Headlines

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ – ಚೇತನ ಆರ್.ಪಿ.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ – ಚೇತನ ಆರ್.ಪಿ. ರಿಪ್ಪನ್ ಪೇಟೆ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮತ್ತು ಪ್ರತಿಭೆ ಅಪಾರವಾಗಿದೆ. ಪೋಷಕರು ಹಾಗೂ ಶಿಕ್ಷಕರು ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ, ಮುಂದಿನ ದಿನಗಳಲ್ಲಿ ಅವರು ಉತ್ತಮ ಪ್ರಜೆಗಳಾಗಿ ಬೆಳೆದು ಬರುವರು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಚೇತನ ಆರ್.ಪಿ. ಹೇಳಿದರು. ಪಟ್ಟಣದ ಗುಡ್ ಶೆಪರ್ಡ್ ಶಾಲೆಯಲ್ಲಿ ಬಾಳೂರು ಮತ್ತು ರಿಪ್ಪನ್ ಪೇಟೆ ಗ್ರಾಮ…

Read More

ಇನ್‌ಸ್ಟಾಗ್ರಾಂ ‘ರೀಲ್ಸ್’ ಅಭಿಮಾನಿ ಸೋಗಿನಲ್ಲಿ ಶಿಕ್ಷಕನ ದರೋಡೆ – ಶಿವಮೊಗ್ಗದಲ್ಲಿ ಆಘಾತಕಾರಿ ಘಟನೆ

ಇನ್‌ಸ್ಟಾಗ್ರಾಂ ‘ರೀಲ್ಸ್’ ಅಭಿಮಾನಿ ಸೋಗಿನಲ್ಲಿ ಶಿಕ್ಷಕನ ದರೋಡೆ – ಶಿವಮೊಗ್ಗದಲ್ಲಿ ಆಘಾತಕಾರಿ ಘಟನೆ ಶಿವಮೊಗ್ಗ: ತಮ್ಮ ಇನ್‌ಸ್ಟಾಗ್ರಾಂ ರೀಲ್ಸ್‌ಗೆ ಅಭಿಮಾನಿ ಎಂದು ನಂಬಿಸಿ, ಶಿಕ್ಷಕರೊಬ್ಬರನ್ನು ದರೋಡೆ ಮಾಡಿರುವ ಅಚ್ಚರಿಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಕೃತ್ಯ ನಡೆದಿದೆ. ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ನಿಯಮಿತವಾಗಿ ರೀಲ್ಸ್ ಅಪ್‌ಲೋಡ್ ಮಾಡುತ್ತಿದ್ದರು. ಅವರ ರೀಲ್ಸ್‌ಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬ, ಮೆಸೇಜ್ ಮೂಲಕ ಶಿಕ್ಷಕರನ್ನು ಸಂಪರ್ಕಿಸಿದ್ದ. ಬಳಿಕ ಅವರನ್ನು ಭೇಟಿಯಾಗಬೇಕೆಂದು ಕೋರಿದ್ದ…

Read More

ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್‌ ದಾಳಿ – ಇಬ್ಬರ ಬಂಧನ

ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್‌ ದಾಳಿ – ಇಬ್ಬರ ಬಂಧನ ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಅಕ್ರಮ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಟ್ಕಾ ಅಡ್ಡೆಗಳ ಮೇಲೆ ದಾಳಿ ಶಿರಾಳಕೊಪ್ಪ ಪೊಲೀಸರು ಕಳೆದ ರಾತ್ರಿ ಹೆಚ್‌.ಕೆ. ರಸ್ತೆಯ ಹಳೆ ಪೆಟ್ರೋಲ್ ಬಂಕ್ ಸರ್ಕಲ್ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನ ಸರ್ಕಲ್ ಪ್ರದೇಶಗಳಲ್ಲಿ ದಾಳಿ ನಡೆಸಿದರು. ಈ ಸ್ಥಳಗಳಲ್ಲಿ ಮಟ್ಕಾ ಬರವಣಿಗೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ…

Read More

ಸಾಗರದಲ್ಲಿ ಗೋ ಕಳ್ಳರ ಅಟ್ಟಹಾಸ : ಐಷಾರಾಮಿ ಕಾರಿನಲ್ಲಿ ಹಸುವಿನ ಕಳವು!

ಸಾಗರದಲ್ಲಿ ಗೋ ಕಳ್ಳರ ಅಟ್ಟಹಾಸ : ಐಷಾರಾಮಿ ಕಾರಿನಲ್ಲಿ ಹಸುವಿನ ಕಳವು! ಸಾಗರ: ಸಾಗರ ನಗರದಲ್ಲಿ ಗೋ ಕಳ್ಳರ ಹಾವಳಿ ಮತ್ತೆ ಶುರುವಾಗಿದ್ದು, ನವೆಂಬರ್ 7ರ ಮಧ್ಯರಾತ್ರಿ ಐಷಾರಾಮಿ ಕಾರಿನಲ್ಲಿ ಹಸುವನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯರಾತ್ರಿ 2:30ರ ಸುಮಾರಿಗೆ ಸಾಗರದ ಅಣಲೆಕೊಪ್ಪ ಟ್ಯಾಕ್ಸ್ ಆಫೀಸ್ ರಸ್ತೆಯ ಪಾರ್ಕ್‌ ಮುಂಭಾಗದಲ್ಲಿ ಮಲಗಿದ್ದ ಹಸುವನ್ನು ಕಳ್ಳರು ಕಳವು ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಹಾಗೂ ದೂರು ನಂಬ‌ರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಫಾರ್ಚುನ‌ರ್ ಕಾರಿನಲ್ಲಿ…

Read More

ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಹೆದ್ದಾರಿಯಲ್ಲಿ ಆತಂಕ!

ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಹೆದ್ದಾರಿಯಲ್ಲಿ ಆತಂಕ! ಶಿವಮೊಗ್ಗ: ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಸಮೀಪ ರಸ್ತೆಯಲ್ಲೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ. ಮಂಡಗದ್ದೆ ಬಳಿ ವೇಗವಾಗಿ ಬರುತ್ತಿದ್ದ ಬಸ್‌ಗೆ ಕಾಡಾನೆ ದಿಢೀ‌ರ್ ಎದುರಾಗಿದೆ. ಅನಿರೀಕ್ಷಿತವಾಗಿ ಆನೆಯನ್ನು ನೋಡಿದ ಬಸ್ ಚಾಲಕ ತಕ್ಷಣವೇ ಬಸ್ ಅನ್ನು ನಿಲ್ಲಿಸಿ ಅಪಾಯವನ್ನು ತಪ್ಪಿಸಿದ್ದಾರೆ. ಈ ಘಟನೆಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಒಮ್ಮೆಲೆ ಆತಂಕಕ್ಕೊಳಗಾದರು. ಹಲವರು ತಮ್ಮ ಮೊಬೈಲ್‌ ಕ್ಯಾಮರಾಗಳಲ್ಲಿ ಆನೆಯ ಚಿತ್ರಗಳನ್ನು ಸೆರೆಹಿಡಿದರೆ, ಇನ್ನು ಕೆಲವರು ಗಾಬರಿಯಾಗಿದ್ದರು….

Read More

ಹಳೆಯ ದ್ವೇಷ : ಮಾರಾಕಾಸ್ತ್ರದಿಂದ ಕೊಚ್ಚಿ ಮಹಿಳೆಯ ಭೀಕರ ಕೊಲೆ

ಹಳೆಯ ದ್ವೇಷ : ಮಾರಾಕಾಸ್ತ್ರದಿಂದ ಕೊಚ್ಚಿ ಮಹಿಳೆಯ ಭೀಕರ ಕೊಲೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯ ಸಿದ್ದೇಶ್ವರ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ 45 ವರ್ಷದ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಮೃತ ದುರ್ದೈವಿಯನ್ನು ಗಂಗಮ್ಮ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮೆಗ್ಗಾನ್ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ನಾಗೇಶ್ ನಾಯ್ಕ ಮತ್ತು ಹರೀಶ್ ನಾಯ್ಕ ಎಂಬುವರನ್ನು ಪೊಲೀಸರು…

Read More

ಮಹಿಳಾ ಸಹೋದ್ಯೋಗಿನಿ ಮೇಲೆ ಬ್ಯಾಂಕ್ ಅಧಿಕಾರಿಯ ಅಸಭ್ಯ ವರ್ತನೆ – ಪ್ರಕರಣ ದಾಖಲು

ಮಹಿಳಾ ಸಹೋದ್ಯೋಗಿನಿ ಮೇಲೆ ಬ್ಯಾಂಕ್ ಅಧಿಕಾರಿಯ ಅಸಭ್ಯ ವರ್ತನೆ – ಪ್ರಕರಣ ದಾಖಲು ಶಿವಮೊಗ್ಗ : ಬ್ಯಾಂಕಿನ ಮಹಿಳಾ ಸಿಬ್ಬಂದಿಯೊಬ್ಬರು ಅದೇ ಬ್ಯಾಂಕಿನ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣವನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆ ವರ್ಗಾಯಿಸಲಾಗಿದೆ. ಬ್ಯಾಂಕ್‌ ಒಂದರ ಶಿವಮೊಗ್ಗ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಚೇರಿ ಕೆಲಸಕ್ಕೆ ಒಬ್ಬರನ್ನೇ ಕರೆಯುವುದು,…

Read More

ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕಿದ ಪತಿಗೆ ಒಂದು ವರ್ಷ ಜೈಲು ಶಿಕ್ಷೆ

ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕಿದ ಪತಿಗೆ ಒಂದು ವರ್ಷ ಜೈಲು ಶಿಕ್ಷೆ ಶಿವಮೊಗ್ಗ: ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿದ ಪತಿಗೆ ಶಿವಮೊಗ್ಗದ ನ್ಯಾಯಾಲಯವು ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಹರೀಶ್ ಎಂಬುವವರ ವಿರುದ್ಧ ಆತನ ಪತ್ನಿ ನೀಡಿದ ದೂರಿನ ವಿಚಾರಣೆ ಪೂರ್ಣಗೊಂಡ ಬಳಿಕ, 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಅಕ್ಟೋಬರ್ 29, 2025ರಂದು ತೀರ್ಪು ನೀಡಿದೆ. ವಿವಾಹದ ಬಳಿಕ ಹರೀಶ್ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ….

Read More

ರಿಪ್ಪನ್ ಪೇಟೆ |ಕೆಲಸಕ್ಕೆ ತೆರಳಿದ್ದ ಪೋಸ್ಟ್ ಮಾಸ್ಟರ್ ನಾಪತ್ತೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಟೆತಾರಿಗ ನಿವಾಸಿಯಾದ ಸಂತೋಷ್ ಕುಮಾರ್ ಬಿನ್ ಕೇಶವ (38) ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಸಲ್ಲಿಸಿದ್ದಾರೆ. ಸಂತೋಷ್ ಕೋಡೂರು ಪೋಸ್ಟ್ ಆಫೀಸ್ ನಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ನ. 05 ರಂದು ಮನೆಯಿಂದ ತೆರಳಿದ್ದು ಈವರೆಗೂ ಹಿಂದಿರುಗಿರುವುದಿಲ್ಲ ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಕುರಿತು ಯಾವುದೇ ಸುಳಿವು ಇದ್ದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ (ಮೊ‌:…

Read More

ಆನಂದಪುರ | ಮನೆಗೆ ಆಕಸ್ಮಿಕ ಬೆಂಕಿ – ಅಪಾರ ನಷ್ಟ

ಆನಂದಪುರ | ಮನೆಗೆ ಆಕಸ್ಮಿಕ ಬೆಂಕಿ – ಅಪಾರ ನಷ್ಟ ಆನಂದಪುರ: ಇಲ್ಲಿಗೆ  ಸಮೀಪವಿರುವ ಮದ್ಲೆಸರ ನಾವಟಿ ಗ್ರಾಮದಲ್ಲಿ   ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟವಾಗಿದೆ. ಘಟನೆಯಲ್ಲಿ ಮನೆಯು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಯಡೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದ್ಲೆಸರ ನಾವಟಿ ಗ್ರಾಮದ ನಿವಾಸಿ ಜಯಮ್ಮ ಅವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯ ಮೇಲ್ಚಾವಣಿ ಸೇರಿದಂತೆ ಒಳಗೆ ಇದ್ದ ಎಲ್ಲಾ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿವೆ. ಸ್ಥಳೀಯ ಶಾಸಕರಾದ…

Read More
Exit mobile version