Headlines

ಬಸವಪುರ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ನಾಲೆ ಕುಸಿತ:

ರಿಪ್ಪನ್ ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯ ಕಾರಣದಿಂದ ಕಡೆ ಗೆದ್ದೆ ಪಿಕಪ್ ನಾಲೆಯಿಂದ ಕೋಣನ ಜಡ್ಡು ಮಾರ್ಗವಾಗಿ ಬಸವಪುರ ಗ್ರಾಮದಲ್ಲಿರುವ ನಾಲೆಯು ಕುಸಿದಿದ್ದು ಬಸವಪುರ ಗ್ರಾಮದ ನೂರಾರು ಎಕರೆ ಜಮೀನುಗಳಿಗೆ ನೆಟ್ಟಿ ಮಾಡಲು ನೀರು ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.  ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾನಗೋಡು ಉಮಾಕರ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಲಗೋಡು ರತ್ನಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ…

Read More

ಒಂದೇ ಕುಟುಂಬದ ಮೇಲೆ ಎರೆಡೆರಡು ಬಾರಿ ಹೆಜ್ಜೇನು ದಾಳಿ – ಏಳು ಮಂದಿಗೆ ಗಾಯ , ಓರ್ವನ ಸ್ಥಿತಿ ಗಂಭೀರ

ಒಂದೇ ಕುಟುಂಬದ ಮೇಲೆ ಎರೆಡೆರಡು ಬಾರಿ ಹೆಜ್ಜೇನು ದಾಳಿ – ಏಳು ಮಂದಿಗೆ ಗಾಯ , ಓರ್ವನ ಸ್ಥಿತಿ ಗಂಭೀರ ಹೊಸನಗರ : ಒಂದೇ ಕುಟುಂಬದ ಮೇಲೆ ಎರಡೆರಡು ಬಾರಿ ಹೆಜ್ಜೇನು ದಾಳಿಯಾಗಿ 7 ಮಂದಿ ಗಾಯಗೊಂಡು ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ಶನಿವಾರ ನಡೆದಿದೆ. ಶನಿವಾರ ಬೆಳಗ್ಗೆ ಚಿಕ್ಕಪೇಟೆ ಸೇತುವೆ ಬಳಿಯ ಬಾಷಾ ಎಂಬುವವರ ಮನೆ ಸಮೀಪ ಬಾಷಾ, ಅವರ ಪತ್ನಿ ಆಸ್ಮಾ, ಇಬ್ಬರು ಮಕ್ಕಳಾದ ಆರೀಫ್ ಮತ್ತು ಅನೀಫ್…

Read More

ಹೊಸಮನೆ ಪೊಲೀಸ್ ಠಾಣೆಯ ಪೇದೆಯ ವಿರುದ್ದ ಮಹಿಳೆಯಿಂದ ದೂರು ದಾಖಲು :

ಹೊಸಮನೆ ಪೊಲೀಸ್ ಠಾಣೆಯ ಪೇದೆಯೋರ್ವನ ವಿರುದ್ಧ ಮಹಿಳೆಯೋರ್ವರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 10 ವರ್ಷದಿಂದ ನನ್ನೊಂದಿಗೆ ಮದುವೆ ಇಲ್ಲದೆ ಸಂಸಾರ ನಡೆಸಿ ಈಗ ಮತ್ತೊಂದು ಮಹಿಳೆಯನ್ನ ಮದುವೆಯಾಗುವುದಾಗಿ ಎಂಗೇಜ್ ಮೆಂಟ್ ಮಾಡಿಕೊಂಡು ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಎಫ್ ಐ ಆರ್‌ ದಾಖಲಿಸಿದ್ದಾರೆ. ಹೊಸಮನೆ ಠಾಣೆಯ ಕೆಲಸ ಮಾಡುವ ಮಕ್ಸದ್ ಖಾನ್ ವಿರುದ್ಧ ಜಯಶ್ರೀ ವೃತ್ತದ ಮೊದಲನೇ ತಿರುವಿನ ನಿವಾಸಿ ಆಯೇಷಾ ಕೌಸರ್ ಎಂಬ ಮಹಿಳೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಬ್ದುಲ್…

Read More

ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ ಬಿಜೆಪಿಗೆ ಸೇರ್ಪಡೆ:

ರಿಪ್ಪನ್ ಪೇಟೆ : ಪಟ್ಟಣದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ ರವರು ಇಂದು ಬಿಜೆಪಿಗೆ ಸೇರ್ಪಡೆಗೊಂಡರು.  ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ವಾರ್ಡ್ ನಂಬರ್ 1 ರಿಂದ ಆಯ್ಕೆಯಾದ ಮಹಾಲಕ್ಷ್ಮಿ ಅಣ್ಣಪ್ಪ. ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗ ಸದಸ್ಯರಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇಂದು ಸಾಗರದಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗೃಹಮಂತ್ರಿ ಆರಗ ಜ್ಞಾನೇಂದ್ರ. ಸಾಗರ ಹೊಸನಗರ…

Read More

ಬೆಂಗಳೂರು ಪೊಲೀಸರಿಗೆ ತೀರ್ಥಹಳ್ಳಿಯ ಗಾಂಧಿಚೌಕದಲ್ಲಿ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ನಟೋರಿಯಸ್ ಕ್ರಿಮಿನಲ್ ಮೋಹಿತ್ ಬಂಧನ :

ತೀರ್ಥಹಳ್ಳಿ : ಕೆಲವು ದಿನಗಳ ಹಿಂದೆ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕದಲ್ಲಿ ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೈಮರ ಮೋಹಿತ್  ಎಂಬುವ ನಟೋರಿಯಸ್ ನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ತೀರ್ಥಹಳ್ಳಿ ತುಂಗಾ ಕಾಲೇಜು ಸಮೀಪ ಬದನೇ ಹಿತ್ಲು  ನಿವಾಸಿ ಸಕೇಶ್ ಬಿನ್ ಕೃಷ್ಣ ಶೆಟ್ಟಿ ರವರನ್ನು .ಮೋಹಿತ್ ಮತ್ತು ಆತನ ಸಹಚರರಾದ ಉದಯ ಹಾಗೂ ಅನ್ಸರ್ ಎಂಬುವರು ಅಡ್ಡಗಟ್ಟಿ ದರೋಡೆಗೆ ಪ್ರಯತ್ನಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಸಕೇಶ್  ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸರು…

Read More

ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ : ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ‌ನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ

ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ  ಮುನೀರ್ ಸಖಾಫಿ ಮತ್ತು ಮೆಹಬೂಬ್ ಆಲಾಮ್ ರವರ ನೇತೃತ್ವದಲ್ಲಿ  ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಸೋಮವಾರ ಚಂದ್ರನ ದರ್ಶನ ಆದ ಹಿನ್ನೆಲೆಯಲ್ಲಿ  ಇಂದು…

Read More

ಡಾ. ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ

ಡಾ. ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ ಶಿವಮೊಗ್ಗ : ಜ. 3: ಹೊಸ ವರ್ಷದ ದಿನದಂದು  ವಿಧಾನ ಪರಿಷತ್ ಸದಸ್ಯ ಡಾ!! ಧನಂಜಯ ಸರ್ಜಿ  ಹೆಸರಿನಲ್ಲಿ, ದುಷ್ಕರ್ಮಿಗಳು ಶಿವಮೊಗ್ಗದ ಮೂವರು ಪ್ರಮುಖರಿಗೆ ಕೋರಿಯರ್ ಮೂಲಕ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನಿಸಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ!!  ಅರವಿಂದ್ ಹಾಗೂ ಡಾ!! ಕೆ ಎಸ್ . ಪವಿತ್ರ ಅವರಿಗೆ ತಮ್ಮ ಹೆಸರಿನಲ್ಲಿ ಸ್ವೀಟ್ ಬಾಕ್ಸ್…

Read More

ಕಾರು ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಕಾರು : ಚಾಲಕ ಸ್ಥಳದಲ್ಲಿಯೇ ಸಾವು

ತೀರ್ಥಹಳ್ಳಿ ಸಮೀಪದ ಮುಡುಬ ಬಳಿ ಸ್ವಿಫ್ಟ್ ಕಾರ್ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತರೀಕೆರೆ ನಿವಾಸಿ ವಕೀಲರಾದ ಸಂಪತ್ ಕುಮಾರ್ (50) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುಡುಬಾ ಹತ್ತಿರದ ತಿರುವಿನಲ್ಲಿ ಅತೀ ವೇಗದಿಂದ ಚಲನೆ ಮಾಡುತ್ತಿದ್ದ ಸ್ವಿಫ್ಟ್ ಡಿಜ಼ೈರ್ ಕಾರ್ ಚಾಲಕನ ನಿಯಂತ್ರಣಕ್ಕೆ ಸಿಗದೇ ತೋಟಕ್ಕೆ ಹಾರಿದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಟ್ಟಿದ್ದಾರೆ. ಸಂಪತ್ ಕುಮಾರ್ ರವರ ಮಗನಿಗೆ ಪಡುಬಿದ್ರೆ ಸಮೀಪದ ಆಳ್ವಾಸ್ ಕಾಲೇಜಿನಲ್ಲಿ ದಾಖಲಾತಿ ಮಾಡಿಸಿ ಹಿಂದಿರುಗುತ್ತಿರುವಾಗ ಈ ಘಟನೆ…

Read More

SSLC RESULT | ಹೊಸನಗರದ ಗುರೂಜಿ ಇಂಟರ್ ನ್ಯಾಷನಲ್ ಶಾಲೆಗೆ ಸತತ 9ನೇ ಬಾರಿಗೆ 100% ಫಲಿತಾಂಶ

SSLC ಪರೀಕ್ಷೆಯಲ್ಲಿ ಹೊಸನಗರದ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಶಿಡೆನ್ಶಿಯಲ್ ಸ್ಕೂಲ್ ಗೆ ಸತತ 9ನೇ ಬಾರಿಗೆ 100 ರ ಫಲಿತಾಂಶ. 22-2023ನೇ ಸಾಲಿನ ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ ಒಟ್ಟು  22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 6ಜನ ವಿದ್ಯಾರ್ಥಿಗಳು A+ ಶ್ರೇಣಿ .12 ಜನ ವಿದ್ಯಾರ್ಥಿಗ ಳು Aಶ್ರೇಣಿಯಲ್ಲಿ B+ ಶ್ರೇಣಿಯಲ್ಲಿ ಒಬ್ಬರು Bಶ್ರೇಣಿಯಲ್ಲಿ 3ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ 100ಫಲಿತಾಂಶ ತಂದಿದ್ದಾರೆ. ಶ್ರೀ ಗುರೂಜಿ ಇಂಟರ್ನ್ಯಾಷನಲ್ ರೆಸಿಡೆನ್ಸಿ ಸ್ಕೂಲ್ ಹೊಸನಗರ  ಶೇಕಡ…

Read More

ಅಕ್ಕಿ ಉದ್ಯಮಿ ನಾಗರಾಜ್ ಭಗತ್ ನಿಧನ

ಅಕ್ಕಿ ಉದ್ಯಮಿ ನಾಗರಾಜ್ ಭಗತ್ ನಿಧನ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಕಳೆದ 5 ದಶಕದಿಂದ ಅಕ್ಕಿ ಹಾಗೂ ಭತ್ತ ವ್ಯಾಪಾರ ನಡೆಸುತ್ತಿದ್ದ ತೀರ್ಥಹಳ್ಳಿ ರಸ್ತೆಯ ನಿವಾಸಿ ಎಸ್. ನಾಗರಾಜ್ ಭಗತ್ (82) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ. ಮೃತರ ಅಂತ್ಯಕ್ರಿಯೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ನೆರವೇರಿತು.

Read More
Exit mobile version