Headlines

ಮಹಿಳೆಯೊಂದಿಗೆ ಇದ್ದಾಗಲೇ ಸಿಕ್ಕಿಬಿದ್ದ ಸ್ವಾಮೀಜಿ: ಮಠದಿಂದಲೇ ಹೊರಹಾಕಿದ ಗ್ರಾಮಸ್ಥರು

ಮಹಿಳೆಯೊಂದಿಗೆ ಇದ್ದಾಗಲೇ ಸಿಕ್ಕಿಬಿದ್ದ ಸ್ವಾಮೀಜಿ: ಮಠದಿಂದಲೇ ಹೊರಹಾಕಿದ ಗ್ರಾಮಸ್ಥರು

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯಿಂದ ಅನಾಚಾರ ಆರೋಪ ಕೇಳಿಬಂದಿದೆ. ಸ್ವಾಮೀಜಿ ವಿರುದ್ದ ಅಕ್ರಮ ಸಂಬಂಧ ಆರೋಪ ಕೇಳಿ ಬಂದಿದ್ದು ಗ್ರಾಮಸ್ಥರು ಸ್ವಾಮೀಜಿಯನ್ನೇ  ಮಠದಿಂದ ಹೊರಹಾಕಿದ್ದಾರೆ.

ಪ್ರಸಿದ್ದ ದೇವಸ್ಥಾನ ಎಂದು ಅಡವಿಸಿದ್ದೇಶ್ವರ ಮಠ ಹೆಸರು ವಾಸಿಯಾಗಿದ್ದು, ಅಡವಿಸಿದ್ದರಾಮ ಸ್ವಾಮೀಜಿ ಮೇಲೆ ರಾಸಲೀಲೆ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಸ್ವಾಮೀಜಿಯನ್ನು ಗ್ರಾಮಸ್ಥರು ಮಠದಿಂದ ಹೊರ ಹಾಕಿದ್ದಾರೆ.

ಬಿಜಾಪುರ ಜಿಲ್ಲೆಯ ತಾಳಿಕೋಟೆಯ ಗ್ರಾಮದಿಂದ ತನ್ನ ಮಗಳೊಂದಿಗೆ ಮಠಕ್ಕೆ ಮಹಿಳೆಯೊಬ್ಬರು ಆಗಮಿಸಿದ್ದರು. ತಡರಾತ್ರಿ ಮಹಿಳೆ ಸ್ವಾಮೀಜಿ ಕೊಠಡಿಯಲ್ಲಿ ಇದ್ದಿದ್ದನ್ನು ಗಮನಿಸಿದ ಸ್ಥಳೀಯರು ಈ ವಿಚಾರವನ್ನು ಗ್ರಾಮದ ಮುಖಂಡರಿಗೆ ತಿಳಿಸಿದ್ದಾರೆ.

ತಕ್ಷಣ ಮಠಕ್ಕೆ ಆಗಮಿಸಿ ಸ್ವಾಮೀಜಿಯನ್ನು ಹಾಗೂ ಮಹಿಳೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತಡರಾತ್ರಿಯೇ ಆ ಮಹಿಳೆ ಮತ್ತು ಮಗಳನ್ನು ಸಾಂತ್ವಾನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದು ನಂತರ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಿ ಸ್ವಾಮೀಜಿಯನ್ನ ಮಠದಿಂದ ಹೊರಹಾಕಿದ್ದಾರೆ. 

ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version