Headlines

ನವೆಂಬರ್ ತಿಂಗಳಿನಲ್ಲಿ ಅನ್ಯಭಾಷೆಗಳ ವೈಭವೀಕರಣ ಸಲ್ಲ – ಮೆಣಸೆ ಆನಂದ್|Ripponpet

ನವೆಂಬರ್ ತಿಂಗಳಲ್ಲಿ ಅನ್ಯ ಭಾಷೆಗಳ ವೈಭವೀಕರಣ ಸಲ್ಲ ರಿಪ್ಪನ್‌ಪೇಟೆ : ಕನ್ನಡ ಕಲರವದ ತಿಂಗಳಾದ ನವೆಂಬರ್ ನಲ್ಲಿ ಕನ್ನಡದ ಕಂಪು ರಾಜ್ಯಾದ್ಯಂತ ಮೇಳೈಸುತ್ತಿರುತ್ತದೆ.ಇಂತಹ ಸಂಧರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಅನ್ಯ ಭಾಷೆಗಳ ವೈಭವಿಕರಿಸಿದರೆ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದಂತಾಗುತ್ತದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆನಂದ್ ಮೆಣಸೆ ಹೇಳಿದರು. ಇಂದು ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನೆಲ ಜಲ ಉಳಿವಿಗಾಗಿ ಹೋರಾಟ ಮಾಡುವುದು ಎಲ್ಲಾ ಕನ್ನಡ ಸಂಘಗಳ ಉದ್ದೇಶ. ಕಲಾ ಕೌಸ್ತುಭ…

Read More

ಹೊಸನಗರದ ಕೊಡಚಾದ್ರಿ ಕಾಲೇಜು,ಗರ್ತಿಕೆರೆ ಕಾಲೇಜಿನಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧನ – ಕುಖ್ಯಾತ ಅಂತರ್ ಜಿಲ್ಲಾ ಕಳ್ಳರು ಎಷ್ಟು ಶಾಲೆಯ ಬೀಗ ಮುರಿದಿದ್ದಾರೆ ಗೊತ್ತಾ.???? ಈ ಸುದ್ದಿ ನೋಡಿ|Arested

ಇತ್ತೀಚೆಗೆ ಮಲೆನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ ಕಳ್ಳತನ ಮಾಡುತಿದ್ದ ನಟೋರಿಯಸ್ ಕಳ್ಳರನ್ನು ಉಡುಪಿ ಜಿಲ್ಲೆಯ ಕೋಟ ಪೊಲೀಸರು ಬಂಧಿಸಿದ್ದಾರೆ. ಹೊಸನಗರದ ಕೊಡಚಾದ್ರಿ ಕಾಲೇಜು,ಗರ್ತಿಕೆರೆ ಕಾಲೇಜು,ಕೋಣಂದೂರು ಕಾಲೇಜು ,ನಗರ ಕಾಲೇಜಿನಲ್ಲಿ ಬೀಗ ಮುರಿದು ಕಳ್ಳತನ ಮಾಡಿದ್ದರು. ಇಂದು ಉಡುಪಿ ಜಿಲ್ಲೆಯ ಕೋಟ ಠಾಣಾ ಸರಹದ್ದಿನ ಆವರ್ಸೆ ಗ್ರಾಮದ ಬಳಿ ಬೈಕ್ ನಲ್ಲಿ  ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಕಳ್ಳತನ ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾರೆ. ತಮಿಳುನಾಡಿನ ಸೇಲಂ ನಿವಾಸಿ ಕುಮಾರಸ್ವಾಮಿ(59),ಉಡುಪಿ ಜಿಲ್ಲೆಯ…

Read More

ಚಿಕನ್ ಅಂಗಡಿ ಮಾಲೀಕನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ.ಪಂಚಾಯಿತಿ ಬಿಜೆಪಿ ಸದಸ್ಯ|Bribe

ಚಿಕನ್ ಅಂಗಡಿ ಮಾಲೀಕನಿಂದ 50 ಸಾವಿರ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಸಾಗರ ತಾಲೂಕಿನ ಜೋಗ-ಕಾರ್ಗಲ್ ಪಪಂ ಬಿಜೆಪಿ ಸದಸ್ಯ ಕೆ.ಸಿ.ಹರೀಶ್ ಗೌಡ   ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಲಂಚದ ಹಣ ಸುಡಲು ಯತ್ನಿಸಿದ್ದಾನೆ. ಜೋಗ ಗ್ರಾಮದ ಚಿಕನ್ ಅಂಗಡಿ ಮಾಲೀಕ ಅಹ್ಮದ್ ಅಬ್ದುಲ್ ಬಾಕಿ ಎಂಬುವವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿಯಾಗಿದೆ.    ಕಾರ್ಗಲ್ ಪಟ್ಟಣದ 8ನೇ ವಾರ್ಡ್ ಬಿಜೆಪಿ ಸದಸ್ಯನಾಗಿರುವ ಹರೀಶ್ ಗೌಡನನ್ನು ಬಂಧಿಸಲಾಗಿದೆ. ಕೋಳಿ ವ್ಯಾಪಾರದ ಅಂಗಡಿಗೆ…

Read More

ರಿಪ್ಪನ್‌ಪೇಟೆಯಲ್ಲಿ ನ.25,26 ರಂದು ಕಲಾಕೌಸ್ತುಭ ಕನ್ನಡ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ-ನ.27ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ

ರಿಪ್ಪನ್‌ಪೇಟೆ : ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 29ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 25 ಮತ್ತು 26 ರಂದು ಭೂಫಾಳಂ ಸಭಾ ಭವನದಲ್ಲಿ ಹಾಗೂ ನವೆಂಬರ್ 27 ರಂದು ಸಂಜೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ ಚಿನ್ನೇಗೌಡ ಕ್ರೀಡಾಂಗಣದಲ್ಲಿ “ಆಳ್ವಾಸ್‌ ಸಾಂಸ್ಕೃತಿಕ ವೈಭವ’’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಕೌಸ್ತುಭ ಕನ್ನಡ ಸಂಘದ ಕಾರ್ಯದರ್ಶಿ ರವಿಚಂದ್ರ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಸಂಚಾಲಕ ಎನ್.ಸತೀಶ್ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 25…

Read More

ಅತ್ತೆಯ ಸಾವಿನ ಸುದ್ದಿ ತಿಳಿದು ಅಳಿಯ ಹೃದಯಾಘಾತದಿಂದ ನಿಧನ|sagara

ಹೃದಯಾಘಾತದಿಂದ ಸೋದರತ್ತೆಯ ಮೃತಪಟ್ಟ ಸುದ್ದಿ ತಿಳಿದು ಅಳಿಯ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ನಡೆದಿದೆ. ಲಕ್ಷಮ್ಮ(58) ಮತ್ತು ಅವರ ಅಳಿಯ ಗುಲ್ಫತ್ ಸಿಂಗ್(45) ಮೃತಪಟ್ಟರಾಗಿದ್ದಾರೆ. ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದ ಲಕ್ಷಮ್ಮರನ್ನು ಗುಲ್ಫತ್ ಸಿಂಗ್ ಲಿಂಗನಮಕ್ಕಿಯಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಬಸ್ಸು ಆನಂದಪುರ ಸಮೀಪ ತಲುಪಿದಾಗ ಲಕ್ಷಮ್ಮರಿಗೆ ಹೃದಯಾಘಾತಕ್ಕೀಡಾಗಿದ್ದು, ಅವರು ಅಲ್ಲೇ ಮೃತಪಟ್ಟರೆನ್ನಲಾಗಿದೆ. ಈ ವಿಚಾರವನ್ನು ಬಸ್ ನಿರ್ವಾಹಕ ಲಕ್ಷಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಈ ಸುದ್ದಿಯನ್ನು ಸಂಬಂಧಿಕರು ಕರೆ ಮಾಡಿ…

Read More

ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ – ಓರ್ವ ವಶಕ್ಕೆ|Assault on doctor

ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ರೋಗಿಯ ಕಡೆಯವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಮಮ್ತಕೀಮ್ ಎಂಬಾತನನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ಆಯನೂರಿನ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಶೀದ್ (65) ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ನಂತರ ಅವರನ್ನು ಮತ್ತೆ ಮೆಗ್ಗಾನ್ ಗೆ ದಾಖಲಿಸಿದ್ದರು ಆದರೆ ಭಾನುವಾರ ರಾತ್ರಿ ಅಬ್ದುಲ್ ರಶೀದ್…

Read More

ತೀರ್ಥಹಳ್ಳಿ : ಶಾರೀಕ್ ಮನೆ ಸೇರಿದಂತೆ ನಾಲ್ಕು ಮನೆಗಳ ಮೇಲೆ ಪೊಲೀಸ್ ರೈಡ್|Manglore blast

ತೀರ್ಥಹಳ್ಳಿ : ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ಶಾರೀಕ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಪೊಲೀಸರು ರೈಡ್ ಮಾಡಿದ್ದಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಶಾರಿಕ್ ಆರೋಪಿಯಾಗಿರಬಹುದು ಎಂಬ ಕಾರಣಕ್ಕಾಗಿ ಒಟ್ಟು ಮೂರು ತಂಡಗಳಾಗಿ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ, ಮಾಳೂರು ಹಾಗೂ ಆಗುಂಬೆ ಪೊಲೀಸ್ ಠಾಣೆಯ ಎಸೈಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ. ಶಾರೀಕ್ ಚಿಕ್ಕಮ್ಮನ ಮನೆ ಸೇರಿದಂತೆ ಸಂಬಂಧಿಕರ  ಒಟ್ಟು ನಾಲ್ಕು ಮನೆಗಳ ಮೇಲೆ ಪೊಲೀಸರು ರೈಡ್ ಮಾಡಿದ್ದಾರೆ. ಹಲವು ದಾಖಲೆಗಳನ್ನು ತೀರ್ಥಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದು ಹಲವು ಆಯಾಮಗಳಲ್ಲಿ  ಪೊಲೀಸರು…

Read More

ನಿದ್ದೆ ಬರುತ್ತಿಲ್ಲಾ ಎಂದು ಪೊಲೀಸ್ ಇಲಾಖೆಯ 112 ಗೆ ಕರೆ ಮಾಡಿದ ಭೂಪ – ಒಂದು ಗೊರಕೆಯ ಸ್ವಾರಸ್ಯಕರ ಕಥೆ!!! ಇಲ್ಲಿ ನೋಡಿ….

ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಆಪತ್ಕಾಲದಲ್ಲಿ ಡಯಲ್ 112 ಹಾಗೂ 100 ಸೇವೆ ಒದಗಿಸಿದೆ.ಆದರೆ ಇಲ್ಲೊಬ್ಬ ಭೂಪ ರಾತ್ರಿ ನಿದ್ದೆ ಬರ್ತಿಲ್ಲಾ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಹೌದು, ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಳೂರು ಪಟ್ಟಣ ಈ ವಿಚಿತ್ರ ಪ್ರಕರಣಕ್ಕೆ ಸಾಕ್ಷಿಯಾಗಿದೆ. ‘ನಿದ್ದೆ ಬರ್ತಿಲ್ಲಾ ಸಾರ್..’ ಎಂದು ಮಧ್ಯರಾತ್ರಿ ತುರ್ತು ಸೇವೆ 112 ನಂಬರ್‌ಗೆ ಇಂಥದ್ದೊಂದು ಕರೆ ಬಂದಾಗ ಪೊಲೀಸರು ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ….

Read More

ಕನ್ನಡ ಭಾಷೆಗೆ ಮಡಿವಂತಿಕೆಯ ಬೇಲಿ ಬೇಡ – ಸರ್ಫ಼್ರಾಜ್ ಚಂದ್ರಗುತ್ತಿ|Ripponpet

ರಿಪ್ಪನ್‌ಪೇಟೆ : ಇಡೀ ಜಗತ್ತಿನಲ್ಲಿ ಕನ್ನಡ ತೆರೆದುಕೊಳ್ಳಬೇಕಾದರೆ ಕನ್ನಡಕ್ಕೆ ಮಡಿವಂತಿಕೆಯ ಬೇಲಿ ಬೇಡ ಎಂದು ಸಾಹಿತಿಗಳು ಹಾಗೂ ಉಪನ್ಯಾಸಕರಾದ ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು. ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ರಿಪ್ಪನ್ ಪೇಟೆ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಶನಿವಾರ ಸಂಜೆ ನಡೆದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಪ್ರಸ್ತುತ ಆಧುನಿಕ ಕಾಲದಲ್ಲಿ ಸಂಶೋಧನೆ, ವೈದ್ಯಕೀಯ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಸರಳವಾಗಿ ಬಳಸುವಂತಾಗಬೇಕು. ಹೊಸ ಕಾಲಕ್ಕೆ ಕನ್ನಡ ಕಟ್ಟುವ ಕೆಲಸವಾಗಬೇಕು,ಕನ್ನಡ ಭಾಷೆಯಲ್ಲಿ…

Read More

ಮಂಗಳೂರಿನ ಆಟೋ ಸ್ಪೋಟ ಪ್ರಕರಣ – ತೀರ್ಥಹಳ್ಳಿಯ ಶಾರೀಕ್ ಲಿಂಕ್ !!!..??|Manglore

ಮಂಗಳೂರಿನ ಹೊರವಲಯದಲ್ಲಿ ನಡೆದ ಆಟೋ ಸ್ಪೋಟದ ಹಿಂದೆ  ಭಯೋತ್ಪಾದಕರ ಕೈವಾಡವಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ ಬೆನ್ನಲ್ಲೇ ಈ ಪ್ರಕರಣದಲ್ಲಿ ಶಿವಮೊಗ್ಗದ ವ್ಯಕ್ತಿಯ ಲಿಂಕ್ ಸಹ ಕೇಳಿ ಬರುತ್ತಿದೆ. ಈ ರೀತಿಯ ಸುದ್ದಿಯ ಜಾಡನ್ನ ಬೆನ್ನು ಹತ್ತಿರುವ ಮಾಧ್ಯಮಗಳಿಗೆ ಹೆಸರು ಕೇಳಿ ಬರುತ್ತಿರುವ ಹೆಸರೆಂದರೆ ಶಾರೀಕ್ ಹೆಸರು. ಯಾರೂ ಈ ಶಾರೀಕ್ ಎಂದು ಕೇಳ್ತಾ ಹೋದರೆ ಸೆಪ್ಪಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ಪತ್ತೆಯಾದ ಮೂವರು ಶಂಕಿತರ ಹೆಸರಿನಲ್ಲಿ ಕೇಳಿ ಬಂದ ಪ್ರಮುಖ ಆರೋಪಿ ಈ ಶಾರೀಕ್. ತೀರ್ಥಹಳ್ಳಿಯ ನಿವಾಸಿ…

Read More
Exit mobile version