January 11, 2026

RIPPONPETE | ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಶ್ರದ್ದಾಂಜಲಿ

RIPPONPETE | ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಶ್ರದ್ದಾಂಜಲಿ

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ದೇಶಪ್ರೆಮ ದಿನ ಹಾಗೂ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ಕರಾಳ ದಿನ ಆಚರಿಸಲಾಯಿತು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು ಮೇಣದಬತ್ತಿ ಬೆಳಗಿಸಿ ಅವರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು. ವಿಶ್ವ ದೇಶಪ್ರೆಮಿಗಳಿಗೆ ಜಯವಾಗಲಿ, ಭಾರತ್ ಮಾತಾಕಿ ಜೈ ವಂದೇ ಮಾತರಂ ,ವೀರ ಯೋಧರು ಅಮರರಾಗಲಿ ,ಸೆನಿಕರ ದಿನಾಚರಣೆ ಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಲಾಯಿತು.

ಹಿಂದೂ ಜಾಗರಣ ವೇದಿಕೆಯ ತಾಲೂಕ್ ಪ್ರಧಾನ ಕಾರ್ಯದರ್ಶಿ ದೆವರಾಜ್ ಕೆರೆಹಳ್ಳಿ ಮಾತನಾಡಿ, 2019ರ ಇದೇ ದಿನ ಅಂದರೆ ಫೆಬ್ರುವರಿ 14 ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಜನರು ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿದ್ದರೆ ಭಾರತಕ್ಕೆ ಮಾತ್ರ ಅಂದು ಕರಾಳ ದಿನವಾಗಿತ್ತು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಅಂದು ನಡೆದ ಭೀಕರ ಭಯೋತ್ಪಾದಕ ದಾಳಿಗೆ 40 ಮಂದಿ ಸಿಆರ್‌ಪಿಎಫ್ ಯೋಧರು ಪ್ರಾಣ ತೆತ್ತಿದ್ದರು. ಅಂದಿನಿಂದ ಭಾರತದಲ್ಲಿ ಫೆಬ್ರುವರಿ 14 ಅನ್ನು ಬ್ಲ್ಯಾಕ್ ಡೇ ಅಥವಾ ಕರಾಳ ದಿನ ಎಂದು ಆಚರಿಸಲಾಗುತ್ತಿದೆ.

2019ರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಫೆಬ್ರುವರಿ 14 ಅನ್ನು ಕರಾಳ ದಿನ ಎಂದು ಆಚರಿಸಲಾಗುತ್ತದೆ. ಅಂದು ಮಧ್ಯಾಹ್ನ 3.15ರ ಸುಮಾರಿಗೆ ಉಗ್ರರು ಎಸಗಿದ ದುಷ್ಕೃತ್ಯಕ್ಕೆ ಭಾರತೀಯ ಸೈನಿಕರು ತಮ್ಮ ಉಸಿರು ಚೆಲ್ಲಿದ್ದರು. ಈ ದಾಳಿಯ ದಿನವು ಭೀಕರ ದಿನವಾಗಿ ಇತಿಹಾಸದ ಪುಟ ಸೇರಿತು ಎಂದರು.

ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ,ಗ್ರಾಪಂ ಸದಸ್ಯ ಸುಂದರೇಶ್  ,ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎನ್ ಸತೀಶ್ , ಕಗ್ಗಲಿ ಲಿಂಗಪ್ಪ , ಭಾಸ್ಕರ್ , ಶೈಲಾ ಆರ್ ಪ್ರಭು ,ಗಣೇಶ್ ಕಾರಗೋಡು , ಗುರುರಾಜ್ ,ಶ್ರೀನಿವಾಸ್ ಆಚಾರ್ , ತೀರ್ಥೇಶ್ ,ಬೆಳಂದೂರು ಸ್ವಾಮಿ ಗೌಡ ಹಾಗೂ ಇನ್ನಿತರರಿದ್ದರು.

About The Author

Leave a Reply

Your email address will not be published. Required fields are marked *

Exit mobile version