Headlines

ಮತಾಂತರ ಆರೋಪ – ಪಾದ್ರಿ ಮನೆಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು|protest

ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದ ಮನೆಗೆ ಬಜರಂಗ ದಳ ಮುತ್ತಿಗೆ ಹಾಕಿದ ಘಟನೆ ಶಿವಮೊಗ್ಗ ತಾಲೂಕಿನ ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಪ್ರಾರ್ಥನೆ ನಡೆಸುತ್ತಿದ್ದ ಮನೆಯಲ್ಲಿ ಬಜರಂಗ ದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಪಿಶೆಟ್ಟಿಕೊಪ್ಪದಲ್ಲಿರುವ ಮನೆಯೊಂದರಲ್ಲಿ ಪ್ರತಿ ಭಾನುವಾರ ಹಿಂದೂಗಳನ್ನು ಕರೆಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಪಾದ್ರಿ ಮಣಿಕಂಠ ಮತ್ತವರ ತಂಡದವರು ಪ್ರತಿ ಭಾನುವಾರ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜನೆ ಮಾಡುತ್ತಿದ್ದರು. ಪ್ರಾರ್ಥನೆ ಆಯೋಜಿಸುತ್ತಿದ್ದವರ ವಿರುದ್ಧ…

Read More

ಬಸ್ ನಲ್ಲಿ ಶೃಂಗೇರಿ ಮೂಲದ ಮುಸ್ಲಿಂ ಯುವಕ, ಹಿಂದೂ ಯುವತಿಯ ರೋಮ್ಯಾನ್ಸ್ ; ಸಾರ್ವಜನಿಕರಿಂದ ತರಾಟೆ

ಶೃಂಗೇರಿ : ತಾಲೂಕು ಹಾಗೂ ತೀರ್ಥಹಳ್ಳಿ ಗಡಿಭಾಗದ ಬಿದರಗೋಡು ಗ್ರಾಮದ ಯುವಕನೊಬ್ಬ ಉಡುಪಿ ಮೂಲದ ಹಿಂದೂ ಯುವತಿಯಳೊಡನೆ ಅಸಭ್ಯವಾಗಿ ವರ್ತಿಸಿ ಹಿಂದೂ ಸಂಘಟಕರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಬಿದರಗೋಡಿನ ಸುನೈಫ್ ಇಬ್ರಾಹಿಂ ಎಂಬಾತ ಉಡುಪಿ-ಮಂಗಳೂರು ಬಸ್ ನಲ್ಲಿ ಉಡುಪಿ ಮೂಲದ ಹಿಂದೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು, ಥಳಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಲವ್ ಜಿಹಾದ್ ಆರೋಪ;…

Read More

ವೀಕೆಂಡ್ ಕರ್ಫ಼್ಯೂ ಇರಲ್ಲ:ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ: ಅನ್ ಲಾಕ್ 3.0 ಘೋಷಣೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾ ಎರಡನೇ ಅಲೆಯ ಬಳಿಕ ಮೂರನೇ ಹಂತದ ಅನ್​ಲಾಕ್​​ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್‌ಲಾಕ್‌ 3.O ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಜುಲೈ 5ರ ಮುಂಜಾನೆ 5 ಗಂಟೆಯಿಂದ ಅನ್​ಲಾಕ್ 3.O ಅನ್ವಯವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಅನ್​ಲಾಕ್ ಅನ್ವಯವಾಗಲಿದೆ ಎಂದಿದ್ದಾರೆ. ಮಂಗಳೂರು, ಮೈಸೂರು ಸಹಿತ ಅನ್​ಲಾಕ್ 3.0 ಅನ್ವಯವಾಗಲಿದೆ. ಕೊವಿಡ್ ಉಸ್ತುವಾರಿ ಸಚಿವರ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ…

Read More

ಹೊಸನಗರದ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಸಜೆ

ಹೊಸನಗರದ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಸಜೆ ಹೊಸನಗರ(Hosanagara) ತಾಲೂಕಿನ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ 25 ವರ್ಷದ ಯುವಕನಿಗೆ ಶಿವಮೊಗ್ಗ(shivamogga)ದ ಫಾಸ್ಟ್‌ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ 20 ವರ್ಷಗಳ ಕಠಿಣ ಸಜೆ ವಿಧಿಸಿದೆ. ಹೊಸನಗರ ತಾಲೂಕು ಗ್ರಾಮ ಒಂದರಲ್ಲಿ 2022ರಲ್ಲಿ ಆರೋಪಿ ಯುವಕ ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.ಇದರಿಂದ ಬೇಸತ್ತ ಬಾಲಕಿ ಮನೆಯವರಿಗೆ ತಿಳಿಸಿದ್ದಳು. ಇದಾದ ಬಳಿಕ ಬಾಲಕಿ ಹೊಸನಗರ…

Read More

ಹಾಸ್ಟೆಲ್‌ ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆ

ಹಾಸ್ಟೆಲ್‌ ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆ ಶಿವಮೊಗ್ಗ: ಹಾಸ್ಟೆಲ್‌ನ ಟೆರೇಸ್‌ ಮೇಲೆ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ. ಭದ್ರಾವತಿ ತಾಲೂಕು ಗಂಗೂರಿನ ವನಿಷಾ (21) ಮೃತ ದುರ್ಧೈವಿಯಾಗಿದ್ದಾರೆ. ಹಾಸ್ಟೆಲ್‌ನ ಟೆರೇಸ್‌ನಲ್ಲಿರುವ ನೀರಿನ ಟ್ಯಾಂಕ್‌ ಪಕ್ಕದಲ್ಲಿ ವನಿಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಟೆರೇಸ್‌ ಮೇಲೆ ಹೋದ ವಿದ್ಯಾರ್ಥಿನಿಯರು ಇದನ್ನು ಗಮನಿಸಿ ಕೂಡಲೆ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ.ಘಟನೆಗೆ ನಿಖರವಾದ ಕಾರಣ…

Read More

Ripponpete | ಸನಾತನ ಧರ್ಮ ಸಂಸ್ಕೃತಿ ಸಾರುವ ವಿಶಿಷ್ಟ ದೇಶ ಭಾರತ – ಶ್ರೀ ರೇಣುಕಾನಂದ ಸ್ವಾಮೀಜಿ

“ಸನಾತನ ಧರ್ಮ ಸಂಸ್ಕೃತಿ ಸಾರುವ ವಿಶಿಷ್ಟ ದೇಶ ಭಾರತ’’ ರಿಪ್ಪನ್‌ಪೇಟೆ;-ಸನಾನತ ಧರ್ಮ ಸಂಸ್ಕೃತಿ ಸಾರುವ ವಿಶಿಷ್ಟ ದೇಶ ಭಾರತವಾಗಿದೆ.ವಿಶ್ವಕ್ಕೆ ಶಾಂತಿ ನೆಮ್ಮದಿಯನ್ನು ಸಾರುವ ಧರ್ಮ ಹಿಂದು ಧರ್ಮದಾಗಿದೆ ಎಂದು ನಿಟ್ಟೂರು ಆರ್ಯಈಡಿಗಾ ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮೀಜಿ ಹೇಳಿದರು. ರಿಪ್ಪನ್‌ಪೇಟೆಯಲ್ಲಿ ಇಂದು ಆಯೋಧ್ಯೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಆಭಿಯಾನ ಮನೆಮನೆ ಸಂಪರ್ಕ ಆಭಿಯಾನ ಸಮಿತಿಯವರು ಆಯೋಜಿಸಲಾದ ಬೃಹತ್ ಆಭಿಯಾನ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಭಾರತ ಪುಣ್ಯ ಪುರುಷರ ಸಂತರ ಶರಣರ ಪುಣ್ಯ ಭೂಮಿ…

Read More

ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ : ಸಂಚಾರ ಸಂಪೂರ್ಣ ಬಂದ್

ಆಗುಂಬೆ ಘಾಟಿಯಲ್ಲಿ ವ್ಯಾಪಕ ಮಳೆಯಾಗಿರುವ ಹಿನ್ನಲೆಯಲ್ಲಿ ತಿರುವಿನಲ್ಲಿ ಮಣ್ಣುಕುಸಿದಿದ್ದು, ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರಬಿದ್ದಿದೆ. ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಈ ಮಾರ್ಗದಲ್ಲಿ ಹೋದವರು ಸಂಚಾರ ಬಂದ್ ಆಗಿರುವ ಹಿನ್ನಲೆಯಲ್ಲಿ ವಾಪಾಸ್ ಆಗುತಿದ್ದಾರೆ. ಆಗುಂಬೆ ಘಾಟಿ ಕೆಳಗೆ ಸೋಮೇಶ್ವರ ಚೆಕ್​​ಪೋಸ್ಟ್​ ಬಳಿಯಲ್ಲಿಯೇ ವಾಹನಗಳನ್ನು ತಡೆಯಲಾಗುತ್ತಿದೆ.  ಮೇಲ್ಬಾಗ ಆಗುಂಬೆ ಘಾಟಿ ಚೆಕ್​ಪೋಸ್ಟ್​ ಬಳಿಯೇ ವಾಹನಗಳನ್ನು ವಾಪಸ್​ ಕಳುಹಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ವೀಡಿಯೋ ಇಲ್ಲಿ ವೀಕ್ಷಿಸಿ👇

Read More

ಮಹಿಳೆಯೊಬ್ಬರ ಖಾಸಗಿ ವೀಡಿಯೋ ಫೇಸ್‌ಬುಕ್ ನಲ್ಲಿ ಅಪ್‌ಲೋಡ್ : ಮಹಿಳೆ ಸೇರಿದಂತೆ ಇಬ್ಬರ ಬಂಧನ

Shivamogga CEN police arrested two accused for allegedly stealing a woman’s private video and uploading it on Facebook using a fake ID named “Shylaja SMG” in Ripponpete police station limits. ಮಹಿಳೆಯೊಬ್ಬರ ಖಾಸಗಿ ವೀಡೀಯೋ ಫೇಸ್‌ಬುಕ್ ನಲ್ಲಿ ಅಪ್‌ಲೋಡ್ : ಮಹಿಳೆ ಸೇರಿದಂತೆ ಇಬ್ಬರ ಬಂಧನ ಶಿವಮೊಗ್ಗ : ಮಹಿಳೆಯೊಬ್ಬರ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣವನ್ನು ಶಿವಮೊಗ್ಗ ಸೈಬರ್ ಅಪರಾಧ ಪೊಲೀಸರು ಭೇದಿಸಿದ್ದು,…

Read More

ಆನಂದಪುರ : ಉರುಳಿಗೆ ಸಿಲುಕಿ ಪ್ರಾಣ ಬಿಟ್ಟ ಚಿರತೆ|Leopard

ಆನಂದಪುರ ವಲಯ ಅರಣ್ಯದ ಚೋರಡಿ ತುಪ್ಪೂರು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಅದೇ ರೀತಿ ವನ್ಯ ಪ್ರಾಣಿಗಳ ಭೇಟೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಜಮೀನಿಗೆ ಲಗ್ಗೆ ಇಡುವ ಕಾಡುಹಂದಿಗಳ ಬೇಟೆಗೆ ಉರುಳು ಹಾಕುವುದು, ಎಲೆಕ್ಟ್ರಿಕ್ ಕರೆಂಟ್ ಕೊಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಪೂರಕ ಎಂಬಂತೆ,  ಆನಂದಪುರ ರೇಂಜ್ ನ ಚೋರಡಿ ಸಮೀಪದ ಕೋಣೆಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಹಾಕಿದ ಉರುಳಿಗೆ ಸಿಲುಕಿ ಚಿರತೆಯೊಂದು ಒದ್ದಾಡಿ ಪ್ರಾಣಬಿಟ್ಟಿದೆ.  ಸುಮಾರು 5 ರಿಂದ 6 ವರ್ಷ ಪ್ರಾಯದ ಗಂಡು…

Read More

ತಮ್ಮ ಆಕ್ರೋಶದ ಹೇಳಿಕೆಯನ್ನ ವಾಪಸ್ ಪಡೆದ ತೀ. ನಾ .ಶ್ರೀನಿವಾಸ್:

ಸಾಗರ: ಕಾಂಗ್ರೆಸ್ ಪಕ್ಷ ಬಗರಹುಕುಂ ಸಾಗುವಳಿ ಮಂಜೂರಾತಿಗಾಗಿ11/8/21ರಂದು  ನಡೆಸಿದ ಪ್ರತಿಭಟನೆ ವೇಳೆ ಮಾಜಿ ಪುರಸಭಾಧ್ಯಕ್ಷ  ತೀ ನಾ ಶ್ರೀನಿವಾಸ್ ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು ಎಂದು ಆರೋಪಿಸಿ ಸಾಗರ ಬಿಜೆಪಿ ಘಟಕ ದಿನಾಂಕ12/8/21 ರಂದು ಪ್ರತಿಭಟನೆ ನಡೆಸಿತ್ತು  ಇಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿರುವ ಮಾಜಿ ಪುರಸಭಾ ಅಧ್ಯಕ್ಷ ತೀ ನಾ ಶ್ರೀನಿವಾಸ್ ನಾನು ಯಾವುದೇ ನಾಯಕರನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ ಸಂಕಷ್ಟದಲ್ಲಿರುವ ರೈತರ ಸ್ಥಿತಿಗತಿ ಮತ್ತು ಜನಸಾಮಾನ್ಯರ ಪರಿಸ್ಥಿತಿಯಿಂದ ಆಕ್ರೋಶಗೊಂಡು ಮಾತನಾಡಿದ್ದು ಅಷ್ಟೆ ಅದನ್ನು…

Read More
Exit mobile version