Headlines

ಸ್ವೀಟ್‌ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿ ಜೈಲಿಗೆ ತರುವ ಯತ್ನ – ಯುವಕನ ಬಂಧನ

ಸ್ವೀಟ್‌ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿ ಜೈಲಿಗೆ ತರುವ ಯತ್ನ – ಯುವಕನ ಬಂಧನ

ರಿಪ್ಪನ್ ಪೇಟೆಯಲ್ಲಿ ಸೂರತ್ ಸ್ಯಾರಿ ಡಿಸ್ಕೌಂಟ್ ಮೇಳ – ಭರ್ಜರಿ ಡಿಸ್ಕೌಂಟ್ , 150 ರೂ ಮಾತ್ರ | soorath sarry discount
ಸ್ಥಳ – ಶ್ರೀ ರಾಮಮಂದಿರ ,ಬಿಎಸ್ ಎನ್ ಎಲ್ ಕಛೇರಿ‌ಮುಂಭಾಗ ರಿಪ್ಪನ್ ಪೇಟೆ

ಶಿವಮೊಗ್ಗ: ಖೈದಿಯೊಬ್ಬನಿಗೆ ಸಿಹಿ ನೀಡುವ ನೆಪದಲ್ಲಿ ಗಾಂಜಾ ತರುವ ಯತ್ನ ಮಾಡಿದ ಯುವಕನ ಕೃತ್ಯ ಬಹಿರಂಗಗೊಂಡಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದ ತಪಾಸಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಸೋಮಿನಕೊಪ್ಪದ ನಿವಾಸಿ ಸೈಯದ್ ವಾಸೀಂ (25) ಬಂಧಿತನಾಗಿದ್ದಾನೆ. ಆತ ಸ್ಥಳೀಯ ಬೇಕರಿಯಿಂದ ತಂದಿದ್ದ ಸ್ವೀಟ್‌ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿಕೊಂಡು ಖೈದಿ ಮೆಹಬೂಬ್ ಖಾನ್‌ಗೆ ತಲುಪಿಸಲು ಬಂದಿದ್ದ ಎಂದು ತಿಳಿದುಬಂದಿದೆ.

ಜೈಲು ಪ್ರವೇಶದ್ವಾರದಲ್ಲಿ ನಿಯೋಜಿತರಾಗಿದ್ದ KSISF ಭದ್ರತಾ ಸಿಬ್ಬಂದಿ ರೂಢಿಯಾದ ತಪಾಸಣೆ ವೇಳೆ ಬಾಕ್ಸ್‌ನಲ್ಲಿ ಗಾಂಜಾ ಪತ್ತೆ ಹಚ್ಚಿದರು. ತಕ್ಷಣವೇ ವಾಸೀಂನನ್ನು ವಶಕ್ಕೆ ಪಡೆಯಲಾಯಿತು.

ಈ ಕುರಿತು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಪ್ರೀತಿ ಅವರು ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Exit mobile version