January 11, 2026

ಅಡಿಕೆ ಕಳ್ಳತನಗೈದಿದ್ದ ದಂಪತಿಗಳ ಬಂಧನ

ಅಡಿಕೆ ಕಳ್ಳತನಗೈದಿದ್ದ ದಂಪತಿಗಳ ಬಂಧನ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗದ ಲಕ್ಕಿನಕೊಪ್ಪದ ದಂಪತಿ ಅರೆಸ್ಟ್‌ ಆಗಿದ್ದಾರೆ.

ನರಸಿಂಹರಾಜಪುರ ತಾಲ್ಲೂಕಿನಲ್ಲಿ ನಡೆದ ಅಡಕೆ ಕಳ್ಳತನ ಪ್ರಕರಣ ಸಂಬಂದ ಪೊಲೀಸರು ತನಿಖೆ ನಡೆಸಿ ಶಿವಮೊಗ್ಗದ ಲಕ್ಕಿನಕೊಪ್ಪ ನಿವಾಸಿ ಸಾದಿಕ್‌ ಹಾಗೂ ಸಲ್ಮಾ ಎಂಬವರನ್ನ ಬಂಧಿಸಿದ್ದಾರೆ.

ಎನ್‌ಆರ್‌ಪುರದ ಮುತ್ತಿನಕೊಪ್ಪದಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣದ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಸಂಶಯದ ಮೇರೆಗೆ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆಡೆಯಲ್ಲಿ ಕಳ್ಳತನ ನಡೆಸಿರುವ ಬಗ್ಗೆ ಗೊತ್ತಾಗಿದೆ.

ಸದ್ಯ  ಆರೋಪಿಗಳಿಂದ 2 ಕ್ವಿಂಟಾಲ್‌ ಅಡಿಕೆ ಹಾಗೂ ಮಾರುತಿ ಜೆನ್‌ ಕಾರನ್ನ ಜಪ್ತಿ ಮಾಡಲಾಗಿದೆ.

ಈ ಸಂಬಂಧ ಪೊಲೀಸ್‌ ಪ್ರಕಟಣೆ ನೀಡಲಾಗಿದ್ದು, ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಬಿ.ಎಸ್.ನಿರಂಜನಗೌಡ, ಜ್ಯೋತಿ, ಸಿಬ್ಬಂದಿ ಪರಮೇಶ್, ಬಿನು, ಮಧು, ಅಮಿತ್ ಚೌಗಲೆ, ದೇವರಾಜ್, ಕೌಶಿಕ್, ನವೀನ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು..

About The Author

Leave a Reply

Your email address will not be published. Required fields are marked *

Exit mobile version