January 11, 2026

ಕಬ್ಬಿಣದ ಫ್ಯಾಕ್ಟರಿಯಲ್ಲಿ ಲಕ್ಷಾಂತರ ರೂ ಮೌಲ್ಯದ ಕಬ್ಬಿಣ ಕಳ್ಳತನ : 24 ಗಂಟೆಯಲ್ಲಿ ಮಾಲು ಸಮೇತ ಆರೋಪಿಯ ಬಂಧನ

ಕಬ್ಬಿಣದ ಫ್ಯಾಕ್ಟರಿಯಲ್ಲಿ ಲಕ್ಷಾಂತರ ರೂ ಮೌಲ್ಯದ ಕಬ್ಬಿಣ ಕಳ್ಳತನ : 24 ಗಂಟೆಯಲ್ಲಿ ಕಳ್ಳನ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು

ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿಣದ ಫ್ಯಾಕ್ಟರಿಯಲ್ಲಿ ನಡೆದಿದ್ದ ಲಕ್ಷಾಂತರ ರೂ ಮೌಲ್ಯದ ಕಬ್ಬಿಣ ಕಳ್ಳತನ ಪ್ರಕರಣವನ್ನು ಪಿಎಸ್‌ಐ ನಿಂಗರಾಜ್ ಕೆ ವೈ ಹಾಗೂ ನೇತ್ರತ್ವದಲ್ಲಿ ಕೇವಲ 24 ಗಂಟೆಯಲ್ಲಿ ಬೇಧಿಸಿ ಆರೋಪಿಯನ್ನು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿ ಮೆಹಬೂಬ್ ಭಾಷಾ ಎಂಬಾತನನ್ನು ಬಂಧಿಸಿ ಕಳ್ಳತನಗೈದಿದ್ದ ಮಾಲನ್ನು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು ..!??

ಬಂಕಾಪುರದ ವಿಐಎನ್ ಪಿ ಕಬ್ಬಿಣದ ಫ್ಯಾಕ್ಟರಿಯಲ್ಲಿ ಯಾರೋ ಖದೀಮರು 3.76 ಸಾವಿರ ರೂ ಮೌಲ್ಯದ 6 ಕ್ವಿಂಟಾಲ್ ಕಬ್ಬಿಣವನ್ನು ಕಳ್ಳತನ ಮಾಡಿರುವ ಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ಡಾ: ಅಂಶುಕುಮಾರ ಐ.ಪಿ.ಎಸ್ , L Y ಶಿರಕೊಳ ಹೆಚ್ಚುವರಿ ಎಸ್.ಪಿ, ಗುರುಶಾಂತಪ್ಪ ಕೆವಿ, ಡಿ.ಎಸ್.ಪಿ , ಸುರೇಶ ಕುಂಬಾರ ಸಿಪಿಐ ಮಾರ್ಗದರ್ಶನದಲ್ಲಿ ಪಿಎಸ್‌ಐ ನಿಂಗರಾಜ ಕೆ ವೈ ನೇತೃತ್ವದಲ್ಲಿ ಆರೋಪಿ ಮೆಹಬೂಬ ಭಾಷಾ ನನ್ನು ಕೇವಲ 24 ಗಂಟೆಯಲ್ಲಿ ಬಂಧಿಸಿದ್ದಾರೆ.

ಕೇವಲ 24 ಗಂಟೆಗಳಲ್ಲಿ ಆರೋಪಿತರನ್ನು ಪತ್ತೆಹಚ್ಚಿದ ಪಿಎಸ್‌ಐ ನಿಂಗರಾಜ್ ಕೆ ವೈ ಹಾಗೂ ಪತ್ತೆ ಕಾರ್ಯದಲ್ಲಿ ತೊಡಗಿದ ತಂಡದ ಎಎಸೈ ರಜನಿ ಹೆಡ್ ಕಾನ್ಸ್ ಟೇಬಲ್ ಎ ಕೆ ನದಾಪ, ಹಾಗೂ ಸಿಬ್ಬಂದಿಗಳಾದ ವೆಂಕಟೇಶ್ ಲಮಾಣಿ , ಗೊವಿಂದ ಲಮಾಣಿ, ಬೀರಪ್ಪ ಕಳ್ಳಿಮನಿ, ಶಂಕರ ಗೊಂದಳಿ , ನಿಂಗಪ್ಪ ಪೂಜಾರ , ಶೀಲ್ಪಾ ಕ್ಯಾಸನಕೇರಿ, ಕರಬಸಪ್ಪ ಹಾವಣಗಿ , ಜಬೀವುಲಾ ದೊಡ್ಡಮನಿ ರವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *

Exit mobile version