Headlines

ಶಿವಮೊಗ್ಗ : ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಯುವ ಕಾಂಗ್ರೆಸ್ ವತಿಯಿಂದ ನಿರುದ್ಯೋಗ ದಿವಸ ಆಚರಣೆ

ಶಿವಮೊಗ್ಗ : ನರೇಂದ್ರ ಮೋದಿಯವರು ಪ್ರಧಾನಿಯಾಗಿ 7 ವರ್ಷಗಳು ಕಳೆದಿದ್ದರೂ ಯುವಜನತೆಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿರುವುದರಿಂದ ಅವರ ಜನ್ಮದಿನವಾದ ಇಂದು ರಾಷ್ಟ್ರೀಯ ನಿರುದ್ಯೋಗ ದಿವಸ್ ಎಂದು ಯುವಕಾಂಗ್ರೆಸ್ ಶಿವಮೊಗ್ಗ ದಕ್ಷಿಣ ಬ್ಲಾಕ್‌ ವತಿಯಿಂದ ಆಚರಿಸಲಾಯಿತು. ನರೇಂದ್ರಮೋದಿಯವರು 2014 ರಲ್ಲಿ ಪ್ರಧಾನಿಯಾಗುವ ವೇಳೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, 2 ಕೋಟಿ ಉದ್ಯೋಗ ಸೃಷ್ಟಿಸುವುದಕ್ಕಿಂತ ಕೋಟ್ಯಂತರ ನಿರುದ್ಯೋಗಿಗಳನ್ನು ಸೃಷ್ಟಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಿಸುವಂತೆ ಯುವ ಜನತೆ ಆಗ್ರಹಿಸಿದರೆ, ‘ಬೋಂಡಾ ಮಾರಿ’ ಎಂದು ಹೇಳುವ…

Read More

ಶಿವಮೊಗ್ಗ : ರಾತ್ರೋರಾತ್ರಿ ದೇವಸ್ಥಾನ ಕೆಡವಿ,ಅರ್ಚಕನ ಕಣ್ಣಲ್ಲಿ ನೀರು ತರಿಸಿದರು : ಗೋಪಾಲಕೃಷ್ಣ ಬೇಳೂರು

  ಶಿವಮೊಗ್ಗ : ರಾತ್ರೋರಾತ್ರಿ ಕಳ್ಳರ ಹಾಗೆ ಹಿಂದೂ ದೇಗುಲಗಳನ್ನು ಕೆಡವಿದಾಗ ಹಿಂದುತ್ವದ ಕವಚ ತೊಟ್ಟ ಹಿಂದುತ್ವವಾದಿಗಳು ಮತ್ತು ಸರ್ಕಾರ ಎಲ್ಲಿ ಹೋಗಿತ್ತು ಅಂತಾ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಒಂದು ವೇಳೆ ಈ ಸಂದರ್ಭ ಕಾಂಗ್ರೆಸ್ ಸರ್ಕಾರಿವಿದ್ದಿದ್ದರೆ ಅಥವಾ ಮುಸ್ಲಿಂ ಅಧಿಕಾರಿಯೊಬ್ಬ ದೇಗುಲ ತೆರವು ಮಾಡಿಸಿದ್ದರೆ ಈ ಕವಚ ತೊಟ್ಟ ನಕಲಿ ಹಿಂದುತ್ವವಾದಿಗಳು ರಾಜ್ಯಕ್ಕೆ ಬೆಂಕಿ ಹಚ್ಚಿಬಿಡುತ್ತಿದ್ದರು ಎಂದು ಆರೋಪಿಸಿದರು. ರಾತ್ರೋರಾತ್ರಿ ಕಳ್ಳರ ಹಾಗೆ ದೇವಸ್ಥಾನವನ್ನು ಒಡೆಸಿದ್ದಾರೆ. ಅಲ್ಲಿ…

Read More

ಶಿವಮೊಗ್ಗ : ಕೊವಿಡ್ ವಿಶೇಷ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗ : ರಾಜ್ಯದಾದ್ಯಂತ ಕೋವಿಡ್ ವಿಶೇಷ ಲಸಿಕಾ ಅಭಿಯಾನ ಹಿನ್ನೆಲೆ ಇಂದು ಬೆಳಿಗ್ಗೆ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಿದರು. ಜಿಲ್ಲೆಯಲ್ಲಿ 400 ಕೇಂದ್ರಗಳಲ್ಲಿ ಇಂದು ಲಸಿಕಾ ಅಭಿಯಾನ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಸುಮಾರು 80 ಸಾವಿರ ಜನರಿಗೆ ವ್ಯಾಕ್ಸಿನ್ ನೀಡಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆರೋಗ್ಯ ಇಲಾಖೆ ಪ್ರತಿ ಲಸಿಕಾ ಕೇಂದ್ರಕ್ಕೆ 4 ಜನರಂತೆ 1600 ಸಿಬ್ಬಂದಿ ನಿಯೋಜನೆ ಮಾಡಿದೆ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್…

Read More

ರಿಪ್ಪನ್ ಪೇಟೆ : ನವಜಾತ ಶಿಶುವಿನ ಚಿಕಿತ್ಸೆಗೆ ಸಹಾಯಧನ ನೀಡಿ ಕುಟುಂಬಕ್ಕೆ ನೆರವಾದ ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆ ಶಬರೀಶನಗರ ನಿವಾಸಿ ಭರತ್ ಹಾಗು ಶ್ವೇತ ದಂಪತಿಯ ಏಳು ತಿಂಗಳಿಗೆ ಜನಿಸಿದ ಹಸುಗೂಸು ಉಸಿರಾಟದ ಸಮಸ್ಯೆಯಿಂದ ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಕುಟುಂಬಕ್ಕೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ವೈಯಕ್ತಿಕ ಧನ ಸಹಾಯ ಮಾಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಉಸಿರಾಟದ ತೊಂದರೆ, ಸೆಳವು ಅಥವಾ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಅಸಮರ್ಥತೆಯ ಮತ್ತು ಮೆದುಳಿನಲ್ಲಿ ನೀರು ತುಂಬಿಕೊಂಡಿರುವ ತೊಂದರೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ…

Read More

ಸೊರಬ : ಕೆರೆಯಲ್ಲಿ ಈಜಲು ಹೋಗಿ ವ್ಯಕ್ತಿ ಸಾವು :

ಸೊರಬ : ಕೆರೆಗೆ ಈಜಲು ಹೋಗಿ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೊರಬ ತಾಲೂಕಿನಲ್ಲಿ ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ನಡೆದಿದೆ. ತಾಲೂಕಿನ ಗೊಲ್ಲರಹಳ್ಳಿ ಕೆರೆಯಲ್ಲಿ ಈಜಲು ಹೋದ ಎಣ್ಣೆಕೊಪ್ಪ ನಿವಾಸಿ ರವಿನಾಯ್ಕ (35) ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಘಟನೆಯ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸೊರಬ ಅಗ್ನಿಶಾಮಕ ದಳ ಸಿಬ್ಬಂದಿಗಳು ಸುಮಾರು ಎರಡು ತಾಸು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಾದ ನಾಗರಾಜ್…

Read More

ಶಿವಮೊಗ್ಗ : ನೌಕರಿ ಖಾಯಂಗೊಳಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ :

ಶಿವಮೊಗ್ಗ : ದೀರ್ಘಕಾಲದ  ಸೇವೆಯನ್ನು ಬಳಸಿಕೊಂಡ ಇಲಾಖೆಯು ಸೇವಾ ವಿಲೀನಗೊಳಿಸಿ ಕಾಯಂಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಲ್ಲೇಖ ಪತ್ರ 1ಮತ್ತು 2 ಅನುಸಾರ ದಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಮತ್ತು ಶಾಶ್ವತ ನಿಯಮಾವಳಿ ರಚನೆ ಮಾಡುವ ಬಗ್ಗೆ ಪರಿಶೀಲಿಸಿ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2000ರಿಂದ 2021ರ ಅವಧಿಯ ವರೆಗೆ ನಿಯಮಾನುಸಾರವಾಗಿ ಆಯ್ಕೆಗೊಂಡ 14.564 ಅತಿಥಿ…

Read More

ಸಾಗರ : ಪಡವಗೋಡು ಬಂಗಾರಪ್ಪ ಇನ್ನಿಲ್ಲ!!

ಸಾಗರ : ಇಲ್ಲಿನ ಪಡವಗೋಡು ಗ್ರಾಮ ಪಂಚಾಯತಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದ ಹಾಗೂ ಹಾಲಿ ಪಡವಗೋಡು ಗ್ರಾಮ ಪಂಚಾಯಿತಿಯ ಸದಸ್ಯರಾದ  ಪಡವಗೋಡು ಬಂಗಾರಪ್ಪ(ಬಂಗಾರಣ್ಣ) ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಎರಡು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಆದರೆ ರಕ್ತದೊತ್ತಡ ಹೆಚ್ಚಿರುವ ಕಾರಣ ಅಲ್ಲಿಯೇ ಒಳರೋಗಿಯಾಗಿ ದಾಖಲಾಗಲು ತಿಳಿಸಿದ್ದಾರೆ ತಕ್ಷಣದಲ್ಲಿ ‍ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲುಮಾಡಲು ಅವರ ಸ್ನೇಹಿತರು ಪ್ರಯತ್ನ…

Read More

ಹೊಸನಗರ : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಹೊಸನಗರ: ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ ಪಟ್ಟಣದ ಚರ್ಚ್ ರಸ್ತೆಯ ನಿವಾಸಿ ಮಕ್ಬೂಲ್ ಅಹಮದ್ (31) ಎಂಬ ವ್ಯಕ್ತಿಯ ಶವ ಪಟ್ಟಣದ ಕಾಳಿಕಾಪುರ ಕನ್ನರ್ ಗುಂಡಿಯ ಹೊಳೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮಕ್ಬೂಲ್ ಅಹಮದ್ ಕಳೆದ ಎರಡು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದನು.  ಕಳೆದ ಕೆಲವು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು ಈತನು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ.  ಸ್ಥಳೀಯರ ಸಹಕಾರದಿಂದ ಶವವನ್ನು ದಡಕ್ಕೆ ತಲುಪಿಸಲಾಯಿತು.ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

Read More

ರಿಪ್ಪನ್ ಪೇಟೆ: ಪ್ರಬುದ್ದ ಸ್ವಸಹಾಯ ಸಂಘದ ಮಹಿಳೆಯರಿಗೆ ಗಾದಿ ವಿನ್ಯಾಸ ತರಬೇತಿ ಕಾರ್ಯಗಾರ

ರಿಪ್ಪನ್‌ಪೇಟೆ: ನಬಾರ್ಡ್ ಮತ್ತು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಶಿವಮೊಗ್ಗ ಇವರ ಸಂಯುಕ್ತ ಅಶ್ರಯದಲ್ಲಿ ಕೆಂಚನಾಲ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಬುದ್ಧ ಸ್ವಸಹಾಯ ಸಂಘದ ಮಹಿಳೆಯರಿಗಾಗಿ ಗಾದಿ ವಿನ್ಯಾಸ ಕುರಿತಾದ 15 ದಿನಗಳ ತರಬೇತಿ ಕಾರ್ಯಗಾರ ನಡೆಯಿತು. ಈ ತರಬೇತಿ ಕಾರ್ಯಗಾರದಲ್ಲಿ ಪ್ರಬುದ್ದ ಸ್ವಸಹಾಯ ಸಂಘದ 35 ಮಹಿಳೆಯರಿಗೆ 15 ದಿನಗಳ ಕಾಲ ಗಾದಿ ವಿನ್ಯಾಸದ ಕುರಿತು ತರಬೇತಿ ನೀಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಶಿವಮೊಗ್ಗ ನಬಾರ್ಡ್ ಮುಖ್ಯಸ್ಥರಾದ ಬಿ ರವಿ ಯವರು ಗ್ರಾಮೀಣ ಪ್ರದೇಶದ…

Read More

ಮಂಡಗದ್ದೆ : ಅನಾಥ ಶವವಾಗಿ ಸಿಕ್ಕ ಎರಡು ದಿನದ ನವಜಾತ ಶಿಶು

ತೀರ್ಥಹಳ್ಳಿ : ತಾಲೂಕಿನ ಮಂಡಗದ್ದೆಯಲ್ಲಿ ಹುಟ್ಟಿದ ಎರಡು ದಿನದ ಮಗು ಕರಳು ಬಳ್ಳಿ ಸಹ ಹಾಗೆ ಇರುವ ಗಂಡು ಮಗುವೊಂದು ಮಂಡಗದ್ದೆಯ ಕೆರೆಯ ಬಳಿ ಯಾರೋ ಇಟ್ಟು ಅಥವಾ ಬಿಸಾಕಿ ಹೋಗಿರುವ ದಾರುಣ ಘಟನೆ ನೆಡೆದಿದೆ. ಮಂಡಗದ್ದೆಯ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಬೆಸ್ತರಿಗೆ ಈ ಶಿಶು ಸಿಕ್ಕಿದ್ದು ತಕ್ಷಣವೇ ಅಲ್ಲಿನ ಗ್ರಾಮಪಂಚಾಯಿತಿ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಮಗುವಿನ ಜನನವನ್ನು ಮುಚ್ಚಿಡುವ ಸಲುವಾಗಿ ಯಾರೋ ಈ ರೀತಿ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಕೃತ್ಯಕ್ಕೆ ಕಾರಣರಾದ ಪಾಪಿ…

Read More
Exit mobile version