ತೀರ್ಥಹಳ್ಳಿ : ಕ್ಷುಲ್ಲಕ ಕಾರಣಕ್ಕೆ ಎದೆಗೆ ಚೂರಿ ಇರಿತ – ಗಾಯಾಳು ಮಣಿಪಾಲ್ ಗೆ ದಾಖಲು|Stabbing
ಕ್ಷುಲ್ಲಕ ಕಾರಣಕ್ಕೆ ಮಸೀದಿಯ ಸಮೀಪ ಇಬ್ಬರ ನಡುವೆ ನಡೆದ ಗಲಾಟೆ..ಚಾಕು ಇರಿತದಲ್ಲಿ ದುರಂತ ಅಂತ್ಯ ಕಂಡ ಘಟನೆ ಮಾಳೂರು ಪೊಲೀಸ್ ಠಾಣೆಯ ಎದುರು ನಡೆದಿದೆ. ಮಾಳೂರು ಮಟನ್ ಅಂಗಡಿಯ ಮಾಲೀಕ ಶಮಿಯುಲ್ಲಾ ಎಂಬುವರ ಎದೆಗೆ ರಿಜ್ವಾನ್ ಎಂಬಾತ ಚಾಕು ಇರಿದಿದ್ದಾನೆ ಪರಿಣಾಮ ಶಮಿಯುಲ್ಲಾ ಎದೆಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳು ಶಮಿಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ ಸದ್ಯ ಮಣಿಪಾಲ್ ಆಸ್ಪಯಲ್ಲಿ ದಾಖಲಾಗಿರುವ ಶಮಿಯುಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ….


