Headlines

Ex Mla |ರಿಪ್ಪನ್‌ಪೇಟೆ : ಮಾಜಿ ಶಾಸಕ ಡಾ. ಉಮಾಕಾಂತ್ ಬಿ ಬೋರ್ಕರ್ ನಿಧನ

ರಿಪ್ಪನ್‌ಪೇಟೆ : ಶಿರಸಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬೋರ್ಕರ್ ಉಮಾಕಾಂತ್(84) ರವರು ಇಂದು ಮುಂಜಾನೆ ವಯೋಸಹಜ ನಿಧನರಾಗಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬೋರ್ಕರ್ ಉಮಾಕಾಂತ್ ಗೆಲುವು ಸಾಧಿಸಿದ್ದರು. ಹಲವಾರು ವರ್ಷಗಳಿಂದ ಅವರು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮದಲ್ಲಿ ವಾಸಿಸುತಿದ್ದು ಅವರ ಪತ್ನಿ ಮಂಜುಳಾ ಬೋರ್ಕರ್ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. 1978 ರಲ್ಲಿ ತುರ್ತು ಪರಿಸ್ಥಿತಿಯ ಪ್ರಭಾವದಿಂದ ಬೋರ್ಕರ್ ಉಮಾಕಾಂತ್ ಕಾಂಗ್ರೆಸ್‌ನ ರೇವಣಕರ್‌ ಶಂಕರ್‌ ಪುರುಷೋತ್ತಮ್‌…

Read More

Ripponpet | ತಾಯಿಯಿಂದಲೇ ಹೆತ್ತಮಕ್ಕಳನ್ನು ಬಿಕ್ಷಾಟನೆಗೆ ಬಳಕೆ – ಪಟ್ಟಣದಲ್ಲೊಂದು ಮನಕಲಕುವ ಘಟನೆ

Ripponpet | ತಾಯಿಯಿಂದಲೇ ಹೆತ್ತಮಕ್ಕಳನ್ನು ಬಿಕ್ಷಾಟನೆಗೆ ಬಳಕೆ – ಠಾಣೆಗೆ ಕರೆಸಿ ವಾರ್ನಿಂಗ್ ನೀಡಿದ ಪಿಎಸ್‌ಐ ಪ್ರವೀಣ್  ರಿಪ್ಪನ್‌ಪೇಟೆ;-ಇಲ್ಲಿನ ಶಿವಮೊಗ್ಗ ರಸ್ತೆಯ ಖಾಸಗಿ ಶ್ರೀನಂದಿ ಆಸ್ಪತ್ರೆಯ ಎದುರಿನಲ್ಲಿ ಹೆತ್ತಮಕ್ಕಳಿಗೆ ಬೀಕ್ಷಾಟನೆ ಮಾಡುವಂತೆ ಮಕ್ಕಳ ಕೈಗೆ ತಟ್ಟೆಕೊಟ್ಟು ಬಲತ್ಕಾರದಿಂದ ಬಿಕ್ಷೆ ಬೇಡುವಂತೆ ತಾಯಿಯೇ ಮಕ್ಕಳನ್ನು ಬಿಕ್ಷಾಟನೆಗೆ ಬಳಸುತಿದ್ದ ಘಟನೆಗೆ ಪಟ್ಟಣದ ಪಿಎಸ್‌ಐ ತಾಯಿಗೆ ವಾರ್ನಿಂಗ್ ಕೊಟ್ಟು ಕಳಿಸಿದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಪಟ್ಟಣದ ನಂದಿ ಆಸ್ಪತ್ರೆಯ ಮುಂಭಾಗದಲ್ಲಿ ತಾಯಿಯೇ ಮಕಕ್ಳನ್ನು ಭಿಕ್ಷಾಟನೆಗೆ ಅಣಿಗೊಳಿಸುತ್ತಿರುವುದನ್ನು ಸೂಕ್ಷö್ಮವಾಗಿ ಗಮನಿಸಿದ ಸಾಮಾಜಿಕ…

Read More

ಅಂಬೇಡ್ಕರ್ ಆದರ್ಶಗಳು ಯುವಜನತೆಗೆ ಮಾರ್ಗದರ್ಶಿ: ಆರಗ ಜ್ಞಾನೇಂದ್ರ

ಅಂಬೇಡ್ಕರ್ ಆದರ್ಶಗಳು ಯುವಜನತೆಗೆ ಮಾರ್ಗದರ್ಶಿ: ಆರಗ ಜ್ಞಾನೇಂದ್ರ The 135th Ambedkar Jayanti and Pratibha Puraskar program was held at Billeshwara Ambedkar Bhavan in Huncha Gram Panchayat, where legislators highlighted Dr. B.R. Ambedkar’s ideals and honored talented students. ತೀರ್ಥಹಳ್ಳಿ ತಾಲ್ಲೂಕಿನ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಲ್ಲೆಶ್ವರ ಅಂಬೇಡ್ಕರ್ ಭವನದಲ್ಲಿ 135ನೇ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಭಾನುವಾರ ಅದ್ಧೂರಿಯಾಗಿ…

Read More

RIPPONPETE | ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಶ್ರದ್ದಾಂಜಲಿ

RIPPONPETE | ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಶ್ರದ್ದಾಂಜಲಿ ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ದೇಶಪ್ರೆಮ ದಿನ ಹಾಗೂ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ಕರಾಳ ದಿನ ಆಚರಿಸಲಾಯಿತು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು ಮೇಣದಬತ್ತಿ ಬೆಳಗಿಸಿ ಅವರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು. ವಿಶ್ವ ದೇಶಪ್ರೆಮಿಗಳಿಗೆ ಜಯವಾಗಲಿ, ಭಾರತ್ ಮಾತಾಕಿ ಜೈ ವಂದೇ ಮಾತರಂ ,ವೀರ ಯೋಧರು ಅಮರರಾಗಲಿ ,ಸೆನಿಕರ ದಿನಾಚರಣೆ…

Read More

Hosanagara | ಗೊಂದಲದ ಗೂಡಾದ ಕೊಡಚಾದ್ರಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ

ಗೊಂದಲದ ಗೂಡಾದ ಕೊಡಚಾದ್ರಿ ಕಾಲೇಜಿನ ಎನ್‌ಎಸ್‌ಎಸ್(NSS) ಶಿಬಿರ ಹೊಸನಗರದ(Hosanagara) ಕೊಡಚಾದ್ರಿ(kodachadri) ಸರಕಾರಿ ಪ್ರಥಮದರ್ಜೆ ಕಾಲೇಜು ತಾಲೂಕಿನ ಮಾರುತಿಪುರದಲ್ಲಿ (maruthipura) ಹಮ್ಮಿಕೊಂಡಿರುವ NSS ಶಿಬಿರವು ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಸದಾ ಒಂದಿಲ್ಲೊಂದು ಯಡವಟ್ಟಿನ ಮೂಲಕ ಸುದ್ದಿಯಲ್ಲಿರುವ ಕೊಡಚಾದ್ರಿ ಕಾಲೇಜಿನ NSS ಶಿಬಿರದ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜನವರಿ 12ರಿಂದ ಆರಂಭಗೊಂಡು ಜ.18ರ ವರೆಗೆ ನಡೆಯಲಿರುವ ಈ ಶಿಬಿರದ ಕೆಲ ಅವ್ಯವಸ್ಥೆಗಳು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿವೆ. ಸ್ಥಳೀಯರ ಸಂಪರ್ಕವಿಲ್ಲ:  ರಾಷ್ಟ್ರೀಯ ಸೇವಾ ಯೋಜನೆಯ ಮೂಲತತ್ವವೇ ಸಮುದಾಯ…

Read More

ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ 25 ಲಕ್ಷ ಪರಿಹಾರದ ಚೆಕ್ ವಿತರಿಸಿದ ಯಡಿಯೂರಪ್ಪ

ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ನಡೆದಿತ್ತು. ಕರ್ನಾಟಕ ಸರ್ಕಾರ ಹರ್ಷ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ಘೋಷಣೆ ಮಾಡಿತ್ತು.ಇಂದು ಪರಿಹಾರದ ಚೆಕ್ ಹಸ್ತಾಂತರ ಮಾಡಲಾಗಿದೆ. ಭಾನುವಾರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಮನೆಗೆ ಇಂದು ಭೇಟಿ ನೀಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ರಾಜ್ಯ ಸರ್ಕಾರದ ವತಿಯಿಂದ 25 ರೂ. ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು. ಫೆಬ್ರವರಿ 20ರಂದು ರಾತ್ರಿ ಹರ್ಷ ಕೊಲೆಯಾಗಿತ್ತು….

Read More

ಹೊಂಬುಜ,ಮೂಲೆಗದ್ದೆ, ಮಳಲಿ ಶ್ರೀ , ಅಭಿನವ ಚನ್ನಬಸವ ಶ್ರೀ ಹಾಗೂ ಕೋಣಂದೂರಿನ ಬೃಹನ್ಮಠ ಶ್ರೀಗಳಿಂದ ಮತ ಚಲಾವಣೆ | Election

ಹೊಂಬುಜ,ಮೂಲೆಗದ್ದೆ, ಮಳಲಿ ಶ್ರೀ , ಅಭಿನವ ಚನ್ನಬಸವ ಶ್ರೀ ಹಾಗೂ ಕೋಣಂದೂರಿನ ಬೃಹನ್ಮಠ ಶ್ರೀಗಳಿಂದ ಮತ ಚಲಾವಣೆ | Election ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಹೊಂಬುಜ ಮಠದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಸ್ವಾಮಿಗಳು ಹೊಸನಗರ ತಾಲೂಕಿನ ಹುಂಚ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮೂಲೆಗದ್ದೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಹೊಸನಗರ ತಾಲೂಕಿನ…

Read More

ಗಡಿಪಾರು ಆದೇಶಕ್ಕೆ ಹೆದರಿ ವಿಷ ಸೇವಿಸಿದ ತೀರ್ಥಹಳ್ಳಿಯ ರೌಡಿ ಶೀಟರ್ ಕೋಬ್ರಾ ಸುಹೈಲ್ – ಸ್ಥಿತಿ ಗಂಭೀರ|Thirthahalli

ತೀರ್ಥಹಳ್ಳಿ : ಗಡಿಪಾರು ಆದೇಶದ ಕಾರಣ ಕೇಳಿ ನೋಟೀಸ್ ನೀಡುತ್ತಿದ್ದಂತೆ ರೌಡಿ ಶೀಟರ್ ಕೋಬ್ರಾ ಸುಹೇಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಒಂದು ವಾರದ ಹಿಂದೆ ತೀರ್ಥಹಳ್ಳಿ  ಪೊಲೀಸರು  ರೌಡಿಶೀಟರ್ ಕೋಬ್ರಾ ಸುಹೇಲ್ ನಿಗೆ ಗೆರಡು ವರ್ಷ ಗಳ ಕಾಲ ಗಡಿಫಾರು ಯಾಕೆ ಮಾಡಬಾರದು ಎಂದು ಕಾರಣಕೇಳಿ ನೋಟೀಸ್ ಜಾರಿ ಮಾಡಿದ್ದರು. ಪೊಲೀಸ್ ನೋಟೀಸ್ ತಲುಪಿ ಎರಡು ದಿನಕ್ಕೆ ಆತ ಆತ್ಮಹತ್ಯೆಗೆ ಯತ್ನಿಸಿ ಈಗ ಮಂಗಳೂರಿನ ಎನಪೋಯ ಆಸ್ಪತ್ರೆಗೆ ದಾಖಾಗಿದ್ದಾನೆ. ಇಂದಿರಾ ನಗರ ನಿವಾಸಿ…

Read More

ಶಿವಮೊಗ್ಗದ ಬಿಕ್ಕೊನಹಳ್ಳಿಯಲ್ಲಿ ನರಬಲಿ ಪಡೆದಿದ್ದ ಚಿರತೆ ಸೆರೆ|leopard

ಶಿವಮೊಗ್ಗದ ಬಿಕ್ಕೊನಹಳ್ಳಿಯಲ್ಲಿ ನರಬಲಿ ಪಡೆದಿದ್ದ ಚಿರತೆ ಸೆರೆ ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮಹಿಳೆಯೊಬ್ಬರ ಮೇಲೆ ಎರಗಿ ಕೊಂದು ಹಾಕಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಬೇಟೆಯಾಡಲು ಅಂದಿನಿಂದಲೇ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಶುಕ್ರವಾರ ಬನ್ನಿಕೆರೆಯ ಹೊಲದಲ್ಲಿ ಕಳೆ ಕೀಳಲು ತೆರಳಿದ್ದ ಯುವಕನೋರ್ವನಿಗೆ ಚಿರತೆ ಕಾಣಿಸಿಕೊಂಡಿತ್ತು. ಆ ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಕಳೆದ ರಾತ್ರಿ ಚಿರತೆ…

Read More

“ಮೋದಿ ರಾಂಗ್ ನಂಬರ್”-“ಬಿಜೆಪಿ ರಾಂಗ್ ನಂಬರ್ ” : ವಿನೂತನ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿ ಸಂಘಟನೆ|modi-wrong-number

ಶಿವಮೊಗ್ಗ : ಬೆಲೆ ಏರಿಕೆ, ಭ್ರಷ್ಠಾಚಾರ, ಕಳಪೆ ಕಾಮಗಾರಿ, ಜಾತಿ ಧರ್ಮದ ನಡುವಿನ ವೈಷಮ್ಯ ಕುರಿತು ವಿದ್ಯಾರ್ಥಿ ಸಂಘಟನೆ ವಿನೂತನ ಪ್ರತಿಭಟನೆಗೆ ಮುಂದಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಈ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ. ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಸಂಘಟನೆಯ ಸಂಸ್ಥಾಪಕರ ಅಧ್ಯಕ್ಷ ವಿನಯ್ ಕೆ ಸಿ ರಾಜವತ್ “ಮೋದಿ ರಾಂಗ್ ನಂಬರ್” “ಬಿಜೆಪಿ ರಾಂಗ್ ನಂಬರ್ ” ಎಂಬ ಘೋಷಣೆ ಅಡಿ ಮಾ.30 ರಂದು  ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಕೇಂದ್ರ…

Read More
Exit mobile version