ಕಬ್ಬಿಣವನ್ನು ಬಂಗಾರ ಮಾಡಿದವರಿಂದ ಸೊರಗಿ ಹೋಗಿದ್ದ ಜಿಲ್ಲಾ ಸಹಕಾರಿ ಬ್ಯಾಂಕ್ ಈಗ ಸುಭದ್ರವಾಗಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ|Talale
ರಿಪ್ಪನ್‌ಪೇಟೆ : ಸಹಕಾರ ಸಂಘದಲ್ಲಿ ಮೇವು ಉಂಡು ಜೀರ್ಣಿಸಿಕೊಂಡು ಕಬ್ಬಿಣವನ್ನು ಬಂಗಾರ ಮಾಡಿದ ಮಹಾನುಭಾವರಿಂದ ಸಹಕಾರಿ ಸಂಘಗಳು ಮುಳುಗಿ ಹೋದವು ಎಂಬ ಪರಿಸ್ಥಿತಿ ಉದ್ಬವಿಸಿದಾಗ ಉತ್ತಮ ಆಡಳಿತ ನೀಡಿ ಜಿಲ್ಲಾ ಸಹಕಾರಿ ಬ್ಯಾಂಕ್ ನ್ನು ಪುನಶ್ಚೇತನಗೊಳಿಸಿ ಎತ್ತರಕ್ಕೆ ಏರಿಸುವ ಮೂಲಕ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪನವರು ಜನಮನ್ನಣೆ ಗಳಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಲ್ಲಿನ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇವರು ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿದ ಬಹುಸೇವಾ…


