POSTMANNEWS

ನೈಜ ಸುದ್ದಿ ನೇರ ಬಿತ್ತರ..

ಕಾಂತಾರ ಚಾಪ್ಟರ್-1 ಚಿತ್ರ ತಂಡಕ್ಕೆ ನೋಟೀಸ್ ಜಾರಿ ಮಾಡಿದ ಹೊಸನಗರ ತಹಶೀಲ್ದಾರ್ ರಶ್ಮಿ .! ಕಾರಣವೇನು!?

ಕಾಂತಾರ ಚಾಪ್ಟರ್-1 ಚಿತ್ರ ತಂಡಕ್ಕೆ ನೋಟೀಸ್ ಜಾರಿ ಮಾಡಿದ ಹೊಸನಗರ ತಹಶೀಲ್ದಾರ್ ರಶ್ಮಿ .! ಕಾರಣವೇನು!?

ಶಿವಮೊಗ್ಗ: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ -1ರ ಚಿತ್ರೀಕರಣಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಚಿತ್ರೀಕರಣದ ವೇಳೆಯಲ್ಲಿ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದ ಘಟನೆ ಸಂಬಂಧ 3 ದಿನಗಳಲ್ಲಿ ಉತ್ತರಿಸುವಂತೆ ಹೊಸನಗರ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ.

ಈ ಸಂಬಂಧ ಹೊಸನಗರ ತಹಶೀಲ್ದಾರ್ ರಶ್ಮಿ ಅವರು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದು, ದಿನಾಂಕ ಜೂನ್ 15ರಂದು ನಡೆದ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದಿರುವ ಘಟನೆ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಿದೆ.

ಕಾಂತಾರ ಚಿತ್ರತಂಡವು ಸಿನಿಮಾ ಚಿತ್ರೀಕರಣಕ್ಕಾಗಿ ವಿವಿಧ ಇಲಾಖೆಗಳಿಂದ ಪಡೆದ ಅನುಮತಿಯ ವಿವರಗಳು ಹಾಗೂ ದಾಖಲಾತಿಗಳನ್ನು ತಹಸಿಲ್ದಾರರಿಗೆ ಸಲ್ಲಿಸಬೇಕಿದೆ. ಈ ಕುರಿತು ತಾಲೂಕು ಹಾಗೂ ಜಿಲ್ಲಾ ಆಡಳಿತಕ್ಕೆ ಯಾವುದೇ ಮಾಹಿತಿ ನೀಡದೇ ಚಿತ್ರೀಕರಣ ನಡೆಸಿರುವ ಆರೋಪ ಚಿತ್ರತಂಡದ ಮೇಲೆ ಮೂಡಿದೆ.

About The Author

Leave a Reply

Your email address will not be published. Required fields are marked *

Exit mobile version