Headlines

ಶಿವಮೊಗ್ಗದ ನಡುರಸ್ತೆಯಲ್ಲೇ ಜೋಡಿ ಕೊಲೆ – ಮಾರಕಾಸ್ತ್ರಗಳಿಂದ ಕೊಚ್ಚಿ,ಕಲ್ಲು ಎತ್ತಿಹಾಕಿ ಕೊಲೆ | Crime news

ಶಿವಮೊಗ್ಗದ ನಡುರಸ್ತೆಯಲ್ಲೇ ಜೋಡಿ ಕೊಲೆ – ಮಾರಕಾಸ್ತ್ರಗಳಿಂದ ಕೊಚ್ಚಿ,ಕಲ್ಲು ಎತ್ತಿಹಾಕಿ ಕೊಲೆ ಲೋಕಸಭಾ ಚುನಾವಣೆಯ ಕಾವು ತಣ್ಣಗಾಗುತ್ತಿದ್ದಂತೆ ಶಿವಮೊಗ್ಗದ ಪಾತಕ ಲೋಕ ಮತ್ತೆ ಹೆಡೆಬಿಚ್ಚಿದೆ. ಇಂದು ಶಿವಮೊಗ್ಗದ ಜನನಿಬಿಡ ರಸ್ತೆಯಲ್ಲಿ ರೌಡಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯಾದರೆ ಹತ್ಯೆಮಾಡಲು ಬಂದ ಗ್ಯಾಂಗಿನ ಇಬ್ಬರು ನಡು ರಸ್ತೆಯಲ್ಲೆ ಹೆಣವಾಗಿ ಹೋಗಿದ್ದಾರೆ.! ಹೌದು ಇಬ್ಬರ ಹತ್ಯೆಯಾದ ಸ್ಥಳವನ್ನು ನೋಡಿದರೆ ಇದೊಂದು ಡೆಂಜರಸ್ ಅಟ್ಯಾಕ್ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.!? ಶೊಯೆಬ್ ಹಾಗೂ ಗೌಸ್ ಹತ್ಯೆಯಾದ ವ್ಯಕ್ತಿಗಳಾಗಿದ್ದಾರೆ. ಹಂತಕರು ಯಾವ ಮಟ್ಟಕ್ಕೆ ರಿವೆಂಜ್…

Read More

ಸಾಲಗಾರರ ಕಾಟಕ್ಕೆ ಬೇಸತ್ತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಸಾವು

ಸಾಲಗಾರರ ಕಾಟಕ್ಕೆ ಬೇಸತ್ತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಸಾವು ತೀರ್ಥಹಳ್ಳಿ : ಸಾಲಗಾರರ ಕಾಟ ತಾಳಲಾರದೆ ಮನನೊಂದು ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಗುಂಬೆ ಸಮೀಪದ ಬಿದರಗೋಡಿನಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಬಿದರಗೋಡು ವ್ಯಾಪ್ತಿಯ ಹೊಳೆಗದ್ದೆ  ಪ್ರಶಾಂತ್ (32) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ವರ್ಷದ ಹಿಂದೆ ಪತ್ನಿಯಿಂದ ವಿಚ್ಚೆದನವಾಗಿತ್ತು ಎನ್ನಲಾಗುತ್ತಿದೆ.

Read More

ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ , ಶಾಲಾ ಮಕ್ಕಳಿಗೆ ಸಿಹಿ ಹಂಚಿಕೆ

ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ , ಶಾಲಾ ಮಕ್ಕಳಿಗೆ ಸಿಹಿ ಹಂಚಿಕೆ ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಸಾಗರ – ಹೊಸನಗರ ಕ್ಷೇತ್ರದ ಶಾಸಕರಾದ  ಗೋಪಾಲಕೃಷ್ಣ ಬೇಳೂರು ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರಿಪ್ಪನ್‌ಪೇಟೆ ಘಟಕದ ಅಧ್ಯಕ್ಷ ಗಣಪತಿ ಗವಟೂರು ನೇತ್ರತ್ವದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ…

Read More

ವಾಲಿಬಾಲ್ ತರಬೇತಿ ನೀಡುತಿದ್ದ ಶಿಕ್ಷಕ ಹೃದಯಾಘಾತದಿಂದ ಕುಸಿದು ಬಿದ್ದು ಸಾವು

ವಾಲಿಬಾಲ್ ತರಬೇತಿ ನೀಡುತಿದ್ದ ಶಿಕ್ಷಕ ಹೃದಯಾಘಾತದಿಂದ ಕುಸಿದು ಬಿದ್ದು ಸಾವು ಶಾಲಾವರಣದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಶಿಕ್ಷಕರೊಬ್ಬರು ಕುಸಿದು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಅ.16ರ ಬುಧವಾರ ನಡೆದಿದೆ. ಸಾಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಜಾನನ ಹಿರೇಮಠ (50) ನಿಧನ ಹೊಂದಿದವರು.ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಶಿಕ್ಷಕ ಗಜಾನನ ಅವರು ತಮ್ಮ ಕ್ರಿಯಾಶೀಲತೆಯಿಂದ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ, ಪೋಷಕರೊಂದಿಗೆ ಅತ್ಯುತ್ತಮ ಸಂಬಂಧ…

Read More

ಸಾಗರ ನಗರಸಭೆ ಅಧಿಕಾರಿಗಳ ಗೂಂಡಾವರ್ತನೆ – ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದ ಅಧಿಕಾರಿಗಳು|Sagara

ಸಾಗರ : ನಗರಸಭೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಬಳಿ ಬೀದಿ ಬದಿಯಲ್ಲಿ ಹೊಟ್ಟೆಪಾಡಿಗೆ ಹಣ್ಣು ವ್ಯಾಪಾರ ಮಾಡುವವರನ್ನು ನಗರಸಭೆ ಅಧಿಕಾರಿಗಳು ಬೀದಿಗೆ ತಳ್ಳಿದ್ದಾರೆ.ರಾತ್ರೋರಾತ್ರಿ ಕಳ್ಳರ ಹಾಗೆ ಬಂದು ಅಂಗಡಿಗಳನ್ನು ತೆರವುಗೊಳಿಸಿ ಬಡವರ ಮೇಲೆ ತಮ್ಮ ಶೂರತನ ಮೆರೆದಿದ್ದಾರೆ. ಸಾಲ ಮಾಡಿ ತಂದು ನಾಲ್ಕಾಣೆ ಲಾಭಕ್ಕೆ ಮಾರಾಟ ಮಾಡಿ ತನ್ನ ಹಾಗೂ ಕುಟುಂಬದ ಹೊಟ್ಟೆಪಾಡಿಗಾಗಿ ತಂದಿದ್ದ ಹಣ್ಣುಗಳನ್ನು ರಸ್ತೆಯ ತುಂಬ ಚೆಲ್ಲಾಡಿ ರಾಕ್ಷಸರಂತೆ ವರ್ತಿಸಿದ್ದಾರೆ. ಸಾಗರ ನಗರ ವ್ಯಾಪ್ತಿಯಲ್ಲಿ ಬಹುತೇಕ ಬಡವರು,ಅವಿದ್ಯಾವಂತರು ದೊಡ್ಡ ದೊಡ್ಡ ಮಳಿಗೆಯನ್ನು ಬಾಡಿಗೆ ಪಡೆದು…

Read More

ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ನೆರೆ ಹಾವಳಿಗೆ ತುತ್ತಾಗಿದ್ದ ಬಡ ಕುಟುಂಬದ ಮನೆ ದುರಸ್ತಿ

ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ನೆರೆ ಹಾವಳಿಗೆ ತುತ್ತಾಗಿದ್ದ ಬಡ ಕುಟುಂಬದ ಮನೆ ದುರಸ್ತಿ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ರವರ ಹುಟ್ಟುಹಬ್ಬ ಫೆಬ್ರವರಿ 22 ರಂದು ಆಚರಿಸುತಿದ್ದು ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು  ಮಾನವೀಯ ಕೆಲಸವೊಂದನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹೌದು ಹೊಸನಗರ ತಾಲೂಕಿನ ನಿಟ್ಟೂರು ಭಾಗದ ಬಡ ಬ್ರಾಹ್ಮಣ ಜನಾಂಗದ ದಂಪತಿಗಳಿಬ್ಬರು ನೆರೆ ಹಾವಳಿಯಿಂದ ತಮ್ಮ ಮನೆ ಶಿಥಿಲಾವಸ್ಥೆಗೆ ತಲುಪಿತ್ತು ಸರ್ಕಾರದ…

Read More

ಅಕ್ರಮ ಮರಳು ಸಾಗಾಣಿಕೆ: 2 ಟಿಪ್ಪರ್ ವಶ

ಅಕ್ರಮ ಮರಳು ಸಾಗಾಣಿಕೆ: 2 ಟಿಪ್ಪರ್ ವಶ ಹೊಸನಗರ: ಖಚಿತ ಮಾಹಿತಿ ಮೇರೆಗೆ ನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ನಗರ ವಲಯ ಅರಣ್ಯಾಧಿಕಾರಿ ಬಿ.ಎಸ್.ಸಂಜಯ್ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಸುತ್ತ ಗ್ರಾಮದ ಶರಾವತಿ ನದಿಯಿಂದ ಮರಳು ಸಾಗಣೆಕೆ ಮುಂದಾಗಿದ್ದ, ಟಿಪ್ಪರ್ ಚಾಲಕ ಜಯನಗರ ಪುನೀತ್ ಹಾಗೂ ಗೊರಗೋಡು ಮನುಜಿತ್ ವಿರುದ್ದ ಪ್ರಕರಣ ದಾಖಲಾಗಿದೆ.. ಕಾರ್ಯಚರಣೆ ಯಲ್ಲಿ ಉಪವಲಯ…

Read More

ಶಿವಮೊಗ್ಗ: ಆಗಸ್ಟ್ 29ರಂದು ಕ್ರೀಡಾ ದಿನದ ಪ್ರಯುಕ್ತ ಫಿಟ್ ಇಂಡಿಯಾ ಫ್ರೀಡಂ ರನ್ :

ಶಿವಮೊಗ್ಗ :ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವರು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ 75 ನೇ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ. ಮಾರ್ಚ್ 12 ರಂದು ಭಾರತದ ಪ್ರಧಾನ ಮಂತ್ರಿಯವರು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಕುರಿತು ಸ್ಪೂರ್ತಿದಾಯಕ ಭಾಷಣದ ಮೂಲಕ ಆಜಾದಿ ಕಾ ಅಮೃತ ಮಹೋತ್ಸವದ ಪರಿಕಲ್ಪನೆ ಬಗ್ಗೆ ತಿಳಿಸಿ, ಮಹೋತ್ಸವಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಆಜಾದಿ ಕಾ ಅಮೃತ ಮಹೋತ್ಸವದ…

Read More

Sudooru | ಕಬ್ಬಿನ ಜ್ಯೂಸ್ ಅಂಗಡಿಯವನ ಮೇಲೆ ಮುಸಿಯಾ ದಾಳಿ – ಮೆಗ್ಗಾನ್ ಗೆ ದಾಖಲು

Sudooru | ಕಬ್ಬಿನ ಜ್ಯೂಸ್ ಅಂಗಡಿಯವನ ಮೇಲೆ ಮುಸಿಯಾ ದಾಳಿ – ಮೆಗ್ಗಾನ್ ಗೆ ದಾಖಲು ಮುಸಿಯಾ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೂಡೂರು ಸಮೀಪದ ಐದನೇ ಮೈಲಿಕಲ್ಲು ಬಳಿಯಲ್ಲಿ ನಡೆದಿದೆ. ಲೋಕೇಶ್ ಹೊಸಕೊಪ್ಪ ಎಂಬುವವರಿಗೆ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹನುಮಾನ್‌ ಲಂಗೂರ್‌ ಎಂದು ಕರೆಯಲ್ಪಡುವ ಮುಸಿಯಾಗಳು ಈ ಭಾಗದಲ್ಲಿ ಹೆಚ್ಚು ತೊಂದರೆ ಕೊಡುತ್ತಿದೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ. ನಡೆದಿದ್ದೇನು..??? ಐದನೇ ಮೈಲಿಕಲ್ಲು ಬಸ್ ನಿಲ್ದಾಣದ ಬಳಿಯಲ್ಲಿ ಕಬ್ಬಿನ…

Read More

ಎರಡು ಕಾರುಗಳ ನಡುವೆ ಅಪಘಾತ – ದುಬಾರಿ ಕಾರುಗಳು ಜಖಂ|Accident

ತೀರ್ಥಹಳ್ಳಿ : ಮುಂದೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಘಟನೆ ಸಕ್ರೆಬೈಲ್​ ಬಳಿಯಲ್ಲಿ ನಡೆದಿದೆ.  ಶಿವಮೊಗ್ಗ-ತೀರ್ಥಹಳ್ಳಿ ಹೆದ್ಧಾರಿಯಲ್ಲಿ ನಡೆದ ಘಟನೆಯಲ್ಲಿ, ಯಾರಿಗೂ ಅಪಾಯ ಸಂಭವಿಸಿಲ್ಲ. ಫೋರ್ಡ್​ ಇಕೋ ಹಾಗೂ ಕಿಯಾ ಕಾರು  ನಡುವೆ ಈ ಅಪಘಾತ ಸಂಭವಿಸಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳ ಒಂದೊಂದು ಬದಿಗೆ ಹೋಗಿ ನಿಂತಿವೆ.  ಘಟನೆ ಬೆನ್ನಲ್ಲೆ ಸ್ಥಳೀಯರು ಬಂದು ಕಾರಿನಲ್ಲಿದ್ದವರಿಗೆ ಆರೈಕೆ ಮಾಡಿದ್ಧಾರೆ.

Read More
Exit mobile version