Headlines

ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್‌ ಲಾರಿ ಪಲ್ಟಿ – ಬಿದ್ದ ಕೋಳಿಯನ್ನು ಹೊತ್ತೊಯ್ದ ಜನ

ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್‌ ಲಾರಿ ಪಲ್ಟಿ – ಬಿದ್ದ ಕೋಳಿಯನ್ನು ಹೊತ್ತೊಯ್ದ ಜನ

ಭದ್ರಾವತಿ: ಫಾರಂ ಕೋಳಿಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್‌ ಲಾರಿ ಪಲ್ಟಿಯಾಗಿದ್ದ ಪರಿಣಾಮ, ನೂರಾರು ಕೋಳಿಗಳು ರಸ್ತೆಯ ಬದಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮ ದೇವಾಲಯದ ತಿರುವಿನಲ್ಲಿ ಇಂದು ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರಣ ಲಾರಿ ತೀವ್ರವಾಗಿ ಪಲ್ಟಿಯಾದ್ದರಿಂದ ಸ್ಥಳದಲ್ಲೇ ಹಲವಾರು ಕೋಳಿಗಳು ಬಲಿ ಆಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಾರಿ ಆನವೇರಿ ದಿಕ್ಕಿಗೆ ಕೋಳಿಗಳನ್ನು ಹೊತ್ತೊಯ್ದು ಸಾಗುತ್ತಿತ್ತು.

ಅಪಘಾತದ ನಂತರ ರಸ್ತೆಯಲ್ಲಿ ಹೋಗುತ್ತಿದ್ದ ಜನರು ಕೋಳಿಗಳನ್ನು ಕೈಗೆ ಸಿಕ್ಕಂತೆ ಹೊತ್ತೊಯ್ದು ಹೋಗಿದ್ದು, ಕೆಲವೇ ನಿಮಿಷಗಳಲ್ಲಿ ಸ್ಥಳ ಗದ್ದಲದಿಂದ ಕೂಡಿತ್ತು. ಹೊಳೆಹೊನ್ನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version