POSTMANNEWS

ನೈಜ ಸುದ್ದಿ ನೇರ ಬಿತ್ತರ..

ಉಕ್ಕಡ ಮಗುಚಿ ನೀರುಪಾಲಾಗಿದ್ದ ಯುವಕನ ಶವ ಪತ್ತೆ – ಮುಳುಗು ತಜ್ಞ ಈಶ್ವರ್ ಮಲ್ಪೆ ನೇತ್ರತ್ವದ ಕಾರ್ಯಾಚರಣೆ

ಹೊಸನಗರ : ಹೊಳೆ ದಾಟುವಾಗ ಉಕ್ಕಡ ಮಗುಚಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಮುಳುಗು ತಜ್ಞ ಈ‍ಶ್ವರ್‌ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ.

ಉಕ್ಕಡ ಮಗುಚಿ ಪೂರ್ಣೇಶ್‌ (22) ನಾಪತ್ತೆಯಾಗಿದ್ದರು. ಇವತ್ತು ಬೆಳಗ್ಗೆ ಮೃತದೇಹ ಹೊರ ತೆಗೆಯಲಾಗಿದೆ. ಮೃತದೇಹ ಕಂಡು ಪೂರ್ಣೇಶ್‌ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಹೊಸನಗರ ತಾಲೂಕು ಬಂಟೋಡಿಯಲ್ಲಿ ಉಕ್ಕಡ ಮಗುಚಿ ಪೂರ್ಣೇಶ್ ನಾಪತ್ತೆಯಾಗಿದ್ದರು. ಶರತ್‌ ಮತ್ತು ರಂಜನ್‌ ಪಾರಾಗಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಕತ್ತಲಾದ್ದರಿಂದ ಶನಿವಾರ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇಂದು ಬೆಳಗ್ಗೆ ಈಶ್ವರ್‌ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

About The Author

Exit mobile version