Headlines

ಸಾಗರದಲ್ಲಿ ಗೋ ಕಳ್ಳರ ಅಟ್ಟಹಾಸ : ಐಷಾರಾಮಿ ಕಾರಿನಲ್ಲಿ ಹಸುವಿನ ಕಳವು!

ಸಾಗರದಲ್ಲಿ ಗೋ ಕಳ್ಳರ ಅಟ್ಟಹಾಸ : ಐಷಾರಾಮಿ ಕಾರಿನಲ್ಲಿ ಹಸುವಿನ ಕಳವು!

ಸಾಗರ: ಸಾಗರ ನಗರದಲ್ಲಿ ಗೋ ಕಳ್ಳರ ಹಾವಳಿ ಮತ್ತೆ ಶುರುವಾಗಿದ್ದು, ನವೆಂಬರ್ 7ರ ಮಧ್ಯರಾತ್ರಿ ಐಷಾರಾಮಿ ಕಾರಿನಲ್ಲಿ ಹಸುವನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯರಾತ್ರಿ 2:30ರ ಸುಮಾರಿಗೆ ಸಾಗರದ ಅಣಲೆಕೊಪ್ಪ ಟ್ಯಾಕ್ಸ್ ಆಫೀಸ್ ರಸ್ತೆಯ ಪಾರ್ಕ್‌ ಮುಂಭಾಗದಲ್ಲಿ ಮಲಗಿದ್ದ ಹಸುವನ್ನು ಕಳ್ಳರು ಕಳವು ಮಾಡಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಹಾಗೂ ದೂರು

ನಂಬ‌ರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಫಾರ್ಚುನ‌ರ್ ಕಾರಿನಲ್ಲಿ ಗೋ ಕಳ್ಳರು ಹಸುವನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ವಿಡಿಯೋ ತುಣುಕಿನ ಆಧಾರದ ಮೇಲೆ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಸುದೀಂದ್ರ ಅವರು ಸಾಗರ ಟೌನ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಗೋ ಕಳ್ಳರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.

Exit mobile version