Headlines

ಕಾಗೋಡು ಪುತ್ರಿ ರಾಜನಂದಿನಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ – ನನ್ನ ಎದೆಗೆ ಚೂರಿ ಹಾಕಿದ ಹಾಗೇ ಆಗುತ್ತಿದೆ – ಕಾಗೋಡು|Kagodu

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪರವರ ಪುತ್ರಿ ರಾಜನಂದಿನಿ ಹಾಗೂ ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ರಾಜನಂದಿನಿ KPCC ಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಯವರನ್ನು ಭೇಟಿ ಮಾಡಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ನವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು….

Read More

ರೈತ ಪರ ಹೋರಾಟಗಾರ ಮೃತ ಕಗ್ಗಲಿ ವೀರಭದ್ರಪ್ಪ ಗೌಡ ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ರವರು ಮೃತ ಕಗ್ಗಲಿ ವೀರಭದ್ರಪ್ಪ ಗೌಡರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಈ ಸಂಧರ್ಭದಲ್ಲಿ ಮೃತರ ಪತ್ನಿ ಪಿತಾಂಬರಮ್ಮ ಹಾಗೂ ಪುತ್ರರಾದ ಕಗ್ಗಲಿ ಲಿಂಗಪ್ಪ , ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಎಂ ಪರಮೇಶ್ ,ಕಾಂಗ್ರೆಸ್ ರಿಪ್ಪನ್…

Read More

ಅಕ್ರಮ ಮರಳು ಮಾಫ಼ಿಯಾದಲ್ಲಿ ಶಾಸಕ ಹರತಾಳು ಹಾಲಪ್ಪ ರವರ ಕೈವಾಡವಿರುವುದು ನೂರಕ್ಕೆ ನೂರರಷ್ಟು ಸತ್ಯ : ಬಿ ಜಿ ನಾಗರಾಜ್

ಹೊಸನಗರ : ಮಾಜಿ ಶಾಸಕರು ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೊಸನಗರ ತಾಲ್ಲೂಕಿನಲ್ಲಿ ಮರಳು ಮಾಫೀಯ ನಡೆಯುತ್ತಿದೆ ಅದಕ್ಕೆ ಸಾಗರ – ಹೊಸನಗರ ತಾಲ್ಲೂಕಿನ ಹಾಲಿ ಶಾಸಕರಾಗಿರುವ ಹರತಾಳು ಹಾಲಪ್ಪರವರ ಕೈವಾಡವಿದೆ ಎಂದು ಹೇಳಿರುವುದು ಸತ್ಯ ಸಂಗತಿಯಾಗಿದೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ನಾಗರಾಜ್ ಹೇಳಿದರು. ಇಂದು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಮರಳು ಗಣಿಗಾರಿಕೆ ಮಾಡುವ ಗುತ್ತಿಗೆದಾರರು ಅಥವಾ ಮರಳು…

Read More

ರಿಪ್ಪನ್‌ಪೇಟೆಯ ಹಿರಿಯ ವೈದ್ಯ ಹಮೀದ್ ಡಾಕ್ಟರ್ ಇನ್ನಿಲ್ಲ | hameed doctor passed away

ರಿಪ್ಪನ್‌ಪೇಟೆಯ ಹಿರಿಯ ವೈದ್ಯ ಹಮೀದ್ ಡಾಕ್ಟರ್ ಇನ್ನಿಲ್ಲ |  ರಿಪ್ಪನ್‌ಪೇಟೆ : ಪಟ್ಟಣದ ಹೆಸರಾಂತ ಮದನಿ ಕ್ಲಿನಿಕ್ ನ ಹಿರಿಯ ವೈದ್ಯ ಹಮೀದ್ ಡಾಕ್ಟರ್(90) ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ವಯೋಸಹಜ ನಿಧನ ಹೊಂದಿದರು…ಅವರಿಗೆ 90 ವರ್ಷ ವಯಸ್ಸಾಗಿತ್ತು…!! ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಜನರಿಗೆ ಬಹು ಪರಿಚಿತರಾದ ಹಾಗೂ ಅನೇಕ ರೋಗಿಗಳ ಪಾಲಿನ ಆಪದ್ಬಾಂಧವರಾಗಿದ್ದ ಹಮೀದ್ ಡಾಕ್ಟರ್ ಇಂದು ಬೆಳಿಗ್ಗೆ ಪಟ್ಟಣದ ವಿನಾಯಕ ವೃತ್ತದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.  ಸದಾ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ…

Read More

ರಿಪ್ಪನ್ ಪೇಟೆಯಲ್ಲಿ ನಿರ್ಮಾಣವಾಗುತ್ತಿದೆ ನೂತನ ಸಾರ್ವಜನಿಕ ಹೈಟೆಕ್ ಶೌಚಾಲಯ:

ರಿಪ್ಪನ್ ಪೇಟೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ಸುಮಾರು ಹದಿನೈದು ಲಕ್ಷ ರೂಪಾಯಿ ಅನುದಾನದಲ್ಲಿ ನೂತನ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಸಿದ್ದವಾಗುತ್ತಿದ್ದು ಶೀಘ್ರದಲ್ಲಿ ಅತ್ಯಾಧುನಿಕ ಸುಸಜ್ಜಿತ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗುತ್ತದೆ.ಈ ಹಿಂದೆ ಇದ್ದ ಶಿಥಿಲಗೊಂಡಿದ್ದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.      { ….ನೂತನ ಹೈಟೆಕ್ ಶೌಚಾಲಯದ ನೀಲನಕ್ಷೆ…} ಸುತ್ತಮುತ್ತ ನೂರಾರು ಹಳ್ಳಿಗಳ  ಕೇಂದ್ರ ಬಿಂದುವಾಗಿರುವ ರಿಪ್ಪನ್ ಪೇಟೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಹಳೆಯ ಸಾರ್ವಜನಿಕ ಶೌಚಾಲಯ ಪಾಳು ಬಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಯಲ್ಲಿದ್ದು…

Read More

ಪರಿಷತ್ ಚುನಾವಣೆ | ಶಿಕ್ಷಕರೇ ಹಣ ಹೆಂಡಕ್ಕೆ ಮತ ಮಾರಿಕೊಂಡು ಭ್ರಷ್ಟರಾಗಿ, ಸ್ವಾರ್ಥಿಯಾಗಿ, ನೈತಿಕವಾಗಿ ದಿವಾಳಿಯಾದರೆ ಈ ಜಗವ ಕಾಯುವವರಾರು..!!?? | VOTE FOR SALE

ಪರಿಷತ್ ಚುನಾವಣೆ | ಶಿಕ್ಷಕರೇ ಹಣ ಹೆಂಡಕ್ಕೆ ಮತ ಮಾರಿಕೊಂಡು ಭ್ರಷ್ಟರಾಗಿ, ಸ್ವಾರ್ಥಿಯಾಗಿ, ನೈತಿಕವಾಗಿ ದಿವಾಳಿಯಾದರೆ ಈ ಜಗವ ಕಾಯುವವರಾರು..!!?? ಒಂದು ರಾಷ್ಟ್ರದ ಗುಣಮಟ್ಟ ಅಲ್ಲಿನ ನಾಗರಿಕರ ಗುಣಮಟ್ಟದ ಮೇಲೆ ನಿರ್ಧಾರವಾದರೇ ನಾಗರಿಕರ ಗುಣಮಟ್ಟ ಶಿಕ್ಷಣದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣದ ಗುಣಮಟ್ಟ ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಶಿಕ್ಷಕರನ್ನು ‘ರಾಷ್ಟ್ರನಿರ್ಮಾಪಕರು ಎನ್ನಲಾಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕನಿಗೆ ದೇವರ ಸ್ಥಾನವನ್ನು (‘ಆಚಾರ್ಯ ದೇವೋ ಭವ’) ನೀಡಲಾಗಿದೆ. ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಶಿಕ್ಷಕನು ವಿದ್ಯಾರ್ಥಿಗೆ ಎರಡನೇ ಜನ್ಮ ಕೊಡುತ್ತಾನೆಂಬ…

Read More

ಆಸ್ತಿ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ :

ಸಾಗರ ತಾಲೂಕಿನ ಹುಲಿದೇವರಬನ ಸಮೀಪ ಸಣ್ಣಕೊಪ್ಪ ಗ್ರಾಮದ ಗುರುಬಸಪ್ಪ ಎಂಬ ವ್ಯಕ್ತಿಯು ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋಗಿ ಎದುರು ಪಾರ್ಟಿಗಳಿಗೆ ಸಮನ್ಸ್ ಕಳುಹಿಸಿರುವ ಹಿನ್ನೆಲೆಯಲ್ಲಿ ಗುರುಬಸಪ್ಪ ರವರ ಮೇಲೆ  ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. >ಗುರುಬಸಪ್ಪ ಎಂಬ ವ್ಯಕ್ತಿಗೆ ಬೇಸೂರು ಗ್ರಾಮದ ಸರ್ವೆ ನಂಬರ್ 33 ರಲ್ಲಿ ಕುಟುಂಬದ ಹಿಸ್ಸೆ ಮೂಲಕ ಬರಬೇಕಾದ ಜಮೀನನ್ನು ಪಡೆಯುವ ಸಲುವಾಗಿ ನ್ಯಾಯಾಲಯದ ಮೊರೆ ಹೋಗಿರುತ್ತಾರೆ. ಇದರಿಂದ ರೊಚ್ಚಿಗೆದ್ದ ಇದೇ  ಗ್ರಾಮದವರಾದ ರಾಮನಾಯ್ಕ,…

Read More

ಆನಂದಪುರ : ಕುಟುಂಬದವರೊಂದಿಗೆ ಬಟ್ಟೆ ತೊಳೆಯಲು ಹೋದಾಗ ಕೆರೆಯಲ್ಲಿ ಮುಳುಗಿ ಯುವಕ ಸಾವು|ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ|Crimenews

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗಿಳಾಲಗುಂಡಿ ಗ್ರಾಮದ ಅಮ್ಮನಕೆರೆಯಲ್ಲಿ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಗಿಳಾಲಗುಂಡಿಯಲ್ಲಿ ತಮ್ಮ ಸಂಬಂಧಿಕರ ಮನೆಯ ಮದುವೆಗೆಂದು ಆಗಮಿಸಿದ್ದ ಚಿಕ್ಕಮಗಳೂರಿನ ಸಮೀಪದ ಹಾಂದಿ ಗ್ರಾಮದ ಯುವಕ ಅಮಿನ್ (19 ) ಮೃತಪಟ್ಟ ದುರ್ಧೈವಿಯಾಗಿದ್ದಾನೆ.  ಅಮ್ಮನಕೆರೆಯಲ್ಲಿ ಕುಟುಂಬದವರ ಜೊತೆ ಬಟ್ಟೆ ತೊಳೆಯಲು ಬಂದಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಕುಟುಂಬದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆಯ ಮೂಲಕ  ಯುವಕನ…

Read More

ಶಾಸಕ ಹಾಲಪ್ಪನವರಿಗೆ ಚುನಾವಣೆ ಸಮೀಪಿಸುವಾಗ ಶರಾವತಿ ಸಂತ್ರಸ್ಥರು ನೆನಪಾಗುತ್ತಾರೆ – ಕಾಂಗ್ರೆಸ್ ಆರೋಪ|congress

ರಿಪ್ಪನ್‌ಪೇಟೆ : ಮಾಜಿ ಸಚಿವ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ಅಧಿಕಾರಾವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಕ್ರಮ ಜಮೀನು ಸಾಗುವಳಿದಾರ ರೈತ ಕುಟುಂಬಕ್ಕೆ ಸಾಗುವಳಿ ಪತ್ರವನ್ನು ಕೊಡಿಸಿದ್ದರೂ ಅಲ್ಲದೆ ಇನ್ನೂ ಹಲವು ರೈತರ ಹಕ್ಕು ಪತ್ರವನ್ನು ತಹಶೀಲ್ದಾರ್ ಕಛೇರಿಯಲ್ಲಿ ಸಿದ್ದಗೊಂಡಿದ್ದರೂ ಕೂಡಾ ಕಳೆದ ನಾಲ್ಕುವರೆ ವರ್ಷದಿಂದ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಕ್ಕು ಪತ್ರ ಕೊಡದೇ ಸಿದ್ದಗೊಂಡ ಸಾಗುವಳಿ ಪತ್ರವನ್ನು ವಜಾಗೊಳಿಸಿ ಈಗ ಚುನಾವಣೆಗೆ ಮೂರು ನಾಲ್ಕು ತಿಂಗಳುಗಳಿರುವಾಗ ಮೊಸಳೆ ಕಣ್ಣಿರು ಹಾಕುವ ಮೂಲಕ ಶರಾವತಿ…

Read More

ಬಿಬಿಎ ವಿದ್ಯಾರ್ಥಿ ನೇಣು ಬಿಗಿದುಕೊಂಡು ಸಾವು

ಬಿಬಿಎ ವಿದ್ಯಾರ್ಥಿ ನೇಣು ಬಿಗಿದುಕೊಂಡು ಸಾವು ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಹೊಸಮನೆ 6 ನೇ ತಿರುವಿನ ನಿವಾಸಿ ಮನೋಜ್ (22) ಮೃತ ದುರ್ಧೈವಿಯಾಗಿದ್ದಾನೆ. ಶಿವಮೊಗ್ಗದ JNNC ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಮನೋಜ್ ನೇಣಿಗೆ ಶರಣಾಗಿದ್ದಾನೆ. ಈತ ಕಾಂಗ್ರೆಸ್ ಮುಖಂಡ ಫ್ಲವರ್ ಕುಮಾರ್ ಅವರ ಪುತ್ರನಾಗಿದ್ದಾನೆ. ಆತ್ಮಹತ್ಯೆಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ,ನಿನ್ನೆ ಸಂಜೆಯೇ ಯುವಕನ ಮೃತದೇಹವನ್ನು ಮೆಗ್ಗಾನ್ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ…

Read More
Exit mobile version