Headlines

ಶರಾವತಿ ಸಂತ್ರಸ್ತರ ಸಮಸ್ಯೆಗೆ ಬಿಜೆಪಿ‌ ಮೇಲೆ ಗೂಬೆ ಕೂರಿಸಬೇಡಿ – ಮಾಜಿ ಸಚಿವ ಹರತಾಳು ಹಾಲಪ್ಪ

ಶರಾವತಿ ಸಂತ್ರಸ್ತರ ಸಮಸ್ಯೆಗೆ ಬಿಜೆಪಿ‌ ಮೇಲೆ ಗೂಬೆ ಕೂರಿಸಬೇಡಿ – ಮಾಜಿ ಸಚಿವ ಹರತಾಳು ಹಾಲಪ್ಪ

ಸೊರಬ : ಶರಾವತಿ ಸಂತ್ರಸ್ಥರ ಸಮಸ್ಯೆ ಬಿಜೆಪಿಯ ಕೂಸು ಎಂದು ಹೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವಿವೇಕತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್. ಹಾಲಪ್ಪ ಕಿಡಿಕಾರಿದರು.

ಸೋಮವಾರ ಪಟ್ಟಣದಲ್ಲಿ ತಾಲೂಕಿನ ಬಿಜೆಪಿಯ ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಜನಪರ ನೋಟ-ರೈತಪರ ಹೋರಾಟ ಬೃಹತ್ ಪ್ರತಿಭಟನಾ ಮೆರವಣ ಗೆ ಮತ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಶರಾವತಿ ಸಂತ್ರಸ್ಥರ ಸಮಸ್ಯೆ ಹುಟ್ಟಿದ್ದು ೧೯೬೦-೬೫ರಲ್ಲಿ. ೬೭ರಲ್ಲಿ ಎಸ್. ಬಂಗಾರಪ್ಪ ಮತ್ತು ೬೨ರಲ್ಲಿ ಕಾಗೋಡು ತಿಮ್ಮಪ್ಪ ಶಾಸಕರಾಗಿದ್ದರು. ಕಾಗೋಡು ತಿಮ್ಮಪ್ಪ ಸಾಗರ ಕ್ಷೇತ್ರದಿಂದ ೬ ಬಾರಿ ಶಾಸಕರಾಗಿ ೫ ಬಾರಿ ಮಂತ್ರಿಯಾಗಿದ್ದರು. ಹಾಗೆಯೇ ಎಸ್. ಬಂಗಾರಪ್ಪ ಸಹ ೭ ಬಾರಿ ಶಾಸಕರಾಗಿ, ಒಂದು ಬಾರಿ ಮುಖ್ಯಮಂತ್ರಿಯಾಗಿ ೪ ಬಾರಿ ಲೋಕಸಭಾ ಸದಸ್ಯರಾಗಿದ್ದರು. ಅವರಿಂದಲೂ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ವಿಶೇಷವೆಂದರೆ ಈ ಇಬ್ಬರು ಮಹನೀಯರು ಶರಾವತಿ ಸಂತ್ರಸ್ಥರ ಪರವಾಗಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. ಇಷ್ಟೆಲ್ಲಾ ಮಾಹಿತಿ ಮಧು ಬಂಗಾರಪ್ಪ ಅವರಿಗೆ ಇದಿದ್ದರೆ ವಿವೇಕದಿಂದ ಮಾತನಾಡುತ್ತಿದ್ದರು. ಹಾಗಾಗಿ ಶರಾವತಿ ಸಂತ್ರಸ್ಥರ ಸಮಸ್ಯೆ ಕಾಂಗ್ರೆಸ್‌ನಿAದಲೂ ಬಗೆಹರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾನೂನು ತೊಡಕು ಇರುವುದರಿಂದ ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥವಾಗಬೇಕಿದೆ ಎಂದರು.

ಶರಾವತಿ ಸಂತ್ರಸ್ತರ ಸಮಸ್ಯೆ ಸಂಪೂರ್ಣ ಅರಿವು ತಮಗಿದೆ. ಏಕೆಂದರೆ ತಾವೂ ಕೂಡಾ ಸಂತ್ರಸ್ಥರಾಗಿ ಹೊಳೆಕೊಪ್ಪದಲ್ಲಿ ನೆಲೆಸುವಂತಾಗಿತ್ತು.  ತಾಳಗುಪ್ಪ ಗ್ರಾಮದ ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸಿದ್ದರು. ಅದಕ್ಕೆ ಮಧು ಬಂಗಾರಪ್ಪ ಅವರೇ ವಕೀಲರನ್ನು ನೇಮಿಸಿದ್ದರು. ಆದರೆ ಮಂತ್ರಿಯಾಗಿ ಜಮೀನು ಬಿಡಿಸಿಕೊಡಲು ಸಾಧ್ಯವಾಗಿಲ್ಲ ಎಂದರು.

Exit mobile version