ಮೂರು ಜಿಲ್ಲೆಗಳ ಕೋಮುಗಲಭೆ ತಡೆಗೆ ಕಾರ್ಯಪಡೆ ರಚಿಸಿ ಸರಕಾರ ಆದೇಶ
ಶಿವಮೊಗ್ಗ ನಗರ ಸೇರಿದಂತೆ ದಕ್ಷಿಣ ಕನ್ನಡ ಉಡುಪಿಯಲ್ಲಿ ಕೋಮುಗಲಭೆಗೆ ಸಂಭಂಧಿಸಿದಂತೆ ವಿಶೇಷ ಕಾರ್ಯಪಡೆ ರಚಿಸಿದೆ.
ಕರ್ನಾಟಕ ಈಗಾಗಲೇ ನಕ್ಸಲ್ ಮುಕ್ತ ರಾಜ್ಯ ಆಗಿರೋ ಹಿನ್ನೆಲೆಯಲ್ಲಿ ಆಂಟಿ ನಕ್ಸಲ್ ಫೋರ್ಸ್ ವಿಸರ್ಜನೆ ಮಾಡುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಮಂಗಳೂರು ಭಾಗದಲ್ಲಿ ಕೋಮು ಗಲಭೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂಟಿ ನಕ್ಸಲ್ ಫೋರ್ಸ್ ವಿಸರ್ಜನೆ ಮಾಡದೆ ಅದನ್ನೇ ವಿಶೇಷ ಕಾರ್ಯಪಡೆ ಎಂದು ರಚನೆ ಮಾಡಿ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ನೈತಿಕ ಪೊಲಿಸಗಿರಿ, ದ್ವೇಷ ಭಾಷಣ, ಕೋಮು ಸಂಬಂಧಿತ ಗಲಭೆ ನಿರ್ಬಂಧಕ್ಕೆ ಪ್ಲಾನ್ ಮಾಡಲಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಮಂಗಳೂರು ಘಟನೆಯನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಪ್ರತಿ ಬಾರಿ ಈ ರೀತಿ ಆದ್ರೆ ಕಣ್ಣು ಮುಚ್ಚಿ ಕೂರೋಕೆ ಆಗೋದಿಲ್ಲ. ಕಳೆದ ಭಾರಿ ಹತ್ಯೆಯಾದಾಗ ನಾನು ಅಲ್ಲಿಗೆ ಹೋಗಿದ್ದೆ. ಆಗ ಆ್ಯಂಟಿ ಕಮ್ಯುನಲ್ ವಿಂಗ್ ಮಾಡುವ ಬಗ್ಗೆ ಹೇಳಿದ್ದೆ. ಈಗ ಅದಕ್ಕೆ ಒಂದು ಸರ್ಕಾರಿ ಆದೇಶ ಕೂಡ ಹೊರಡಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಲ್ಲಿ ದಿನೇ ದಿನೇ ಉದ್ವಿಗ್ನ ಪರಿಸ್ಥಿತಿ ನಿರ್ಮಾವಾಗುತ್ತಿರುವುದರಿಂದ ತಕ್ಷಣ ಆ್ಯಂಟಿ ಕಮ್ಯುನಲ್ ವಿಂಗ್ ಜಾರಿ ಮಾಡುವಂತೆ ಸರ್ಕಾರ ಆದೇಶ ನೀಡಿದೆ ಎಂದಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ರಾಜ್ಯ ಸರ್ಕಾರ ಇಂತಹ ಘಟನೆಗಳನ್ನ ಹತ್ತಿಕ್ಕದೇ ಸುಮ್ಮನೇ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಶೇಷ ಕಾರ್ಯಪಡೆ ರಚನೆ, ಡಿಐಜಿ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ವಿಶೇಷ ಕಾರ್ಯಪಡೆ ರಚಿಸಿ ಸರ್ಕಾರ ಕ್ರಮ ರಚಿಸಿ ಆದೇಶಿದೆ

Leave a Reply
Cancel reply