ಯಾವುದೇ ಕಾರಣಕ್ಕೂ ಮುಸ್ಲಿಂ ಮತ ಕೇಳಲ್ಲ – ಕೆ ಎಸ್ ಈಶ್ವರಪ್ಪ
ಶಿವಮೊಗ್ಗ : ನಾನು ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ಮುಸ್ಲೀಂ ಜನರ ಬಳಿ ಮತ ಕೇಳುವುದಿಲ್ಲವೆಂದು ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಮುಸ್ಲೀಂ ಮತಗಳ ಮೇಲೆ ಬಿಜೆಪಿ ಅವಲಂಬಿತವಾಗಿಲ್ಲ. ನಾನಂತು ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಮುಸ್ಲೀಂ ಜನರ ಮತವನ್ನ ಕೇಳೊಲ್ಲ. 60 ಬೂತ್ ಗಳಲ್ಲಿ ಮುಸ್ಲೀಂ ಮತಗಳು ಬಿದ್ದಿವೆ. ಆದರೆ ವಿರೋಧ ಪಕ್ಷಗಳು ಮುಸ್ಲೀಂ ಮತಗಳ ಮೇಲೆ ಕಣ್ಣಿಟ್ಟು ಅವರನ್ನ ಓಲೈಸುತ್ತಿದೆ. ಹಾಗಾಗಿ ಆರ್ ಎಸ್ ಎಸ್ ನ್ನ ಬೈದರೆ…


