Headlines

ಶ್ರೀಗಂಧ ಮರ ಕಡಿತಲೆ : ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ , ಓರ್ವನ ಬಂಧನ

ಶ್ರೀಗಂಧ ಮರ ಕಡಿತಲೆ : ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ , ಓರ್ವನ ಬಂಧನ

ಸಾಗರ: ಸಾಗರ ಪೊಲೀಸ್ ಅರಣ್ಯ ಸಂಚಾರ ದಳ ಮತ್ತು ವಲಯ ಅರಣ್ಯಾಧಿಕಾರಿಗಳು ಜಂಟಿಯಾಗಿ ನಡೆಸಿದ ದಾಳಿಯಲ್ಲಿ, ಬರದವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಶ್ರೀಗಂಧ ಮರವನ್ನು ಕಡಿದಿದ್ದ ಆರೋಪದ ಮೇಲೆ ಒಬ್ಬರನ್ನು ಬಂಧಿಸಿದ್ದಾರೆ.

ಮುಬಾರಕ್ ಬಿನ್ ಮಹಮ್ಮದ್ ಪಾಷಾ (ಎಸ್‌ಎನ್ ನಗರ, ಸಾಗರ) ಅವರನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಅವರ ಬಳಿಯಿಂದ 35.107 ಕೆ.ಜಿ. ಶ್ರೀಗಂಧದ ತುಂಡುಗಳು, ಒಂದು ಕೈ ಗರಗಸ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕ ಅರಣ್ಯ ಕಾಯಿದೆ 1963ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ವಿನಾಯಕ ಕೆ., ಆರ್‌ಎಫ್‌ಒ ಅಣ್ಣಪ್ಪ, ಸಿಬ್ಬಂದಿ ನರೇಂದ್ರ ಕುಮಾರ್ (ಡಿ.ಆರ್‌ಎಫ್‌ಒ), ವಿಶ್ವನಾಥ್ ಹೆಚ್‌.ಸಿ., ಚಂದ್ರಕಾಂತ್ ಹೆಚ್‌.ಸಿ. ಸೇರಿದಂತೆ ತಂಡದವರು ಪಾಲ್ಗೊಂಡರು.

Exit mobile version