ಬಡಮಕ್ಕಳ ಶಿಕ್ಷಣದಿಂದ ಸಮಾಜ ಸುಶಿಕ್ಷಿತ : ಕೋಣಂದೂರು ಶ್ರೀ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ರಿಪ್ಪನ್ಪೇಟೆ: ಬಡಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಸುಶಿಕ್ಷಿತ ಸಮಾಜ ನಿರ್ಮಾಣವಾಗುತ್ತದೆ. ಎಂಬ ಕಲ್ಪನೆಯಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೊಂದಿದ್ದರು ಎಂದು ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಿದ್ಧಗಂಗಾ ಶ್ರೀಗಳ ಭಕ್ತವೃಂದದವತಿಯಿಂದ ಇಂದು ಶ್ರೀ ಡಾ. ಶಿವಕುಮಾರಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಆರ್ಥಿಕ ಸಬಲರಲ್ಲದ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ದುರ್ಲಬವಾಗಿದ್ದ ಸಂದರ್ಭದಲ್ಲಿ ಸ್ವಾಮೀಜಗೆ ಶ್ರೀಮಠದಲ್ಲಿ ವಿದ್ಯಾ ಕೇಂದ್ರವನ್ನು ತೆರೆದು ತನ್ಮೂಲಕ, ಅನ್ನ, ಅಕ್ಷರ…


