Headlines

ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶವಿಲ್ಲ, ಅವು ಸೇವನೆಗೆ ಸುರಕ್ಷಿತ: FSSAI ಸ್ಪಷ್ಟನೆ

ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶವಿಲ್ಲ, ಅವು ಸೇವನೆಗೆ ಸುರಕ್ಷಿತ: FSSAI ಸ್ಪಷ್ಟನೆ

Eggs do not contain carcinogenic substances, they are safe to consume: FSSAI clarifies

ನವದೆಹಲಿ: ದೇಶದಲ್ಲಿ ಲಭ್ಯವಿರುವ ಮೊಟ್ಟೆಗಳ ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹೇಳಿದೆ.

ಮೊಟ್ಟೆಗಳು ಕ್ಯಾನ್ಸರ್​ ಅಪಾಯನ್ನು ಹೊಂದಿದೆ ಎಂಬ ಇತ್ತೀಚಿನ ಹೇಳಿಕೆಗಳು ತಪ್ಪು ಮಾಹಿತಿಗಳಿಂದ ಕೂಡಿದ್ದು, ಇದಕ್ಕೆ ಯಾವುದೇ ಬೆಂಬಲವಿಲ್ಲ, ಇದು ಅನಗತ್ಯವಾಗಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುವ ಯತ್ನವಾಗಿದೆ ಎಂದು ಎಫ್​ಎಸ್​ಎಸ್​ಎಐ ಸ್ಪಷ್ಟಪಡಿಸಿದೆ.

ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಮೆಟಾಬಾಲೈಟ್‌ಗಳು (ಎಒಜೆಡ್​)ಗಳಂತಹ ಕ್ಯಾನ್ಸರ್​ಕಾರಕ ಪದಾರ್ಥಗಳಿವೆ ಎಂಬ ಮಾಧ್ಯಮ ವರದಿ ಮತ್ತು ಸಾಮಾಜಿನ ಮಾಧ್ಯಮ ಪೋಸ್ಟ್​ಗಳನ್ನು ಅಲ್ಲಗಳೆದಿರುವ ಎಫ್​ಎಸ್​ಎಸ್​​ಎಐ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಮಾಲಿನ್ಯಕಾರಕಗಳು, ವಿಷಗಳು ಮತ್ತು ಉಳಿಕೆಗಳು) ನಿಯಮಗಳು, 2011ರ ಅಡಿ ಕೋಳಿ ಮತ್ತು ಮೊಟ್ಟೆಗಳ ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ನೈಟ್ರೋಫ್ಯೂರಾನ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ನೈಟ್ರೋಫ್ಯೂರಾನ್ ಮೆಟಾಬಾಲೈಟ್‌ಗಳಿಗೆ ನಿಯಂತ್ರಕ ಜಾರಿಗಾಗಿ 1.0 ಯುಜಿ/ಕೆಜಿಯ ಬಾಹ್ಯ ಶೇಷ ಮಿತಿಯನ್ನು (ಇಎಂಆರ್​ಎಲ್​) ನಿಗದಿಪಡಿಸಲಾಗಿದೆ. ಇದನ್ನು ಕನಿಷ್ಠ ಮಿತಿಯಲ್ಲಿ ಸುಧಾರಿತ ಪ್ರಯೋಗಾಲಯ ವಿಧಾನಗಳಿಂದ ಪತ್ತೆ ಮಾಡಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಇದರ ಬಳಕೆಗೆ ಅನುಮತಿಸಲಾಗಿದೆ ಎಂಬ ಸೂಚನೆಯಲ್ಲ ಎಂದರು.

ಇಎಂಆರ್​ಎಲ್​ ಕನಿಷ್ಠ ಪ್ರಮಾಣದ ಅವಶೇಷಗಳ ಪತ್ತೆ ಆಹಾರ ಸುರಕ್ಷತೆಯ ಉಲ್ಲಂಘನೆಯಾಗುವುದಿಲ್ಲ. ಇದು ಯಾವುದೇ ಆರೋಗ್ಯ ಅಪಾಯವನ್ನು ಸೂಚಿಸುವುದಿಲ್ಲ ಎಂದಿದ್ದಾರೆ. ಭಾರತದಲ್ಲಿ ಅಂತಾರಾಷ್ಟ್ರೀಯ ಮಾನದಂಡದೊಂದಿಗೆ ನಿಯಂತ್ರಣಗಳನ್ನು ರೂಪಿಸಲಾಗಿದೆ. ಯುರೋಪಿಯನ್ ದೇಶ ಮತ್ತು ಅಮೆರಿಕ ಈ ನ್ಯೂಟ್ರೋಫ್ಯೂರಾನ್​ ಪ್ರಾಣಿಗಳ ಉತ್ಪಾದಕ ವಸ್ತುಗಳ ಬಳಕೆಯನ್ನು ನಿರ್ಬಂಧಿಸಿದೆ

ದೇಶಾದ್ಯಂತ ಸಂಖ್ಯಾತ್ಮಕ ಮಾನದಂಡಗಳಲ್ಲಿನ ವ್ಯತ್ಯಾಸಗಳು ವಿಶ್ಲೇಷಣಾತ್ಮಕ ಮತ್ತು ನಿಯಂತ್ರಕ ವಿಧಾನಗಳಲ್ಲಿನ ವ್ಯತ್ಯಾಸಗಳನ್ನು ಪ್ರತಿಬಿಂಬಿಸುತ್ತವೆ. ಗ್ರಾಹಕ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸಗಳಲ್ಲಿ ಅಲ್ಲ ಎಂದು ಅದು ಸ್ಪಷ್ಟಪಡಿಸಿದೆ.

Exit mobile version