀವು ಪಾಕ್‌ಗೆ ಹೋಗಿ ಎನ್ನುವುದು ಅನಿವಾರ್ಯವಾಗುತ್ತದೆ. ಹಿಂದೂ ಮುಸ್ಲಿಂ ಇಬ್ಬರ ಬಾಂಧವ್ಯ ಬೆಸೆಯಬೇಕಾದರೆ ಭಾರತ ನಮ್ಮ ಮಾತೃಭೂಮಿ ಎಂದು ಒಪ್ಪಿಕೊಳ್ಳುವುದು ಅಗತ್ಯ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಹೇಳಿದ್ದಾರೆ. ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಫಲಾನುಭವಿಗಳಿಗೆ ವಸತಿ ಕಾಮಗಾರಿ ಕಾರ್ಯಾದೇಶ ಮತ್ತು ಶೇ. 5 ಯೋಜನೆಯಡಿ ಬುದ್ಧಿಮಾಂದ್ಯ ಮಕ್ಕಳ ಪೋಷಕರಿಗೆ ಭದ್ರತಾ ಠೇವಣಿ ಬಾಂಡ್ ವಿತರಣೆ ಮಾಡಿ ಅವರು ಮಾತನಾಡಿದರು. ಮೋದಿಯವರು ದೇಶದ ಸಮಗ್ರತೆಗಾಗಿ…


