Headlines

ಮನೆಯಲ್ಲಿ ಯಾರು ಇಲ್ಲದ ವೇಳೆ ಬಗಿಲು ಮುರಿದು ಲಕ್ಷಾಂತರ ರೂ ಮೌಲ್ಯದ ನಗ , ನಗದು ಕಳ್ಳತನ

ಮನೆಯಲ್ಲಿ ಯಾರು ಇಲ್ಲದ ವೇಳೆ ಬಗಿಲು ಮುರಿದು ಲಕ್ಷಾಂತರ ರೂ ನಗ , ನಗದು ಕಳ್ಳತನ

ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಕಾರಣಕ್ಕಾಗಿ ಊರಿಗೆ ತೆರಳಿದ್ದ ಶಿವಮೊಗ್ಗ ನಗರದ ನಿವಾಸಿಯೊಬ್ಬರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ನಗರದ ಬೊಮ್ಮನ ಕಟ್ಟೆಯಲ್ಲಿ ನಡೆದಿದೆ.

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಮತ್ತು ಬೊಮ್ಮನ ಕಟ್ಟೆ ನಿವಾಸಿಯಾದ ವ್ಯಕ್ತಿಯೊಬ್ಬರು ತಮ್ಮ ಮಗುವಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪತ್ನಿಯ ತವರು ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ, ಮನೆ ಖಾಲಿಯಿದ್ದದ್ದನ್ನು ನೋಡಿ  ಮನೆ ಹೊಕ್ಕು ಕಳ್ಳತನ ಮಾಡಿದ್ದಾರೆ.

ಈ ವೇಳೆ ದೂರದಾರರಿಗೆ ಮನೆ ಮಾಲೀಕರಿಂದ ಕರೆ ಬಂದಿದೆ. ಮನೆಯ ಮಾಲೀಕರು ಫೋನ್ ಮಾಡಿ, ನಿಮ್ಮ ಮನೆಯ ಬಾಗಿಲು ತೆರೆದಿದೆ ಎಂದು ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣವೇ ಶಿವಮೊಗ್ಗಕ್ಕೆ ವಾಪಸಾದ ದೂರುದಾರರಿಗೆ ಶಾಕ್​ ಎದುರಾಗಿದೆ ಮನೆಗೆ ಬಂದು ನೋಡಿದಾಗ, ಕಳ್ಳರು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದ್ದು. ಅಲ್ಲದೆ, ಬೀರುವಿನ ಬಾಗಿಲನ್ನು ತೆರೆದು, ಅದರ ಮಧ್ಯದ ಲಾಕರ್ ಅನ್ನು ಯಾವುದೋ ಆಯುಧದಿಂದ ಜಖಂಗೊಳಿಸಿ ಒಡೆದಿರುವುದು ಕಂಡುಬಂದಿದೆ. ಬೀರುವಿನಿಂದ ಸುಮಾರು 30 ಗ್ರಾಂ ತೂಕದ ಚಿನ್ನದ ಸರ (ಅಂದಾಜು ಮೌಲ್ಯ ₹ 2 ಲಕ್ಷ) ಮತ್ತು ₹ 80,000/- ನಗದು ಹಣ ಕಳುವಾಗಿರುವುದು ದೃಢಪಟ್ಟಿದೆ.

ಈ ಹಿನ್ನೆಲೆ ಶಿವಮೊಗ್ಗದ ವಿನೋಬನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version