Headlines

RIPPONPETE | ಕಾರು ಹಾಗೂ ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿ – ಮೂವರಿಗೆ ಗಂಭೀರ ಗಾಯ

RIPPONPETE | ಕಾರು ಹಾಗೂ ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿ – ಮೂವರಿಗೆ ಗಂಭೀರ ಗಾಯ ರಿಪ್ಪನ್‌ಪೇಟೆ : ಇಲ್ಲಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಬುಕ್ಕಿವರೆ ಗ್ರಾಮದ ಬಳಿಯಲ್ಲಿ ಕಾರು ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಲವರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಬುಕ್ಕಿವರೆ ಸಮೀಪ ತಿರುವಿನಲ್ಲಿ ಶಿವಮೊಗ್ಗ ಮೂಲದ ಕುಟುಂಬದವರು ಪ್ರಯಾಣಿಸುತಿದ್ದ ಕಾರು ಹಾಗೂ ಬೊಲೆರೋ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಈ ಘಟನೆಯಲ್ಲಿ ಕಾರಿನ ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ…

Read More

ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮ*ಹತ್ಯೆ

BENGALURU, 15 ಅಕ್ಟೋಬರ್ :  ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಸಮೀಪದ ಯಡಿಯೂರಪ್ಪ ನಗರದ ಮನೆಯೊಂದರಲ್ಲಿ ಇಬ್ಬರು ಪುಟ್ಟ ಮಕ್ಕಳು ಹಾಗೂ ಮಕ್ಕಳ ತಂದೆ-ತಾಯಿ ಸೇರಿ ನಾಲ್ವರ ಶವಗಳು ಸೋಮವಾರ ಪತ್ತೆಯಾಗಿವೆ. ಪತಿ ಅವಿನಾಶ್ (33), ಪತ್ನಿ ಮಮತಾ(30), ಮಕ್ಕಳಾದ ಅಧೀಯ(5) ಮತ್ತು ಅನಯಾ (3) ಮೃತರು. ‘ಕಲಬುರಗಿಯ ಕಮಲಾ‍‍ಪುರದ ತಾಂಡಾದ ದಂಪತಿ ಆರು ವರ್ಷಗಳಿಂದ ಯಡಿಯೂರಪ್ಪ ನಗರದಲ್ಲಿ ವಾಸವಾಗಿದ್ದರು. ಅವಿನಾಶ್ ಅವರು ಕ್ಯಾಬ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮಮತಾ ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು’…

Read More

ನುಚ್ಚು ನೂರಾಯ್ತು ಅಭಿಮಾನಿಗಳ ಕನಸು – ಸಿಗಲಿಲ್ಲ ದರ್ಶನ್ ಗೆ ಜಾಮೀನು | ದಾಸನಿಗೆ ಜೈಲೇ ಗತಿ

ನುಚ್ಚು ನೂರಾಯ್ತು ಅಭಿಮಾನಿಗಳ ಕನಸು – ಸಿಗಲಿಲ್ಲ ದರ್ಶನ್ ಗೆ ಜಾಮೀನು | ದಾಸನಿಗೆ ಜೈಲೇ ಗತಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿ 115 ದಿನಗಳೇ ಕಳೆದಿದೆ,ಈ ಕೇಸ್ನಲ್ಲಿ ಎ2 ಆರೋಪಿ ಆಗಿರುವ ದಾಸ ಬೇಲ್ ಪಡೆದು ಹೊರಬರುವ ದಿನಕ್ಕಾಗಿ ಅಭಿಮಾನಿಗಳು ಕಾಯ್ತಾ ಇದ್ರು, ಆದ್ರೆ ಮತ್ತೆ ದರ್ಶನ್ ಜಾಮೀನು ಕನಸು ನುಚ್ಚು ನೂರಾಗಿದೆ. ಕಳೆದ ವಾರ ದರ್ಶನ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಎಚ್‌ ಕೋರ್ಟ್‌ ಪೂರ್ಣಗೊಳಿಸಿತ್ತು. ಇಂದು…

Read More

ಪೂಜೆ ಮಾಡಿ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳುವು | ದೂರು ದಾಖಲು

ಪೂಜೆ ಮಾಡಿ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳುವು | ದೂರು ದಾಖಲು ಶಿವಮೊಗ್ಗ :ವಿಜಯ ದಶಮಿಯಂದು ಪೂಜೆ ಸಲ್ಲಿಸಿ ಊರಿನ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ ಕಳುವಾಗಿರುವ ಘಟನೆ ಆಯನೂರು – ಹಾರನಹಳ್ಳಿ ರಸ್ತೆಯ ನರಸಿಂಹ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ. ಚನ್ನಹಳ್ಳಿಯ ರೈತ ಪಾಲಾಕ್ಷಪ್ಪ ಎಂಬುವವರು ತನ್ನ ಟ್ರಾಕ್ಟರ್‌ಗೆ ಪೂಜೆ ಸಲ್ಲಿಸಿ ದೇವಸ್ಥಾನದ ಮುಂಭಾಗದಲ್ಲಿಯೇ ರಾತ್ರಿ ನಿಲ್ಲಿಸಿ ಬೆಳಗ್ಗೆ 8 ಹೊತ್ತಿಗೆ ದೇಗುಲದ ಬಳಿ ಹೋದಾಗ ಟ್ರಾಕ್ಟರ್‌ ಕಾಣಿಸಲಿಲ್ಲ.ಎಲ್ಲಾ ಕಡೆ ಹುಡುಕಾಡಿದ ಟ್ರ್ಯಾಕ್ಟರ್ ಮಾಲೀಕ ಪಾಲಾಕ್ಷಪ್ಪ…

Read More

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ ರಿಪ್ಪನ್‌ಪೇಟೆ : ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಕ್ರಮಕ್ಕೆ ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕರಾದ ಅರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಅಂದಿನ ಘಟನೆಯಲ್ಲಿ ಹಲವು ಪೋಲಿಸ ಸಿಬ್ಬಂದಿಗಳ ಪ್ರಾಣಕ್ಕೆ ಕುತ್ತು ಬಂದಿತ್ತು, ಘಟನೆಯಲ್ಲಿ ಭಾಗವಹಿಸಿದ್ದ 160…

Read More

ಭತ್ತದ ಗದ್ದೆಯಲ್ಲಿ ಕಂದುಜಿಗಿ ಹುಳು ಬಾಧೆಗೆ ನೂರಾರು ಎಕರೆ ಬೆಳೆ ನಾಶ – ಈ ಹುಳುವಿನ ಹತೋಟಿ ಕ್ರಮ ಏನೇನು.!? ಇಲ್ಲಿದೆ ಸಂಪೂರ್ಣ ಮಾಹಿತಿ..!

ಕಳೆದ ಬೇಸಿಗೆಯಲ್ಲಿ ಸೈನಿಕ ಹುಳುಬಾಧೆ, ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಜೋಳ ಬೆಳೆ ಕಳೆದುಕೊಂಡ ರೈತರೀಗ ಕಂದುಜಿಗಿ ಹುಳು ಬಾಧೆಯಿಂದ ಭತ್ತದ ಬೆಳೆಯನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ. ಭತ್ತದ ಬೆಳೆಯಿಂದ ಲಾಭ ಕಡಿಮೆ. ಹೀಗಾಗಿ ಹೆಚ್ಚು ಬೆಲೆಯ ಕೀಟನಾಶಕ ಸಿಂಪಡಿಸುವುದು ಕಷ್ಟಸಾಧ್ಯ. ಸಾಮಾನ್ಯ ಕೀಟನಾಶಕಗಳನ್ನು ಸಿಂಪಡಿಸುವುರಿಂದ ಹತೋಟಿ ಸಾಧ್ಯವಿಲ್ಲ. ಹೀಗಾಗಿ ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ಪರಿಣಾಮಕಾರಿ ಗುಣಮಟ್ಟದ ಕೀಟನಾಶಕವನ್ನು ಒದಗಿಸಿ ರೈತರ ಹಿತ ಕಾಯಬೇಕಿದೆ. ಶಿವಮೊಗ್ಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆಗೆ ಕಂದುಜಿಗಿ ಹುಳು ಬಾಧೆ…

Read More

ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ – ಪ್ರಯಾಣಿಕರ ಪರದಾಟ

ದಸರಾ ಎಫೆಕ್ಟ್ – ಆಗುಂಬೆ ಘಾಟಿಯಲ್ಲಿ ಸಂಪೂರ್ಣ ಜಾಮ್! ತೀರ್ಥಹಳ್ಳಿ : ದಸರಾ ಹಬ್ಬವನ್ನು ಮುಗಿಸಿ ಪ್ರತಿಯೊಬ್ಬರು ಊರುಗಳಿಗೆ ಹೊರಟ ಕಾರಣ ವಾಹನಗಳ ದಟ್ಟನೆ ಜಾಸ್ತಿಯಾಗಿರುವುದರಿಂದಸಂಪೂರ್ಣ ಟ್ರಾಫಿಕ್ ಜಾಮ್ ಆಗಿರುವ ಘಟನೆ ಆಗುಂಬೆ ಘಾಟಿಯಲ್ಲಿ ನಡೆದಿದೆ. ಮಂಗಳೂರು, ಉಡುಪಿ ಭಾಗದಿಂದ ತೀರ್ಥಹಳ್ಳಿ ಮೂಲಕ ಶಿವಮೊಗ್ಗ ಬೆಂಗಳೂರಿಗೆ ದಸರಾ ರಜೆ ಮುಗಿಸಿ ಹೊರಟ ಕಾರಣ ಘಾಟಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನಗಳು ಕಳೆದ ಅರ್ಧ ಗಂಟೆಯಿಂದಲೂ ಹೆಚ್ಚು ಕಾಲದಿಂದ ನಿಂತಲ್ಲಿಯೇ ನಿಂತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ….

Read More

ಕಾರು ಅಪಘಾತ – ಚಾಲಕ ಸ್ಥಳದಲ್ಲಿಯೇ ಸಾವು

ಕಾರು ಅಪಘಾತ – ಚಾಲಕ ಸ್ಥಳದಲ್ಲಿಯೇ ಸಾವು ಶಿವಮೊಗ್ಗ : ಕುಂಸಿ ಗ್ರಾಮದ ಕೆರೆ ಕೋಡಿ ಬಳಿ ಕಾರು ಪಲ್ಟಿಯಾಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ನಿವಾಸಿ ಚಂದನ್ ಮೃತ ದುರ್ದೈವಿ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಕುಂಸಿ ಕೆರೆ ಕೋಡಿ ಬಳಿ ಕಾರು ಪಲ್ಟಿಯಾಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮಡಿಕೇರಿ ಮೂಲದ ನಂದನ್(22), ಕೋಲಾರ ಮೂಲದ ಕೋದಂಡ(18), ಮಂಡ್ಯ ಮೂಲದ ಯೋಗೇಶ್ (24) ಹಾಗೂ…

Read More

SHIVAMOGGA | ವೈಭವದ ದಸರಾ ಮೆರವಣಿಗೆ

SHIVAMOGGA | ವೈಭವದ ದಸರಾ ಮೆರವಣಿಗೆ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ. ಸಕ್ರೆಬೈಲು ಬಿಡಾರದ ಆನೆ ಸಾಗರ ನೇತೃತ್ವದಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಶಿವಪ್ಪ ನಾಯಕ ಅರಮನೆ ಸಮೀಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಸುಮಾರು 450 ಕೆಜಿ ತೂಕದ ಬೆಳ್ಳಿಯ ಅಂಬಾರಿ ಹೊತ್ತು ಸಾಗರ ಆನೆ ಸಾಗಿದೆ. ಸಚಿವ ಮಧು ಬಂಗಾರಪ್ಪ ದಂಪತಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ…

Read More

ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ ಶಿವಮೊಗ್ಗ ಜಿಲ್ಲೆಯ ಯಡವಾಲ ಸಮೀಪ ಕೊಂಡಜ್ಜಿ ಹಳ್ಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಚಿನ್ನಿಕಟ್ಟೆ ನಿವಾಸಿ ಇಕ್ಬಾಲ್(40) ಎಂಬ ವ್ಯಕ್ತಿ ಹಳ್ಳ ದಾಟುತ್ತಿದ್ದಾಗ ಬೈಕ್‌ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದನು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು.ಇದೀಗ ಶವ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ ತುಸು ದೂರದಲ್ಲಿ ಮೃತದೇಹ ಸಿಕ್ಕಿದೆ. ಘಟನೆ ನಡೆದ ದಿನ ಸ್ಥಳಕ್ಕೆ ಸಂಸದ ಬಿ ವೈ ರಾಘವೇಂದ್ರ ಭೇಟಿ…

Read More
Exit mobile version