January 11, 2026

ಅಪಘಾತವಾಗಿ ಬಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ಯುವಕರಿಬ್ಬರು ಸಾವು

ಅಪಘಾತವಾಗಿ ಬಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ಯುವಕರಿಬ್ಬರು ಸಾವು

ಶಿವಮೊಗ್ಗ:  ಆಯನೂರು ಮತ್ತು ಹಾರನಹಳ್ಳಿ ಮಾರ್ಗ ಮಧ್ಯೆ ಶುಕ್ರವಾರ ಸಂಜೆ ಟ್ರ್ಯಾಕ್ಟರ್ ಹರಿದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಲ್ಲಾಪುರ ಗ್ರಾಮದ ಆಕೀಬ್ (25) ಮತ್ತು ಚಾಂದ್ ಪೀರ್ (18) ಮೃತಪಟ್ಟವರು.

ಘಟನೆಯಲ್ಲಿ ಎರಡು ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ, ಬೈಕ್ ಚಾಲಕ ಮತ್ತು ಹಿಂಬದಿ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದರು. ಇದೇ ಸಂದರ್ಭದಲ್ಲಿ  ಹಿಂದೆ ಬರುತ್ತಿದ್ದ ಟ್ರ್ಯಾಕ್ಟರ್ ಕೆಳಕ್ಕೆ ಬಿದ್ದವರ ಮೇಲೆ ಹರಿದಿದೆ. ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿರುವ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ

About The Author

Exit mobile version