ಶಾಂತಿ ಮತ್ತು ಪ್ರೇಮದಿಂದ ಭಾವೈಕ್ಯದ ಜೀವನ ಸಾಧ್ಯ :
ರಿಪ್ಪನ್ ಪೇಟೆ : ಪ್ರೀತಿ, ಪ್ರೇಮ,ಮತ್ತು ಭಾವೈಕ್ಯದ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು. ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಪ್ರೀತಿ-ಪ್ರೇಮ ಮತ್ತು ಶಾಂತಿಯನ್ನು ಹಂಚೋಣ ಆ ಮೂಲಕ ಭಾವೈಕ್ಯತೆ ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಾಣ ಮಾಡಬಹುದೆಂದು ರೆ. ಫಾ.ಬಿನೋಯ್ ಹೇಳಿದರು. ಪಟ್ಟಣದ ಗುಡ್ ಶಫರ್ಡ್ ಚರ್ಚಿನಲ್ಲಿ ಶುಕ್ರವಾರ ಗುಡ್ ಫ್ರೈಡೆ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಗತ್ತಿಗೆ ಶಾಂತಿ ಮಂತ್ರವನ್ನು ಪಡಿಸಿದ ಯೇಸು ಕ್ರಿಸ್ತರು ಪ್ರೀತಿ ಪ್ರೇಮ ಭಾವ್ಯಕ್ಯತೆ ಮತ್ತು ಸಾಮರಸ್ಯದಿಂದ ಬದುಕಿದಾಗ ಮಾತ್ರ…


