Headlines

ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್‌ ದಾಳಿ – ಇಬ್ಬರ ಬಂಧನ

ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್‌ ದಾಳಿ – ಇಬ್ಬರ ಬಂಧನ

ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಅಕ್ರಮ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಟ್ಕಾ ಅಡ್ಡೆಗಳ ಮೇಲೆ ದಾಳಿ

ಶಿರಾಳಕೊಪ್ಪ ಪೊಲೀಸರು ಕಳೆದ ರಾತ್ರಿ ಹೆಚ್‌.ಕೆ. ರಸ್ತೆಯ ಹಳೆ ಪೆಟ್ರೋಲ್ ಬಂಕ್ ಸರ್ಕಲ್ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನ ಸರ್ಕಲ್ ಪ್ರದೇಶಗಳಲ್ಲಿ ದಾಳಿ ನಡೆಸಿದರು. ಈ ಸ್ಥಳಗಳಲ್ಲಿ ಮಟ್ಕಾ ಬರವಣಿಗೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಯಿತು.

ಇಬ್ಬರ ಬಂಧನ ಮತ್ತು ವಸ್ತುಗಳ ವಶ

ಸಬ್ ಇನ್ಸ್‌ಪೆಕ್ಟ‌ರ್ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದ ತಂಡವು ರಿಯಾಜ್ ಮತ್ತು ವೀರಭದ್ರಪ್ಪ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ 5,000 ನಗದು ಹಾಗೂ ಮಟ್ಕಾ ಬರವಣಿಗೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Exit mobile version