ಅಂಧ ಮಹಿಳೆಯರ T20 ವಿಶ್ವಕಪ್ ಚಾಂಪಿಯನ್ ಕಾವ್ಯಾ.ವಿ ಅವರಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನ
ಟಿ–20 ಅಂಧರ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮಹಿಳಾ ತಂಡವಾಗಿ ಭಾರತಕ್ಕೆ ಕೀರ್ತಿ ತಂದ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಕೂಡ ಭಾಗಿಯಾಗಿದ್ದರು. ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟ ಈ ಸಾಧನೆಯನ್ನು ಗುರುತಿಸಿ ಹೊಸನಗರ ತಾಲ್ಲೂಕು ತಹಶೀಲ್ದಾರ್ ಭರತ್ ರಾಜ್ ಅವರು ತಾಲ್ಲೂಕು ಆಡಳಿತದ ಪರವಾಗಿ ಕಾವ್ಯಾ ಅವರನ್ನು ಅವರ ಸ್ವಗೃಹವಾದ ಬರುವೆ ಗ್ರಾಮಕ್ಕೆ ಭೇಟಿ ನೀಡಿ ಸನ್ಮಾನಿಸಿದರು.
ಕರ್ನಾಟಕದಿಂದ ಈ ವಿಶ್ವಕಪ್ ಚಾಂಪಿಯನ್‌ಷಿಪ್ ತಂಡದಲ್ಲಿ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದು, ಅದರಲ್ಲಿ ಕಾವ್ಯಾ.ವಿ ಅವರು ಆಲ್–ರೌಂಡರ್ ಆಗಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಪ್ರದರ್ಶನ ತಂಡದ ಗೆಲುವಿಗೆ ಹಿಂಬಾಲಕ ಶಕ್ತಿಯಂತಾಗಿದೆ ಎಂದು ತಾಲ್ಲೂಕು ಆಡಳಿತ ಪ್ರಶಂಸಿಸಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯ ಸುಂದರೇಶ್, ಗ್ರಾಮಾಧಿಕಾರಿ ಮಂಜುನಾಥ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



