Headlines

ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ.

  ರಿಪ್ಪನ್ ಪೇಟೆ: ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ ಕನ್ನಡದ ಉಪನ್ಯಾಸಕ ರಾಜು ಶಿವಪುರ ಮಾತನಾಡಿ ಈ ಬಾರಿಯ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡಕ್ಕಾಗಿ ನಾವು ಎಂಬ ವಿಭಿನ್ನ ಅಭಿಯಾನ ಹಮ್ಮಿಕೊಂಡಿದೆ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕೈಜೋಡಿಸಬೇಕೆಂದರು.  ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಭಾಷಾ ಸಂಸ್ಕೃತಿ…

Read More

ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷತನ ಅರಳಗೋಡು ಸಮೀಪದ ಮಂಡವಳ್ಳಿ ಗ್ರಾಮದ 9 ಜನರ ಮನೆಯ ವೈರಿಂಗ್ ಸಂಪೂರ್ಣ ಸುಟ್ಟು ಭಸ್ಮ !!!

ಸಾಗರ ತಾಲ್ಲೂಕು ಬಾರಂಗಿ ಹೋಬಳಿ ವ್ಯಾಪ್ತಿಯ ಅರಳಗೋಡು ಗ್ರಾಮ ಪಂಚಾಯತ್​ನ ಮಂಡವಳ್ಳಿ ಗ್ರಾಮದ 9 ಮನೆಗಳ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯ ವಿವರ ಮಂಡವಳ್ಳಿ ಗ್ರಾಮದ ಆಚೆಕೊಪ್ಪದಲ್ಲಿ ಸಿಂಗಲ್​ ಫೇಸ್​ ಲೈನ್​ ಮೊದಲಿನಿಂದಲೂ ಇದೆ. ಈ ಲೈನ್​ ಹಾದು ಹೋಗಿರುವ ಕಂಬದಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ತ್ರಿ ಫೇಸ್​ ಲೈನ್​ ಕೂಡ ಅಳವಡಿಸಲಾಗಿದ್ದುಇದು ಅಪಾಯಕಾರಿಯಾಗಿದ್ದರಿಂದ ಗ್ರಾಮಸ್ಥರು ಪಂಚಾಯಿತಿ ಮೂಲಕ ಮೆಸ್ಕಾಂ ಅಧಿಕಾರಿಗಳಿಗೆ ದುರಸ್ಥಿ ಮಾಡಿಕೊಡುವಂತೆ ಮನವಿ ಮಾಡಿರುತ್ತಾರೆ.  ಒಂದಕ್ಕೊಂದು ತಾಗುವಂತೆ ಲೈನ್ ಹೋಗಿದ್ದು ಏನಾದರೂ…

Read More

Ripponpete | ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು  ರಿಪ್ಪನ್‌ಪೇಟೆ – ಸಹಕಾರಿ ಕ್ಷೇತ್ರವನ್ನು ನಾವು ಇಂದು ಉಳಿಸಿ ಬೆಳೆಸಬೇಕಾಗಿದೆ. ಹಳೆ ನಂಬರ್ ಕ್ಷೇತ್ರದ ರೈತರ ಪರವಾಗಿ ಸದಾ ನಾನು ನಿಮ್ಮೊಂದಿಗೆ ಧ್ವನಿಯಾಗಿರುತ್ತೇನೆ  ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರಸದೆ  ಎತ್ತರಕ್ಕೆ ಬೆಳೆಸುವಂತೆ  ಆಗಬೇಕು ಎಂದು ಶಾಸಕ  ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ  ನಡೆದ ಕರ್ನಾಟಕ ರಾಜ್ಯ ಮಹಾಮಂಡಳ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಡಿಸಿಸಿ ಬ್ಯಾಂಕ್, ಸಹಕಾರ ಹಾಲು…

Read More

ಕಿಮ್ಮನೆ ರತ್ನಾಕರ್ ನೇತ್ರತ್ವದ ಪಾದಯಾತ್ರೆಗೆ ಬೆಂಬಲ ಸೂಚಿಸಿದ ಮಂಜುನಾಥ್ ಗೌಡ :ಕಿಮ್ಮನೆ & ಆರ್ ಎಂಎಂ ಅಭಿಮಾನಿಗಳಲ್ಲಿ ಚಿಮ್ಮಿದ ಉತ್ಸಾಹ

ತೀರ್ಥಹಳ್ಳಿ : ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣೆ ಎಡವಟ್ಟುಗಳ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ನೆಡೆಯುತ್ತಿದ್ದು ಸಾಹಿತ್ಯದ ಬಗ್ಗೆ ಸರ್ಕಾರ ತೋರಿರುವ ಅಸಡ್ಡೆಯನ್ನು ಖಂಡಿಸಿ ಜೂನ್ 15 ರ ಬುಧವಾರ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನೆಡೆಯುವ ಕುಪ್ಪಳ್ಳಿಯ ಕವಿಶೈಲದಿಂದ ಪಾದಯಾತ್ರೆಗೆ ನಾನು ಸಹ ಬೆಂಬಲ ಕೊಡುತ್ತಿದ್ದೇನೆ ಎಂದು ತಿಳಿಸಿದರು. ಪಟ್ಟಣದ ಬೆಟ್ಟಮಕ್ಕಿಯ ತಮ್ಮ ಮನೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ರಾಷ್ಟ್ರಕವಿ ಎಂದೇ ಹೆಸರುವಾಸಿಯಾಗಿರುವ ಕುವೆಂಪು ಅವರ ಗೀತೆಯನ್ನು ನಾವೆಲ್ಲರೂ ನಾಡಗೀತೆಯಾಗಿ ಒಪ್ಪಿಕೊಂಡಿದ್ದೆವೆ. ಆದರೆ ಅಧಿಕೃತ…

Read More

ರಿಪ್ಪನ್ ಪೇಟೆ: ಮಳೆ ಬಂದಾಗ ಈಜುಕೊಳವಾಗುವ ಆಟೋ ಸ್ಟ್ಯಾಂಡ್, ಕಾಟಾಚಾರದ ಬ್ಯಾರಿಕೇಡ್ ನಿಂದ ಸುಗಮ ಸಂಚಾರಕ್ಕೆ ಅಡ್ಡಿ:

ರಿಪ್ಪನ್ ಪೇಟೆ :ಪಟ್ಟಣದ ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿರುವ ಆಟೋ ಸ್ಟ್ಯಾಂಡ್ ಬಳಿ ಮಳೆ ಬಂದರೆ ಸಾಕು ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಈಜುಕೊಳದಂತಾಗಿ ರಸ್ತೆಯ ಮೇಲೆ ನೀರು ಹರಿಯುತ್ತದೆ ಇದರಿಂದ ಪಾದಚಾರಿಗಳಿಗೆ ಹಾಗು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ ಇದರಿಂದ ಅನೇಕ ಸಣ್ಣಪುಟ್ಟ ಅಪಘಾತಗಳು ನಡೆದ ಉದಾಹರಣೆಗಳಿವೆ.  ಒಂದು ಕಡೆ ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೆ ಈಜುಕೊಳವಾಗಿದ್ದರೆ ಇನ್ನೊಂದು ಕಡೆ ಕಾಟಚಾರಕ್ಕೆ ಹಾಕಿರುವ ಬ್ಯಾರಿಕೇಡ್, ತೀರ್ಥಹಳ್ಳಿ ರಸ್ತೆ ಯಲ್ಲಿ ಒಂದು ಕಡೆ…

Read More

ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ|Ripponpet

“ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ’’ ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಅರಿವಿಲ್ಲದಂತಾಗಿದೆ :ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ. ರಿಪ್ಪನ್‌ಪೇಟೆ;- ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಹಾಗೂ  ಸಂಸ್ಕಾರ ಇಲ್ಲದಂತಾಗಿದೆ.ಇತ್ತೀಚಿನ ದಿನಗಳಲ್ಲಿ  ನಾಟಕ ರಂಗಕಲೆ ಜಾನಪದ ತತ್ವ ಪದಗಳಿಂದ ನಮ್ಮ ಕಲೆ ಸಂಸ್ಕೃತಿ ಗಳು ಜೀವಂತವಾಗಿ ಉಳಿದಿದ್ದು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಕ್ಕಳ ರಂಗ ಹಬ್ಬ ಪ್ರೇರಕವೆಂದು ಮಳಲಿಮಠದ ಡಾ.ಗುರುನಾಗಭೂಷಣ…

Read More

ರಿಪ್ಪನ್‌ಪೇಟೆ : ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವನ ಸ್ಥಿತಿ ಗಂಭೀರ – ಐವರು ಗಾಯಾಳು ಮೆಗ್ಗಾನ್ ಗೆ|accident

ರಿಪ್ಪನ್ ಪೇಟೆ : ಇಲ್ಲಿನ ಹೊಸನಗರ ರಸ್ತೆಯ ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಬಿಳಿಕಿ ಗ್ರಾಮಕ್ಕೆ ತೆರಳುತಿದ್ದ ಬೈಕ್ ಹಾಗೂ ಜೇನಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಬೈಕ್ ನಡುವೆ ತಾವರೆಕೆರೆ ಸಮೀಪದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಈ ರಸ್ತೆ ಅಪಘಾತದಲ್ಲಿ ಪಟ್ಟಣದ ಸಮೀಪದ ಬಿಳಿಕಿ ಗ್ರಾಮದ ರಾಕೇಶ್ ಎಂಬ ವ್ಯಕ್ತಿಯ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಕಾಲು ಮುರಿದು ಸ್ಥಿತಿ ಗಂಭೀರವಾಗಿದೆ. ಅದೇ…

Read More

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು ನೀಡಬೇಕು : ಎಂ ಶ್ರೀಕಾಂತ್|Jds

ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಎಂ.ಶ್ರೀಕಾಂತ್ ಕಾರ್ಯಕರ್ತರಿಗೆ ಕರೆ ನೀಡಿದರು. ಶಿವಮೊಗ್ಗದ ನೆಹರು ರಸ್ತೆಯ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿನಿಂದ ಬೂತ್ ಮಟ್ಟದ ಕಮಿಟಿ ನಿರ್ಮಾಣ ಮಾಡುವುದು ಮತ್ತು ಪ್ರತಿ ಕ್ಷೇತ್ರದಿಂದ 50 ಅಲ್ಪಸಂಖ್ಯಾತ ಪ್ರಮುಖರ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ಪ್ರಮುಖರು ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರಸ್ತುತ…

Read More

ರಿಪ್ಪನ್‌ಪೇಟೆ – ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ|accident

ರಿಪ್ಪನ್‌ಪೇಟೆ – ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಸೂಡೂರು ಗೇಟ್ ಬಳಿಯ ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದೆ.  ರಿಪ್ಪನ್ ಪೇಟೆಯಿಂದ‌ ಶಿವಮೊಗ್ಗದ ಕಡೆ ಹೋಗುವಾಗ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಮೂಲದ ನಾಲ್ಕು ಜನ ಸಿಗಂದೂರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಹಿಂದಿರುಗುತಿದ್ದಾಗ ಸೂಡೂರು ಗೇಟ್ ಬಳಿಯ ತಿರುವಿನಲ್ಲಿ…

Read More

ನಾಳೆ(01-05-2023) ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್|ಬೇಳೂರು ಪರ ಚುನಾವಣಾ ಪ್ರಚಾರ

ರಿಪ್ಪನ್‌ಪೇಟೆ : ದಿನಾಂಕ 0152023 ರ ಸೋಮವಾರ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬೇಳೂರು ಗೋಪಾಲಕೃಷ್ಣ ರವರ ಪರವಾಗಿ ಮತ ಯಾಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಪ್ಪನ್‌ಪೇಟೆ, ಹೊಸನಗರ,ಆನಂದಪುರ ಮತ್ತು ಸಾಗರಕ್ಕೆ ಆಗಮಿಸಲಿದ್ದಾರೆ. ಇಂದು ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ರವರ ಪರವಾಗಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಳೆ 10.30 ಕ್ಕೆ ಹೊಸನಗರ ,ಮಧ್ಯಾಹ…

Read More
Exit mobile version