ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಿಳಿಕಿ ಯುವಕರ ತಂಡದ ಕಮಾಲ್
ರಿಪ್ಪನ್‌ಪೇಟೆ: ಕೆ. ಹೊಸಕೊಪ್ಪದಲ್ಲಿ ನಡೆದ ಡಾ. ಪುನೀತ್ ರಾಜ್‌ಕುಮಾರ್ ಪುತ್ಥಳಿ ವಾರ್ಷಿಕೋತ್ಸವ ಹಾಗೂ 5ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಹಗ್ಗ-ಜಗ್ಗಾಟ ಸ್ಪರ್ಧೆ ಜರುಗಿತು. ನಿಯಮಿತ 8 ಸದಸ್ಯರ ತಂಡ ಮತ್ತು 600 ಕೆ.ಜಿ ಗರಿಷ್ಠ ತೂಕ ನಿಯಮದೊಂದಿಗೆ ನಡೆದ ಪೈಪೋಟಿಯಲ್ಲಿ ಬಿಳಿಕಿ ಗ್ರಾಮದ ಯುವಕರು ತೃತೀಯ ಸ್ಥಾನ ಗಳಿಸಿದರು.
ಸಾಗರ ತಾಲೂಕಿನ ಹೊಸಕೊಪ್ಪದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಅದ್ವಿತೀಯ ಅಮೋಘ ಆಟದ ಮೂಲಕ ಜನ ಮೆಚ್ಚುಗೆ ಗಳಿಸಿದ್ದಾರೆ.
ಸ್ಪರ್ಧೆಯಲ್ಲಿ ಹಲವು ತಂಡಗಳು ಭಾಗವಹಿಸಿದ್ದು, ನಿಯಮಿತ 8 ಸದಸ್ಯರ ತಂಡ ಹಾಗೂ ಗರಿಷ್ಠ 600 ಕೆ.ಜಿ ತೂಕದ ವ್ಯಾಪ್ತಿ ಒಳಗೊಂಡ ನಿಯಮಗಳ ಮಧ್ಯೆ ಕಠಿಣ ಪೈಪೋಟಿ ನಡೆಯಿತು. ಮೂರು ಸುತ್ತಿನ ಮಾದರಿಯಲ್ಲಿ ನಡೆದ ಪಂದ್ಯಗಳು ಪ್ರೇಕ್ಷಕರಲ್ಲಿ ಉತ್ಸಾಹ ಹುಟ್ಟಿಸಿತು.
ವಿಜೇತ ತಂಡದಲ್ಲಿ ಮಧು ಬಿಳಿಕಿ, ವೇಣುಗೋಪಾಲ, ವಿಶ್ವನಾಥ, ನಾಗಭೂಷಣ, ಶಶಿಕುಮಾರ, ರಾಜ, ಅಣ್ಣಪ್ಪ, ಸುದೀಪ, ದಿಲೀಪ್, ಶರತ್, ಸುಭಾಷ್ ಮತ್ತು ರವೀಶ ಸೇರಿದಂತೆ ಯುವಕರು ಭಾಗವಹಿಸಿದ್ದರು.



