January 11, 2026

HOSANAGARA | ಕಾಶ್ಮೀರದಲ್ಲಿ ಉಗ್ರರ ದಾಳಿ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

HOSANAGARA | ಕಾಶ್ಮೀರದಲ್ಲಿ ಉಗ್ರರ ದಾಳಿ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಮ್ನ್ ನ ಬೈಸರನ್ ವ್ಯಾಲಿಯಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ದಾಳಿಯನ್ನು ಹೊಸನಗರ ತಾಲೂಕಿನ ವಿವಿಧ ಹಿಂದುಪರ ಸಂಘಟನೆ ಗಳು ತೀವ್ರವಾಗಿ ಖಂಡಿಸಿದ್ದಲ್ಲದೆ ಭಯೋತ್ಪಾದಕ ಸಂಘಟನೆಗಳನ್ನು ಮೂಲದಿಂದ ನಿರ್ನಾಮ ಮಾಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಗು ಮುನ್ನ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ದೇವಾನಂದ್ ವಿಶ್ವಕ್ಕೆ  ಶಾಂತಿಯ ಸಂದೇಶವನ್ನು ನೀಡುತ್ತಿರುವಂತಹ ಭಾರತಕ್ಕೆ ಭಯೋತ್ಪಾದಕರು ಆಘಾತವನ್ನು ನೀಡಿದ್ದಾರೆ ಈ ಕೃತ್ಯವನ್ನ ನಮ್ಮ ಸೈನಿಕರು ಸವಾಲಾಗಿ ಸ್ವೀಕರಿಸಿ ಈ ಕೃತ್ಯಕ್ಕೆ ದಿಟ್ಟ ಉತ್ತರವನ್ನು ನೀಡಬೇಕು ಈ ಭಯೋತ್ಪಾದಕರ ನಿರ್ಣಾಮಕ್ಕೆ ಸೈನಿಕರಿಗೆ ಸರ್ಕಾರ ಸಂಪೂರ್ಣವಾದ ಅಧಿಕಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಈ ಒಂದು ಕೃತ್ಯವನ್ನು ದೇಶದ ಮುಸ್ಲಿಂ ಸಂಘಟನೆಗಳಾಗಲಿ ಮುಖಂಡರಾಗಲಿ ವಿರೋಧಿಸದೇ ಇರುವುದು ಖಂಡನಿಯ ಈ ದೇಶದ ಪರವಾಗಿ ಮುಸಲ್ಮಾನರು ಇರುವುದು ನಿಜವಾಗಿದ್ದರೆ ಮೊದಲು ಅವರು ಈ ಕೃತಿಯನ್ನು ವಿರೋಧಿಸಬೇಕಿತ್ತು ಎಂದರು.ಬಳಿಕ ಉಪ ತಹಸಿಲ್ದಾರ್ ರಾಕೇಶ್ ಅವರಿಗೆ ಮನವಿಯನ್ನು ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಸುಬ್ರಹ್ಮಣ್ಯ ಮತ್ತಿ ಮನೆ, ಬಿಜೆಪಿ ಜಿಲ್ಲಾ
ಒಬಿಸಿ ಮೋರ್ಚ ಅಧ್ಯಕ್ಷರಾದ ಎಂ ಎನ್ ಸುಧಾಕರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಮುಖಂಡರಾದ ಗಣಪತಿ ಬೆಳಗೋಡು, ಸುಧೀಂದ್ರ ಪಂಡಿತ್, ರಮೇಶ್, ಮೋಹನ್ ಮಂಡನಿ, ಅಭಿಲಾಶ್ ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು…

About The Author

Leave a Reply

Your email address will not be published. Required fields are marked *

Exit mobile version