Headlines

ರಿಪ್ಪನ್‌ಪೇಟೆಯಲ್ಲಿ ವಿಜೃಂಭಣೆಯ ವಿಶ್ವಕರ್ಮ ಜಯಂತಿ ಆಚರಣೆ

ರಿಪ್ಪನ್‌ಪೇಟೆಯಲ್ಲಿ ವಿಜೃಂಭಣೆಯ ವಿಶ್ವಕರ್ಮ ಜಯಂತಿ ಆಚರಣೆ

ರಿಪ್ಪನ್‌ಪೇಟೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭಕ್ಕೆ ಹಲವು ಗಣ್ಯರು ಹಾಜರಿದ್ದರೂ, ಪ್ರಮುಖವಾಗಿ ಇಬ್ಬರು ಅತಿಥಿಗಳು ಮಾತ್ರ ಮಾತನಾಡಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಉಪನ್ಯಾಸಕರಾದ ಡಾ ಗಣೇಶ್ ಆಚಾರ್ ವಿಶ್ವಕರ್ಮ ಜಯಂತಿ ಶ್ರಮಜೀವಿಗಳ ಹಬ್ಬವಾಗಿದ್ದು, ಸಮಾಜದ ನೈತಿಕ ಶಕ್ತಿ ಹಾಗೂ ಅಭಿವೃದ್ಧಿಯ ಪ್ರತೀಕವಾಗಿದೆ ಎಂದು ಹೇಳಿದರು. “ಬಡಗಿ, ಕಮ್ಮಾರರು, ಕಾರ್ಮಿಕರು ತಮ್ಮ ಪರಿಶ್ರಮದಿಂದಲೇ ಸಮಾಜಕ್ಕೆ ಆಧಾರವಾಗಿದ್ದಾರೆ. ಅವರ ಶ್ರಮವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಾಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್ ಆಚಾರ್ ಬಿ, ಸಮಾಜದ ಒಗ್ಗಟ್ಟು ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು. “ಯುವಕರು ಕೌಶಲ್ಯಾಭಿವೃದ್ಧಿ ಹಾಗೂ ವಿದ್ಯಾಭ್ಯಾಸವನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜದ ನೈಜ ಪ್ರಗತಿ ಸಾಧ್ಯ” ಎಂದು ಅವರು ತಿಳಿಸಿದರು. ಗ್ರಾಮೀಣ ಅಭಿವೃದ್ದಿಯಲ್ಲಿ ವಿಶ್ವಕರ್ಮ ಸಮಾಜವು ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದೂ ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಂಘದ ಅಧ್ಯಕ್ಷ ಪುಟ್ಟಚಾರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಾಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್ ಆಚಾರ್ ಬಿ, ಸರ್ ಎಂವಿ ಸರಕಾರಿ ವಿಜ್ಞಾನ ಪಿಯು ಕಾಲೇಜು ಭದ್ರಾವತಿಯ ರಸಾಯನಶಾಸ್ತ್ರ ಪ್ರಾಧ್ಯಾಪಕರಾದ ಡಾ. ಗಣೇಶ ಆಚಾರ್, ಬಡಗಿ ಮತ್ತು ಕಮ್ಮಾರರ ಕುಶಲ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾದ ಆರ್.ಆರ್. ಕೃಷ್ಣಮೂರ್ತಿ, ಹಾಗೂ ವಿರಾಟ್ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ರಿಪ್ಪನ್‌ಪೇಟೆಯ ಅಧ್ಯಕ್ಷರಾದ ಆರ್.ಎ. ಮಂಜುನಾಥ ಆಚಾರ್ , ವಿಶ್ವಕರ್ಮ ಸಮಾಜದ ಉಪಾಧ್ಯಕ್ಷರಾದ ಉದಯಾಚಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವಿಶ್ವನಾಥ್ ಆಚಾರ್, ಶ್ರೀ ವಿಶ್ವಕರ್ಮ ಸಮಾಜದ ನಿರ್ದೇಶಕರಾದ ಮಂಜುನಾಥ ಆಚಾರ್ ಗುಡುಗೋಡು, ಗೃಹ ರಕ್ಷಕ ದಳ ಘಟಕಧಿಕಾರಿಯಾದ ಟಿ. ಶಶಿಧರ ಆಚಾರ್ಯ, ಟೈಲರ್ ನರಸಿಂಹಾಚಾರ್ ಹಾಗೂ ಗ್ರಾಮ ಮೊಕ್ತೆಸರರಾದ ಶ್ರೀಧರಾಚಾರ್ ಉಪಸ್ಥಿತರಿದ್ದರು.

ಸಮಾಜದ ಅನೇಕ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಶ್ವಕರ್ಮ ಜಯಂತಿಯನ್ನು ಒಗ್ಗಟ್ಟಿನಿಂದ ಹಾಗೂ ಉತ್ಸಾಹದಿಂದ ಸಾರ್ಥಕಗೊಳಿಸಿದರು.

Exit mobile version