ಗೃಹಸಚಿವರ ಸ್ವ ಕ್ಷೇತ್ರದ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು !!!
ತೀರ್ಥಹಳ್ಳಿ : ಗೃಹಸಚಿವ ಆರಗ ಜ್ಞಾನೇಂದ್ರ ಅವರ ತವರೂರಾದ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಇಂದು ನೆಡೆದಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗಳು ಜಯಭೇರಿಯನ್ನು ಬಾರಿಸಿದ್ದಾರೆ. ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಶಬನಂ ಹಾಗೂ ಜಯಪ್ರಕಾಶ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಜ್ಯೋತಿ ಮೋಹನ್ ಹಾಗೂ ರವೀಶ್ ( ಬಾಬೀ ) ನಾಮಪತ್ರ ಸಲ್ಲಿಸಿದ್ದರು. ಆಪರೇಷನ್ ಕಮಲದ ಬಗ್ಗೆ ತೀರ್ಥಹಳ್ಳಿಯಲ್ಲಿ ಬಾರಿ ಚರ್ಚೆ ನೆಡೆದಿದ್ದರು ಇಂದು ಸಂದೇಶ್ ಜವಳಿ ಮಾತನಾಡಿ…


