ರಿಪ್ಪನ್‌ಪೇಟೆ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ರಚಿಸಿರುವ “ಆರುಣ್ಯ” ಕಿರುಚಿತ್ರದ ಟ್ರೈಲರ್ ಬಿಡುಗಡೆ|gfgc
ರಿಪ್ಪನ್‌ಪೇಟೆ : ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳೇ ನಿರ್ದೇಶಿಸಿ,ನಟಿಸಿದ ಆರುಣ್ಯ ಕಿರುಚಿತ್ರದ ಟ್ರೈಲರ್ ಮತ್ತು ಸ್ಪೀಕಿಂಗ್ ಏಂಜಲ್ಸ್ ಯೂಟ್ಯೂಬ್ ಚಾನೆಲ್ ನ್ನು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹಿರಿಯ ವಿಶೇಷ ಪ್ರತಿನಿಧಿ ರಶ್ಮಿ ಬೇಲೂರು ಅನಾವರಣಗೊಳಿಸಿದರು. ನಂತರ ಕಿರುಚಿತ್ರದ ಟ್ರೈಲರ್ ವೀಕ್ಷಿಸಿ ಮಾತನಾಡಿದ ಅವರು ವಿದ್ಯಾರ್ಥಿನಿಯರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಬಾಳಿ ಬದುಕಿ ತೋರಿಸಬೇಕು,ವಿದ್ಯಾರ್ಥಿನಿಯರು ತಮ್ಮ ಜೀವನದ ಗುರಿಯನ್ನು ಮೊದಲೇ ನಿರ್ಧರಿಸಿಕೊಂಡು ಮನೆಯವರ ಬಳಿ ಹಂಚಿಕೊಳ್ಳುವ ಮೂಲಕ ನೀವಂದುಕೊಂಡಂತೆ ಬದುಕಿ ತೋರಿಸಬೇಕು.ಈ ಕಿರುಚಿತ್ರ ತಂಡದ ಎಲ್ಲಾ…


