POSTMANNEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್ ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ – ವಿವಿಧೆಡೆ ಭಾರಿ ಅನಾಹುತ

ರಿಪ್ಪನ್ ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ – ವಿವಿಧೆಡೆ ಭಾರಿ ಅನಾಹುತ

ರಿಪ್ಪನ್ ಪೇಟೆ : ದಿನದಿಂದ ದಿನಕ್ಕೆ ಏರುತ್ತಿದ್ದ ತಾಪಮಾನದಿಂದ ಕಂಗೆಟ್ಟಿದ್ದ ಹೊಸನಗರ ತಾಲೂಕಿನ ಜನತೆಗೆ ಇಂದು ಮಧ್ಯಾಹ್ನ ಸುರಿದ ದಿಢೀರ್ ಮಳೆ ಭಾರೀ ಸಮಾಧಾನ ತಂದಿದೆ. ವಾತಾವರಣ ತಂಪಾಗಿದೆ. ಬೀಸಿದ ಗಾಳಿಗೆ ಸುಮಾರು ವಿದ್ಯುತ್ ಕಂಬಳು ಮುರಿದು ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ. ಅಲ್ಲಲ್ಲಿ ಮರಗಳು ಮುರಿದು ಬಿದ್ದಿದೆ.ಇನ್ನೂ ಮನೆ ಮೇಲೆ ಮರಗಳು ಬಿದ್ದಿವೆ.

ಮಧ್ಯಾಹ್ನ ಸುಮಾರು 1.00 ಗಂಟೆಯಿಂದ 1-45 ರವರೆಗೆ ಮಳೆ ಗುಡುಗು-ಸಿಡಿಲು, ಗಾಳಿ ಆಲಿಕಲ್ಲು ಸಹಿತ ಭಾರಿ‌ ಮಳೆ  ಸುರಿಯತೊಡಗಿತ್ತು.

ಪಟ್ಟಣದ ವ್ಯಾಪ್ತಿಯ ಗವಟೂರು , ಕೆದಲಗುಡ್ಡೆ ಗ್ರಾಮಗಳಲ್ಲಿ  ಮನೆ ಮೇಲೆ ಮರ ಬಿದ್ದು ಭಾರಿ ಅನಾಹುತವಾಗಿರುವ ಬಗ್ಗೆ ವರದಿಯಾಗಿದೆ. ಇನ್ನೂ ರಿಪ್ಪನ್ ಪೇಟೆ ಸುತ್ತಮುತ್ತಲಿನ  ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ.

ಕಳೆದ ಹದಿನೈದು ದಿನಗಳಿಂದೀಚೆಗೆ ವಿಪರೀತ ಸೆಖೆಯ ವಾತಾವರಣ ಇತ್ತು.34 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವಿತ್ತು. ಜನರು ಮಳೆಗೆ ಕಾತರಿಸುತ್ತಿದ್ದರು. ಇಂದು ಸುರಿದ ಮಳೆಯಿಂದಾಗಿ ತಂಪಾಗಿದೆ.

ಇನ್ನೂ ಭಾರಿ ಮಳೆಯಿಂದ ಹಲವಾರು ಕಡೆ ಅನಾಹುತಗಳು ನಡೆದಿರುವ ಬಗ್ಗೆ ವರದಿಯಾಗಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.

About The Author

Leave a Reply

Your email address will not be published. Required fields are marked *

Exit mobile version