A massive ₹3 crore fraud by Ayaan Group owners Abdul Razak and Sheikh Fazal exposed. Over 1960 people were duped through fake bumper prize schemes in Karnataka.
ಹೊಸನಗರ: ಆಕರ್ಷಕ ಗೃಹೋಪಯೋಗಿ ವಸ್ತುಗಳು ಹಾಗೂ ನಗದು ಬಹುಮಾನದ ಆಮಿಷವೊಡ್ಡಿ, ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿರುವ ಬೃಹತ್ ಜಾಲವೊಂದು ಬೆಳಕಿಗೆ ಬಂದಿದೆ. ಉಡುಪಿ ಮೂಲದ ‘ಆಯಾನ್ ಗ್ರೂಪ್’ ಮಾಲೀಕರು ಬರೋಬ್ಬರಿ 3 ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿರುವ ಬಗ್ಗೆ ಹೊಸನಗರ ತಾಲೂಕಿನ ಏಜೆಂಟ್ ಓರ್ವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೊಸನಗರ ತಾಲೂಕಿನ ಹಳೇ ಸಾಗರ ರಸ್ತೆಯ ದ್ರಾವರ್ಸ ನಿವಾಸಿ ನಿಹಾಲ್ ಈ ಬಗ್ಗೆ ದೂರು ನೀಡಿದ್ದಾರೆ.
ಉಡುಪಿ ಜಿಲ್ಲೆಯ ಉಚ್ಚಿಲ ಬಾಡದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಎಂಬುವವರೇ ವಂಚನೆಗೈದ ಆರೋಪಿಗಳಾಗಿದ್ದಾರೆ.
ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ‘ಆಯಾನ್ ಗ್ರೂಪ್’ ಹೆಸರಿನಲ್ಲಿ 13, 16 ಮತ್ತು 21 ತಿಂಗಳ ಸ್ಕೀಮ್‌ಗಳನ್ನು ಪರಿಚಯಿಸಿದ್ದರು. ಪ್ರತಿ ತಿಂಗಳು 1,000 ರೂ. ಕಂತು ಕಟ್ಟಿದರೆ, ಸ್ಕೀಮ್ ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ಆಕರ್ಷಕ ಬಹುಮಾನ ನೀಡುವುದಾಗಿ ನಂಬಿಸಿದ್ದರು. ಅಲ್ಲದೆ, ಗ್ರಾಹಕರನ್ನು ಕರೆತರುವ ಏಜೆಂಟರಿಗೆ ಪ್ರತಿ ಕಾರ್ಡ್‌ಗೆ 300 ರೂ. ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿದ್ದರು.
ಇದನ್ನು ನಂಬಿದ ನಿಹಾಲ್, 2023ರ ಮೇ ತಿಂಗಳಿನಿಂದ ಸುಮಾರು 150 ಗ್ರಾಹಕರನ್ನು ಸಂಪರ್ಕಿಸಿ ಅವರಿಂದ ಹಣ ಸಂಗ್ರಹಿಸಿದ್ದರು. ಗ್ರಾಹಕರ ಕಂತಿನ ಒಟ್ಟು 24,00,000/- ರೂ. ಹಣವನ್ನು ಆರೋಪಿಗಳ ಫೋನ್ ಪೇ ಖಾತೆಗಳಿಗೆ ಜಮಾ ಮಾಡಿದ್ದರು. ದಿನಾಂಕ 04/05/2025 ರಂದು ಸ್ಕೀಮ್ ಮುಕ್ತಾಯಗೊಂಡರೂ, ಆರೋಪಿಗಳು ಯಾವುದೇ ಬಹುಮಾನವನ್ನಾಗಲೀ, ಹಣವನ್ನಾಗಲೀ ಮರುಪಾವತಿಸದೆ ಸತಾಯಿಸಿದ್ದಾರೆ. ಹಣ ಹೂಡಿಕೆ ಮಾಡಿದ್ದ ಗ್ರಾಹಕರು ಇದೀಗ ಏಜೆಂಟ್ ನಿಹಾಲ್ ಮನೆ ಬಾಗಿಲಿಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದು, ಯುವಕ ಮಾನಸಿಕವಾಗಿ ಜರ್ಜರಿತನಾಗಿದ್ದಾನೆ.
ದೂರುದಾರ ನಿಹಾಲ್ ಮಾತ್ರವಲ್ಲದೆ ಇತರೆ 7-8 ಜನ ಏಜೆಂಟರುಗಳು ಕೂಡ ಇದೇ ರೀತಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಆಯಾನ್ ಗ್ರೂಪ್‌ಗೆ ನೀಡಿದ್ದಾರೆ. ಒಟ್ಟಾರೆ 1900ಕ್ಕೂ ಹೆಚ್ಚು ಮುಗ್ಧ ಜನರಿಗೆ ಈ ಜಾಲ ವಂಚನೆ ಬಲೆ ಹೆಣೆದಿದ್ದು, ಬರೋಬ್ಬರಿ 3 ಕೋಟಿಗೂ ಅಧಿಕ ಹಣವನ್ನು ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕರ ನಂಬಿಕೆ ದ್ರೋಹ ಮಾಡಿರುವ ಅಬ್ದುಲ್ ರಜಾಕ್ ಹಾಗೂ ಶೇಕ್ ಮಹಮ್ಮದ್ ಫಜಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕಳೆದುಕೊಂಡಿರುವ ಹಣವನ್ನು ಹಿಂದಿರುಗಿಸಿಕೊಡುವಂತೆ ನಿಹಾಲ್ ಮಾ.28 ರಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ರಜಾಕ್ ಎಂಬಾತನನ್ನು ಹೊಸನಗರ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಅಯಾನ್ ಗ್ರೂಪ್ ಮಾಲೀಕನನ್ನು ಬಂಧಿಸಿದ್ದಾರೆ ಎಂಬ ವಿಷಯ ತಿಳಿಯುತಿದ್ದಂತೆ ಹೊಸನಗರ ಠಾಣೆ ಮುಂಭಾಗದಲ್ಲಿ ಮೋಸಹೋದ ಗ್ರಾಹಕರು ಜಮಾವಣೆಗೊಂಡು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…
ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…
ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…
ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…