RIPPONPETE | ಭಾರಿ ಮಳೆಗೆ ಕೊಟ್ಟಿಗೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು
ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯ ಗವಟೂರು ವಾರ್ಡ್ 1 ರ ಕೆರೆಹಳ್ಳಿಯಲ್ಲಿ ಭಾರಿ ಮಳೆಗೆ ದನದ ಕೊಟ್ಟಿಗೆ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡಲಾಗಿದೆ.
ಕೆರೆಹಳ್ಳಿ ಗ್ರಾಮದ ಮಂಜೋಜಿರಾವ್ ಎಂಬುವವರ ದನದ ಕೊಟ್ಟಿಗೆ ಭಾರಿ ಗಾಳಿ ಮಳೆಗೆ ಸಂಪೂರ್ಣ ಕುಸಿತ ಕಂಡಿತ್ತು ಈ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ನಂತರ ಮಾತನಾಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಹೊಸನಗರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಲ್ಲಿ ವ್ಯಾಪಕ ಹಾನಿಯಾಗಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯ ಮೇರೆಗೆ ಬಡ ಸಂತ್ರಸ್ಥರನ್ನು ಗುರುತಿಸಿ ನೈತಿಕ ಸ್ಥೈರ್ಯ ನೀಡುವ ಸಲುವಾಗಿ ಶಾಸಕರ ಪರ ಆರ್ಥಿಕ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಚಂದ್ರೇಶ್ , ಸುಂದರೇಶ್ , ಆಸೀಫ಼್ ಭಾಷಾ , ನಿರೂಪ್ ಕುಮಾರ್ , ಪ್ರಕಾಶ್ ಪಾಲೇಕರ್ ,ಗಣಪತಿ ಗವಟೂರು ಹಾಗೂ ರಾಜು ಗೌಡ ಇದ್ದರು.