ರಿಪ್ಪನ್ ಪೇಟೆಯಲ್ಲಿ ಋಗ್ ಉಪಾಕರ್ಮ – ವಿರಾಟ್ ವಿಶ್ವಕರ್ಮ ಸಂಘದ ನೇತೃತ್ವದಲ್ಲಿ ಜನಿವಾರ ಧಾರಣೆ ಹಾಗೂ ಯಜ್ಞ ಸಮಾರಂಭ
ರಿಪ್ಪನ್ ಪೇಟೆ : ಪಟ್ಟಣದ ವಿಶ್ವಕರ್ಮ ಸಮಾಜದವರಿಂದ, ವಿರಾಟ್ ವಿಶ್ವಕರ್ಮ ಸಂಘದ ಸಹಭಾಗಿತ್ವದಲ್ಲಿ ಋಗ್ ಉಪಾಕರ್ಮದ ಪ್ರಯುಕ್ತ ಭವ್ಯವಾದ ಜನಿವಾರ ಧಾರಣೆ ಹಾಗೂ ವಿಶ್ವಕರ್ಮ ದೇವರ ಯಜ್ಞ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮವು ಸಮಾಜ ಬಾಂಧವರ ಸಕ್ರಿಯ ಸಹಭಾಗಿತ್ವದಲ್ಲಿ, ಕುಲಾಪುರೋಹಿತರಾದ ಚೇತನ್ ಪುರೋಹಿತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಮಂಜುನಾಥ್ ಆಚಾರ್ಯ (ಗ್ಯಾರೇಜ್), ಮಂಜುನಾಥ್ ಆಚಾರ್ ಆರ್.ಏ., ಶ್ರೀಧರ್ ಆಚಾರ್ಯ ಕೆಂಚನಲ್, ಕೃಷ್ಣ ಆಚಾರ್ಯ, ಶಶಿಧರ್ ಆಚಾರ್, ರಾಜೇಂದ್ರ ಆಚಾರ್ (ಗ್ಯಾರೇಜ್), ರವಿ ಆಚಾರ್ಯ, ಪ್ರಭಾಕರ್ ಆಚಾರ್, ಶ್ರೀಕಾಂತ್ ಆಚಾರ್ ಕೆಂಚನಲ್, ರಾಘವೇಂದ್ರ ಆಚಾರ್ ಕೆಂಚನಲ್, ಹರೀಶ್ ಆಚಾರ್ಯ, ಗಿರೀಶ್ ಆಚಾರ್, ಮಹೇಶ್ ಆಚಾರ್ಯ, ಮನೋಹರ್ ಆಚಾರ್ಯ, ಪ್ರವೀಣ್ ಆಚಾರ್ಯ, ಕಾರ್ತಿಕ್ ಆಚಾರ್ಯ ಆರ್.ಏನ್., ಅನಿಲ್ ಆಚಾರ್, ಮಂಜುನಾಥ್ ಆಚಾರ್ ದೊಡ್ಡಿನ ಕೊಪ್ಪ ಸೇರಿದಂತೆ ಇನ್ನೂ ಹಲವು ಸಮಾಜದ ಯುವಕರು ಭಾಗವಹಿಸಿದರು.