January 11, 2026

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1.75 ಲಕ್ಷ ರೂ ಕಳ್ಳತನ

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1.75 ಲಕ್ಷ ರೂ ಕಳ್ಳತನ

ಶಿವಮೊಗ್ಗ : ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ನಿವಾಸಿ ಪಾಲಾಕ್ಷಮ್ಮ  ಅವರ  ಮಗಳು ಅಡಮಾನವಿಟ್ಟಿದ್ದ ಒಡವೆಗಳನ್ನು ಬಿಡಿಸಿಕೊಳ್ಳಲು ಹಣ ಬೇಕೆಂದು ಹೇಳಿದ್ದರಿಂದ ತಮ್ಮ ಗ್ರಾಮದ ಬಳಿ ಇರುವ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ೧,೭೫,೦೦೦ ಹಣವನ್ನು ಬಿಡಿಸಿಕೊಂಡು ಜೂನ್ ೧೪ರಂದು ಎನ್‌ಆರ್ ಪುರದಲ್ಲಿರುವ ಅವಳ ಮನೆಗೆ ಹೊರಟಿದ್ದರು.

ಕಡೂರಿನಿಂದ ಶಿವಮೊಗ್ಗಕ್ಕೆ ಬಂದು ನಂತರ ಶೃಂಗೇರಿ ಬಸ್ ಹತ್ತಲು ಮುಂದಾಗಿದ್ದರು.ಮಧ್ಯಾಹ್ನ ೩:೧೫ ರ ವೇಳೆ  ಶಿವಮೊಗ್ಗ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಶೃಂಗೇರಿ ಬಸ್ ಹತ್ತಲು ಹೋದಾಗ ಈ ಘಟನೆ ಸಂಭವಿಸಿದೆ. ಬಸ್ನಲ್ಲಿ ಸೀಟು ಹಿಡಿಯಲು ಮಹಿಳೆ ತಮ್ಮ ವ್ಯಾನಿಟಿ ಬ್ಯಾಗ್ ಹಾಕಿದ್ದರು. ನಂತರ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ೧,೭೫,೦೦೦ ಹಣದ ಕಟ್ಟು ಇರಲಿಲ್ಲ. ತಕ್ಷಣ ಗಾಬರಿಯಾಗಿ ಬಸ್ಟ್ಯಾಂಡ್‌ನಲ್ಲಿ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿಲ್ಲ. ಬಸ್ ಹತ್ತುವ  ಸಮಯದಲ್ಲಿ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ೧,೭೫,೦೦೦ ಕಳ್ಳತನವಾಗಿದೆ ಎಂದು ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

About The Author

Leave a Reply

Your email address will not be published. Required fields are marked *

Exit mobile version