ಕೆಂಪು ಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ : ಸಚಿವ ಕೆ ಎಸ್ ಈಶ್ವರಪ್ಪ
ಈಶ್ವರಪ್ಪ ಮತ್ತೆ ತಮ್ಮ ಹೇಳಿಕೆಯಿಂದ ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬಾರಿಯ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವನ್ನು ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ನೀಡಿದ್ದ ಧ್ವಜದ ಹೇಳಿಕೆಗೆ ಸಂಬಂಧಪಟ್ಟಂತೆ ಮಾತನಾಡಿದ ಈಶ್ವರಪ್ಪ, ಕೇಸರಿ ಧ್ವಜ ಕೆಂಪುಕೋಟೆ ಮೇಲೆ ಕೂಡ ಹಾರಿಸುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಮುಂದೆ ನಮ್ಮ ದೇಶದಲ್ಲಿ ಕೇಸರಿ ಧ್ವಜವೇ ರಾಷ್ತ್ರ ಧ್ವಜವಾಗಬಹುದು. ಹಿಂದೆ ರಾಮ ಮಂದಿರ ಕಟ್ಟಲು ಆಗಲ್ಲ ಅಂದಿದ್ದರು ಈಗ ಕಟ್ಟಿಲ್ಲವ, ಹಾಗೇಯೇ ಮುಂದೊಂದು ದಿನ ಕೆಂಪು ಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದರು. ಅಧಿಕಾರದ…


