Headlines

ಪ್ರಕಾಶ್ ಬಸ್ ನ ಮಾಲೀಕರ ಮೊಬೈಲ್ ಹಾಗೂ ಕಾರು ಪಟಗುಪ್ಪ ಸೇತುವೆ ಬಳಿ ಪತ್ತೆ : ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟ ಬಸ್ ಮಾಲೀಕನ ನಡೆ

ಹೊಸನಗರ ಸಮೀಪದ ಪಟಗುಪ್ಪೆ ಸೇತುವೆಯ ಬಳಿ ಸಾಗರದ ಪ್ರಕಾಶ್ ಬಸ್ ನ ಮಾಲೀಕರಾದ ಪ್ರಕಾಶ್ ರವರ ಕಾರು ಹಾಗೂ ಮೊಬೈಲ್ ಪತ್ತೆಯಾಗಿರುವುದು ಹಲವು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಸಾಗರದ ಪ್ರಕಾಶ್ ಬಸ್ ನ ಮಾಲೀಕರಾದ ಪ್ರಕಾಶ್ ರವರು ಶುಕ್ರವಾರ ಸಂಜೆಯಿಂದಲೇ ಮನೆಯಿಂದ ನಾಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಟಗುಪ್ಪ ಸೇತುವೆಯ ಬಳಿ ನೂರಾರು ಜನರು ಸೇರಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ದಳದವರು ಹಾಜರಿದ್ದು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಹೊಸನಗರ ಪೋಲೀಸರು ಸ್ಥಳಕ್ಕಾಗಮಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Read More

ಒಂದೇ ಕುಟುಂಬದ ನಾಲ್ವರು ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ

ಒಂದೇ ಕುಟುಂಬದ ನಾಲ್ವರು ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ Four members of the same family from Buddhanagar in Shivamogga have been missing since April 15. Doddapete police have appealed to the public to provide any information about the missing persons. ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧನಗರ ನಿವಾಸಿಗಳಾದ ಒಂದೇ ಕುಟುಂಬದ ನಾಲ್ವರು ಕಳೆದ ಏಪ್ರಿಲ್ 15ರಿಂದ ಕಾಣೆಯಾಗಿರುವ ಘಟನೆ…

Read More

Ripponpete | ಹೃದಯಾಘಾತದಿಂದ ಸಚಿನ್ ಶೆಟ್ಟಿ ಸಾವು

Ripponpete | ಹೃದಯಾಘಾತದಿಂದ ಸಚಿನ್ ಶೆಟ್ಟಿ ಸಾವು ರಿಪ್ಪನ್‌ಪೇಟೆ : ಪಟ್ಟಣದ ಶಬರೀಶನಗರದ ಯುವಕನೊಬ್ಬ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಶಬರೀಶ ನಗರದ ಸಚಿನ್ ಶೆಟ್ಟಿ(30) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಶಬರೀಶ ನಗರದ ನಿವಾಸಿ ವಾಸು ಶೆಟ್ಟಿ ಎಂಬುವವರ ಪುತ್ರನಾದ ಸಚಿನ್ ಶೆಟ್ಟಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದನು. ಇಂದು ಬೆಳಿಗ್ಗೆ ಕೆಲಸಕ್ಕೆ ಹೊರಡುವಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಷ್ಟರಲ್ಲಾಗಲೇ ಸಚಿನ್ ಮೃತಪಟ್ಟಿದ್ದಾನೆ….

Read More

Ripponpete | ಶ್ರದ್ದಾಭಕ್ತಿಯ ನಾಮಸ್ಮರಣೆ ಶಾಂತಿ ನೆಮ್ಮದಿ ಕರುಣಿಸುತ್ತದೆ – ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ

ಶ್ರದ್ದಾಭಕ್ತಿಯ ನಾಮಸ್ಮರಣೆ ಶಾಂತಿ ನೆಮ್ಮದಿ ಕರುಣಿಸುತ್ತದೆ – ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ರಿಪ್ಪನ್‌ಪೇಟೆ ಸಿದ್ದಿವಿನಾಯಕ ದೇವಸ್ಥಾನ ಮುಂದೊಂದು ದಿನ ಪುಣ್ಯ ಕ್ಷೇತ್ರವಾಗಲಿದೆ – ಹೊಂಬುಜ ಶ್ರೀಗಳು ರಿಪ್ಪನ್‌ಪೇಟೆ : ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ನಮ್ಮ ಹೃದಯಗಳಲ್ಲಿ ನೆಲೆಸುತ್ತಾನೆ.ಶ್ರದ್ದಾಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಶಾಂತಿ ನೆಮ್ಮದಿ ಕರುಣಿಸುತ್ತಾನೆಂದು ಅನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿಜಿ ಹೇಳಿದರು. ರಿಪ್ಪನ್‌ಪೇಟೆಯ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಇಂದು ಆಯೋಜಿಸಲಾದ ಧಾರ್ಮಿಕ ಧರ್ಮಜಾಗೃತಿ ಸಮಾರಂಭದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ…

Read More

ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ

Ripponpete police introduce an online traffic fine system where rule violations like riding without a helmet or triple riding are captured via mobile cameras and fines are sent directly to vehicle owners through SMS. ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ ಹೆಲ್ಮೆಟ್ ಹಾಕದೇ ಪೇಟೆಗೆ ಬರ್ತೀರಾ? ಹುಷಾರ್… ಮೊಬೈಲ್‌ಗೆ ‘ಟಿನ್’ ಅಂತ ದಂಡದ ಮೆಸೇಜ್…

Read More

ಹೊಸನಗರ ಸಮೀಪ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ : ಕಾರು ಚಾಲಕ ಶ್ರೀರಾಮ್ ಫ಼ೈನಾನ್ಸ್ ಉದ್ಯೋಗಿ ಸ್ಥಳದಲ್ಲೆ ಸಾವು :

ಹೊಸನಗರ: ಮಾರುತಿಪುರ ಸಮೀಪ ಹೊಸಕೆಸರೆ-  ದರೋಡೆಕಾನ್  ಸಮೀಪ ಸರಕು ತುಂಬಿದ ಲಾರಿ  ಹಾಗೂ ಮಾರುತಿ ಆಲ್ಟೊ ಕಾರಿನ ಮದ್ಯೆ ನಿನ್ನೆ ರಾತ್ರಿ ಸುಮಾರು 10-30 ರ ಸಮಯದಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಅಪಘಾತದ ರಭಸಕ್ಕೆ ಕಾರು ಸಂಪೂರ್ಣ  ನಜ್ಜು – ಗುಜ್ಜಾಗಿದ್ದು ಚಾಲಕ ವಿನಯ ಗೌಡ( 26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಚಾಲಕ ವಿನಯ ಗೌಡ ಸಾಗರದಲ್ಲಿ ಶ್ರೀರಾಮ್ ಫೈನಾನ್ಸ್ ಉದ್ಯೋಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಚಾಲಕ ವಿನಯ್ ಗೌಡ (26) ಬಾಣಿಗದಿಂದ ಊಟವನ್ನು ಮುಗಿಸಿಕೊಂಡು ಸಾಗರಕ್ಕೆ…

Read More

ತುಂಗಾ ನದಿಯ ತೀರದಲ್ಲಿ ವಿಜೃಂಭಣೆಯ ತೆಪ್ಪೋತ್ಸವ – ಸಡಗರದ ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಜನ|thirthahalli

ತೀರ್ಥಹಳ್ಳಿ: ತುಂಗಾ ನದಿಯ ದಂಡೆಯ  ಮೇಲಿನಿಂದ ಸಿಡಿದ ಸಿಡಿಮದ್ದುಗಳು ವರ್ಣರಂಜಿತವಾಗಿ ಮುಗಿಲಿಗೆ ಅಪ್ಪಳಿಸಿದವು. ಮರಳು ದಿಬ್ಬದ ಮೇಲೆ ಹಾತೊರೆದು ಕುಳಿತಿದ್ದ ಜನತೆ ಕೇಕೆ ಹಾಕಿದರು.  ಶ್ರೀ ರಾಮೇಶ್ವರ ಎಳ್ಳಾಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ಭಾನುವಾರ ತುಂಗಾನದಿಯಲ್ಲಿ ದೇವರ ತೆಪ್ಪೋತ್ಸವ ಜನಾಕರ್ಷಣೆಯ ಕೇಂದ್ರ ಬಿಂದುವಾಯಿತು. ತೆಪ್ಪೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ತುಂಗಾ ನದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಮೂರು ಸುತ್ತು ನದಿಯಲ್ಲಿ ತಿರುಗಿಸಿ ಪೂಜೆ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ…

Read More

ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ – ಆರೋಪಿ ಪೊಲೀಸ್‌ ವಶಕ್ಕೆ..!!

ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ – ಆರೋಪಿ ಪೊಲೀಸ್‌ ವಶಕ್ಕೆ..!! ಭಿನ್ನಕೋಮಿನ ಯುವಕರ ಮಧ್ಯೆ ಕ್ಷುಲಕ ಕಾರಣಕ್ಕೆ ಆರಂಭವಾದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಶನಿವಾರ (ಮಾ.15) ರಾತ್ರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಮಾಸೂರು ಸರ್ಕಲ್ ನಲ್ಲಿ ನಡೆದಿದೆ. ಶಿಕಾರಿಪುರ ಪಟ್ಟಣದ ಮಾಸೂರು ಸರ್ಕಲ್ ನಲ್ಲಿ ವಾಹನ ದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ ಬೈಕ್ ನ ಹಾರ್ನ್ ಹೊಡೆದ ವಿಷಯಕ್ಕೆ ಸಂಬಂಧಿಸಿದಂತೆ ಯುವಕರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಘಟನೆ ನಡೆದ…

Read More

ಆಗುಂಬೆ ಪೊಲೀಸರ ಭರ್ಜರಿ ಭೇಟೆ : ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ

ಆಗುಂಬೆ :  ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಲಾಗಿದೆ.  ರಾತ್ರಿ ವೇಳೆ ಗಸ್ತಿನಲ್ಲಿದ್ದ ಎಸ್ ಐ ಶಿವಕುಮಾರ್ ಅವರ ತಂಡ ತಪಾಸಣೆ ವೇಳೆ ಹನ್ನೊಂದು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ ಒಂದು  ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರು ಧಾರವಾಡ ಮಂಗಳೂರು ಮಂಡ್ಯ ಈ ಜಿಲ್ಲೆಗಳಲ್ಲಿ ಒಟ್ಟು ಹನ್ನೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.  ಕಾರ್ಯಾಚರಣೆಯಲ್ಲಿ ಆಗುಂಬೆಯ ಪಿ ಎಸ್ ಐ ಶಿವಕುಮಾರ್ ,  ಸಿಬ್ಬಂದಿಗಳಾದ ದೇವದಾಸ್ ನಾಯಕ್, ವೀರೆಂದ್ರ,…

Read More

ಭಾರತ ತಂಡದ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತ್ – ಗಂಭೀರ ಸ್ಥಿತಿಯಲ್ಲಿ ರಿಷಬ್ : ಕಾರು ಸಂಪೂರ್ಣ ಭಸ್ಮ|Rishab

ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ರಿಷಬ್ ಪಂತ್ ಕಾರು ಅಪಘಾತಕ್ಕೀಡಾಗಿದ್ದು ಕಾರು ಸಂಪೂರ್ಣ ಭಸ್ಮವಾಗಿದ್ದು ಪಂತ್ ಸ್ಥಿತಿ ಗಂಭೀರವಾಗಿದೆ. ಟೀಮ್ ಇಂಡಿಯಾ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.  ದೆಹಲಿಯಲ್ಲಿ ಮನೆಗೆ ನಿರ್ಗಮಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಸಂಪೂರ್ಣ ಭಸ್ಮವಾಗಿದೆ. ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ರಿಷಭ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ರವಾನಿಸಲಾಗಿದೆ. ರಿಷಭ್ ಪಂತ್ ಅವರ ಹಣೆ ಮತ್ತು ಕಾಲಿಗೆ…

Read More
Exit mobile version