POSTMANNEWS

ನೈಜ ಸುದ್ದಿ ನೇರ ಬಿತ್ತರ..

ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ – ಹೆದ್ದಾರಿಪುರದ ಯುವಕ ಸಾವು

ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ – ಹೆದ್ದಾರಿಪುರದ ಯುವಕ ಸಾವು

ರಿಪ್ಪನ್ ಪೇಟೆ : ಇಲ್ಲಿನ ಹರತಾಳು ಸಮೀಪದ ಕೋಡ್ರಿಗೆ ಹೊಳೆಯ ಸಮೀಪದ ತಿರುವೊಂದರಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾದ ಹಿನ್ನೆಲೆಯಲ್ಲಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಹೆದ್ದಾರಿಪುರ ಸಮೀಪದ ಗಿಣಸೆ ಗ್ರಾಮದ ಮಂಜುನಾಥ್ (32) ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಮೃತ ಮಂಜುನಾಥ್ ಹಾಗೂ ಆತನ ಸ್ನೇಹಿತನಾದ ಲೋಹಿತ್ (29) ಹರತಾಳು ಗ್ರಾಮದಿಂದ ಹೆದ್ದಾರಿಪುರಕ್ಕೆ ಹಿರೋ ಹೊಂಡಾ ಸ್ಪೆಂಡರ್ ಬೈಕ್ ನಲ್ಲಿ ಬರುತಿದ್ದಾಗ ಕ್ವಾಡ್ರಿಗಿ ಹೊಳೆ ಸಮೀಪದ ತಿರುವಿನಲ್ಲಿ ಬೈಕ್ ಸವಾರ ಲೋಹಿತ್ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಅಪ್ಪಳಿಸಿದೆ.ಈ ಘಟನೆಯಲ್ಲಿ ಹಿಂಬದಿ‌ ಕುಳಿತಿದ್ದ ಮಂಜುನಾಥ್ ತಲೆಗೆ ತೀವ್ರ ಪೆಟ್ಟಾದ ಹಿನ್ನಲೆಯಲ್ಲಿ ರಕ್ತಸ್ರಾವವಾಗಿತ್ತು.

ಸ್ಥಳೀಯರು ಕೂಡಲೇ ಇಬ್ಬರನ್ನು ಆಂಬುಲೆನ್ಸ್ ಮೂಲಕ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದಾರೆ.ಆದರೆ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಮಂಜುನಾಥ್ ಮೃತಪಟ್ಟಿದ್ದಾರೆ. ಲೋಹಿತ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೃತದೇಹವನ್ನು ಮರಣೋತ್ತರ ಪರೀಕ್ಷಾ ಕೊಠಡಿಯಲ್ಲಿ ಇರಿಸಲಾಗಿದೆ.

ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Exit mobile version